ರಾಜೇಂದ್ರಸಿಂಗ್ ಅವರಿಗೆ ಮಹಾ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ.
ಗದಗ ತೊಂಟದಾರ್ಯ ಮಠದ ಕಾರ್ಯಕ್ರಮದಲ್ಲಿ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಯನ್ನು ಹೆಸರಾಂತ ಜಲಸಂರಕರಾದ ರಾಜೇಂದ್ರಸಿಂಗ್ ಅವರಿಗೆ ಪ್ರದಾನ ಮಾಡಲಾಯಿತು. ತೋಮಟದ ಸಿದ್ಧರಾಮ ಶ್ರೀಗಳು, ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ, ಜೆ. ಕೆ. ಜಮಾದಾರ, ಎಸ್. ಎಸ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಮೋಹನ ಲಿಂಬಿಕಾಯಿ, ಜಯಶ್ರಿ ಹಳ್ಳಿಕೇರಿ, ಡಾ. ಉಮೇಶ ಪುರದ, ಡಾ. ರಮೇಶ ಕಲ್ಲನಗೌಡರ ಇತರರು ಇದ್ದರು.
ಪ್ರತಿಯೊಂದು ಜೀವರಾಶಿಗೂ ನೀರು ಬಹಳ ಅವಶ್ಯ: ತೋಂಟದ ಸಿದ್ಧರಾಮ ಶ್ರೀಗಳು.
ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಯೊಂದು ಜೀವರಾಶಿಗೂ ನೀರು ಅತ್ಯಂತ ಅವಶ್ಯಕ. ಇಂತಹ ಅಮೂಲ್ಯವಾದ ಜೀವ ಜಲವನ್ನು ರಸಿ ಜಾಗೃತಿ ಮೂಡಿಸುತ್ತಿರುವ ಜಲತ ರಾಜೇಂದ್ರಸಿಂಗ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವದಲ್ಲಿ ಮಾಡನಾಡಿದ ಶ್ರೀಗಳು, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ನೀರಿನ ಸದ್ಬಳಕೆ ಕುರಿತು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ರಾಜೇಂದ್ರಸಿಂಗ್ ಅವರ ಪರಿಶ್ರಮ ಅಪಾರವಾಗಿದೆ. ಈ ಕಾರ್ಯಕ್ಕೆ ಅನೇಕ ಗೌರವಗಳು ಅವರನ್ನು ಹುಡುಕಿ ಬಂದಿವೆ. ಅವುಗಳಲ್ಲಿ ಲೆ$್ಮಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನ ಕೊಡಮಾಡಿದ ಮಹಾ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಲಭಿಸಿದೆ. ಅವರಿಗೆ ಈ ರೀತಿಯ ಇನ್ನಷ್ಟು ಕೆಲಸ ಮಾಡಲು ಶಕ್ತಿಯನ್ನು ನೀಡಿದೆ ಎಂದರು.
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕಾನೂನು ಸಚಿವ ಎಚ್. ಕೆ. ಪಾಟೀಲ, ರಾಜೇಂದ್ರಸಿಂಗ್ ಅವರು ಮನುಕುಲಕ್ಕೆ ಅಪಾರವಾದ ಕಾರ್ಯವನ್ನು ಮಾಡಿದ್ದಾರೆ. ಗುಜರಾತಿನ ಅನೇಕ ಬತ್ತಿ ಹೋದ ನದಿಗಳನ್ನು ಅವರು ತರುಣ ಭಾರತ ಸಂದ ಮೂಲಕ ಪುನಶ್ಚೇತನ ಗೊಳಿಸಿದ್ದಾರೆ. ನಮ್ಮ ಗದಗ ಪರಿಸರದ ಈಚಲಹಳ್ಳದ ಪುನಶ್ಚೇತನಗೊಳಿಸಿದ್ದು ಅವರ ಕಾರ್ಯಕ್ಕೆ ಹಿಡಿದ ಕನ್ನಡಿ ಎಂದರು.
ಮಾಜಿ ಶಾಸಕ ಡಿ. ಆರ್. ಪಾಟೀಲ ಮಾತನಾಡಿ, ರಾಜೇಂದ್ರಸಿಂಗ್ ಅವರು ಅನೇಕ ಸವಾಲುಗಳನ್ನು ಎದುರಿಸಿ, ಕುಟುಂಬವನ್ನು ಮರೆತು ಸಮಾಜವೇ ತಮ್ಮ ಕುಟುಂಬವೆಂದು ಬಗೆದು ಸಮಾಜಪರ ಕಾರ್ಯಕ್ಕೆ ತಮ್ಮ ಬದುಕನ್ನು ಸಮಪಿರ್ಸಿದ್ದಾರೆ. ಇಂಥವರೇ ಸಮಾಜದ ನಿಜವಾದ ಆಸ್ತಿ ಎಂದು ಮಾತನಾಡಿದರು.
ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಯನ್ನು ಹೆಸರಾಂತ ಜಲಸಂರಕ ರಾಜೇಂದ್ರಸಿಂಗ್ ಅವರಿಗೆ ಪ್ರದಾನ ಮಾಡಲಾಯಿತು.
ಜೆ. ಕೆ. ಜಮಾದಾರ, ಎಸ್. ಎಸ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಮೋಹನ ಲಿಂಬಿಕಾಯಿ, ಜಯಶ್ರಿ ಹಳ್ಳಿಕೇರಿ, ಡಾ. ಉಮೇಶ ಪುರದ, ಡಾ. ರಮೇಶ ಕಲ್ಲನಗೌಡರ ಇತರರು ಇದ್ದರು.