ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸುವರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಮಾಜಿ ಅಧ್ಯಕ್ಷ ಎಸ್.ಪಿ.ಸಂಶಿಮಠ, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ತೋಂಟೇಶ ಕೆ. ಕುರಡಗಿ, ಹುಬ್ಬಳ್ಳಿ ಮೂರಶಿಳ್ಳಿ ಫೌಂಡೇಶನ್ ಪ್ರಜ್ಞಾಪೂರ್ವಕ ವಾಗ್ಮಿಯಾದ ಸಿ.ಎ.ನಟರಾಜ ಮೂರಶಿಳ್ಳಿ, ಧಾರವಾಡ ಕನೆಕ್ಟ್ ಸಂಸ್ಥೆಯ ವ್ಯವಸ್ಥಾಪಕ ಗಿರೀಶ ಅಂಗಡಿ, ಗದಗ ದತ್ತಾಗ್ರೂಪ್ಸ್ ವ್ಯವಸ್ಥಾಪಕ ಕಿರಣ ಪ್ರಕಾಶ ಭೂಮಾ, ಗದಗ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎA. ಬುರಡಿ ಆಗಮಿಸುತ್ತಾರೆ ಎಂದು ಗುಡಿಮನಿ ವಿವರಿಸಿದರು.