ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಪದಾಧಿಕಾರಿಗಳಿಗೆ ಸೇವಾ ಹಸ್ತಾಂತರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರು ಮತ್ತು ಅವರ ವಚನಗಳಲ್ಲಿ ಶಾಂತಿ, ಬದುಕು, ಪರಸ್ಪರ ಗೌರವ, ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ನಾನು ಎನ್ನುವ ಬದಲಾಗಿ ನಾವು ಎನ್ನುವುದನ್ನು ಕಲಿಸಿದ್ದಾರೆ. ಸಕಲ ಜೀವಿಗಳ ಕ್ಷೇಮ ಬಯಸಿದ್ದಾರೆ. ಇಂತಹ ಶರಣ ತತ್ವಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪಸರಿಸಿದ್ದರೆ ಇಂದು ಯುದ್ಧಗಳು ನಡೆಯುತ್ತಿರಲಿಲ್ಲ. ಯುದ್ದವನ್ನು ಕೈಬಿಟ್ಟು ಮಾನವೀಯವ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದು ನಾನು ಯದ್ದೋನ್ಮಾದ ದೇಶಗಳಿಗೆ ಮನವಿ ಮಾಡುತ್ತೇನೆ ಎಂದರು.