ಪ್ರತಿಭೆ ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಸಾಧ್ಯ: ತೋಂಟದ ಶ್ರೀಗಳು

   ಗದಗ ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ತೋಂಟದ ಸಿದ್ದರಾಮ ಶ್ರೀಗಳು ಉದ್ಘಾಟಿಸಿದರು. ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಡಿ.ಆರ್​. ಪಾಟೀಲ, ಮಹಾಂತೇಶ ಕವಟಗಿಮಠ ಇತರರು ಇದ್ದರು.
ಗದಗ ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ತೋಂಟದ ಸಿದ್ದರಾಮ ಶ್ರೀಗಳು ಉದ್ಘಾಟಿಸಿದರು. ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಡಿ.ಆರ್​. ಪಾಟೀಲ, ಮಹಾಂತೇಶ ಕವಟಗಿಮಠ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಭೆ ಮತ್ತು ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಒಲಿದು ಬರುತ್ತವೆ. ಜೀವನದಲ್ಲಿ ಯಶಸ್ಸು ಪಡೆಯಲು ಉದ್ಯೋಗ ಅವಶ್ಯ. ಇಂತಹ ಉದ್ಯೋಗ ಇರುವ ವ್ಯಕ್ತಿಗಳಿಗೆ ವಿಜಯಲಕ್ಷಿ$್ಮಯೂ ಒಲಿದು ಬರುತ್ತಾಳೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ನಗರದ ಬಸವೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೃಹತ್​ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಭೆ ಮತ್ತು ಕೌಶಲ್ಯಗಳು ವಿದ್ಯಾವಂತ ಅಭ್ಯಥಿರ್ಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಠಿಸುತ್ತವೆ. ಸತ್ಯ, ನ್ಯಾಯನೀತಿ, ಚಾರಿತ್ರ್ಯವುಳ್ಳ ವ್ಯಕ್ತಿಗಳಲ್ಲಿ ಕರ್ತವ್ಯ ಪ್ರಜ್ಞೆ ಅಗತ್ಯ. ಈ ಎಲ್ಲ ಗುಣಗಳುಳ್ಳ ಅಭ್ಯಥಿರ್ಗಳು ಜೀವನದಲ್ಲಿ ಉತ್ತಮ ಉದ್ಯೋಗ, ಉತ್ತಮ ಜೀವನ ಹೊಂದಲು ಸಾಧ್ಯವಿದೆ. ಅಂತಹ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ನಿಮ್ಮದಾಗಲಿ ಎಂದರು.
ಶಾಸಕ ಸಿ.ಸಿ.ಪಾಟೀಲ ಮಾತನಾಡಿ ವಿದ್ಯಾಥಿರ್ಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತಿದೆ ಜೊತೆಗೆ ತಮ್ಮ ಮಕ್ಕಳನ್ನು ಕಲಿಸಬೇಕೆಂಬ ಹಂಬಲ ಪಾಲಕರಲ್ಲಿಯೂ ಇದೆ. ಹೀಗಾಗಿ ಶೈಣಿಕ ೇತ್ರದಲ್ಲಿ ಸುಧಾರಣೆ ಕಾಣುತ್ತಿದೆ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅವಶ್ಯ ಹಾಗೂ ಅನಿವಾರ್ಯ. ಇತ್ತಿಚೆಗೆ ಪ್ರಕಟಗೊಂಡ ಪಿಯುಸಿ ಲಿತಾಂಶವು ಸಾಕಷ್ಟು ತೃಪ್ತಿಯನ್ನು ತಂದಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಮೇಳದಿಂದಾಗಿ ಉದ್ಯೋಗ ಲಭ್ಯವಾಗಿ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ರಾಜಕಾರಣಿಗಳ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಎಂಬ ಊಹೆ ಈಗ ಮುಗಿದ ಅಧ್ಯಾಯವಾಗಿದೆ. ಸ್ವಯಂ ಪ್ರತಿಭೆ, ಕೌಶಲ್ಯವಿದ್ದವರನ್ನು ಉದ್ಯೋಗಗಳು ಹುಡುಕಿಕೊಂಡು ಬರುತ್ತವೆ. ಈ ನಿಟ್ಟಿನಲ್ಲಿ ಚೇಂಬರ್​ ಒಳ್ಳೆ ಕೆಲಸ ಮಾಡಿದೆ ಎಂದರು.
ವಿಧಾನ ಪರಿಷತ್​ ಸದಸ್ಯ ಎಸ್​. ವಿ.ಸಂಕನೂರ ಮಾತನಾಡಿ ನಿರುದ್ಯೋಗ ಸಮಸ್ಯೆ ಜಾಗತಿಕ ಸಮಸ್ಯೆಯಾಗಿದೆ. ಕೌಶಲ್ಯತೆಯ ಕೊರತೆ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಧೈರ್ಯ ಮಾಡದಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ವಿವಿದ ಇಲಾಖೆಗಳಲ್ಲಿ ಒಟ್ಟು 4 ಲ ಹುದ್ದೆಗಳು ಖಾಲಿ ಆಗಿದ್ದು ಅವುಗಳನ್ನು ಭತಿರ್ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದರು.
ಮಾಜಿ ಶಾಸಕ ಡಿ.ಆರ್​.ಪಾಟೀಲ ಮಾತನಾಡಿ ಪ್ರಾಮಾಣಿಕತೆ ಮತ್ತು ಪರಿಶ್ರಮ ಇದ್ದವರಿಗೆ ಉದ್ಯೋಗ ಅವಕಾಶಗಳು ಒಲಿದು ಬರಲಿವೆ. ಮೆರಿಟ್​ ಮತ್ತು ಮಾನವೀಯ ಮೌಲ್ಯಗಳಿಂದಾಗಿ ಮಹಿಳೆಯರೇ ಮುನ್ನಡೆ ಸಾಧಿಸಿದ್ದು ಬರಲಿರುವ ದಿನಗಳಲ್ಲಿ ಅವರೇ ಪ್ರಾಬಲ್ಯರಾಗುವರು ಎಂದರು.
ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ ಕೌಶಲ್ಯ ಆಧಾರಿತ ಶಿಣ ಇಂದು ಅವಶ್ಯವಿದೆ. ಪ್ರಧಾನಿ ಮೋದಿ ಅವರು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಪ್ರಗತಿಯ ಕಾರ್ಯಗಳನ್ನು ಮಾಡಿದ್ದಾರೆ. ಭಾಷೆಯ ಮೇಲೆ ಪ್ರಭುತ್ವ ಮತ್ತು ಪ್ರಾಬಲ್ಯವನ್ನು ಹೊಂದಿದರೆ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಉನ್ನತ ಹುದ್ದೆ ಹೊಂದಲು ಸಾಧ್ಯ ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯ ಶರಣಬಸಪ್ಪ ಗುಡಿಮನಿ ಮಾತನಾಡಿ, ನಮ್ಮ ಭಾಗದ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಣ್ಣ ಪ್ರಯತ್ನವನ್ನು ಸರ್ಕಾರದ ಅನುದಾನವಿಲ್ಲದೆ ಉಚಿತವಾಗಿ ಹಾಗೂ ಅಭ್ಯಥಿರ್ಗಳಿಗೆ ಉಪಹಾರ, ಊಟದೊಂದಿಗೆ ಈ ಉದ್ಯೋಗ ಮೇಳ ಕೈಗೊಳ್ಳಲಾಯಿತು. 50 ವಿವಿದ ಕಂಪನಿಗಳು ಅಭ್ಯಥಿರ್ಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಸುಮಾರು 1,150 ಕ್ಕೂ ಅಭ್ಯಥಿರ್ಗಳು ನೋಂದಣಿ ಮಾಡಿಕೊಂಡಿದ್ದು ಸುಮಾರು 10 ಅಭ್ಯಥಿರ್ಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ನೇಮಕಾತಿ ಪತ್ರ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮ ಸಮಸ್ಥೆಯ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net