ಗದಗ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮ ಜರುಗಿತು. ಸೋಮಲಿಂಗ ಶ್ರೀಗಳು, ರಾಜು ಖಾನಪ್ಪನವರ, ಎಸ್. ಪಿ. ಜಗದೀಶ, ವಿಜಯಕುಮಾರ ಗಡ್ಡಿ, ಮಹೇಶ ರೋಖಡೆ, ಸೋಮು ಗುಡಿ, ಸಹದೇವ ಗಣಾಚಾರಿ, ಕೆ. ಸಿ. ಮಲ್ಲಾಪೂರ,ಹಲವರು ಇದ್ದರು.
ರಾಜ್ಯ ಹಿಂದೂ ಸಂಟನೆಗಳ ಒಕ್ಕೂಟ, ಶಿವ ರಾಮ ಕೃಷ್ಣ ಸೇವಾ ಟ್ರಸ್ಟ, ದಲಿತ ಮಿತ್ರ ಮೇಳ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ- ಆ್ತಶ್ರಯದಲ್ಲಿ ಶಿವಾಜಿ ಜಯಂತಿ ಅವರ 399ನೇ ಜಯಂತಿ ಹಾಗೂ ಸಂತ ಸೇವಾಲಾಲ್ ಅವರ ಜಯಂತ್ಯೋತ್ಸವು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಭಕ್ತಿಭಾವದಿಂದ ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿ ಮಾತನಾಡಿದ ವಿಜಯಪುರ ಜಿಲ್ಲೆಯ ಶಂಕರಲಿಂಗ ಗುರುಪೀಠದ ಸೋಮಲಿಂಗ ಶ್ರೀಗಳು, ಶಿವಾಜಿ ಮಹಾರಾಜರು ಕೇವಲ ಯುದ್ಧಗಳ ಮೂಲಕ ಅಲ್ಲದೇ ಆಧ್ಯಾತ್ಮಿಕ ಮೌಲ್ಯಗಳ ಮೂಲಕವೂ ಸಮಾಜ ನಿರ್ಮಾಣ ಮಾಡಿದ ಮಹಾನಾಯಕರು ಎಂದು ಹೇಳಿದರು. ಸಂತ ಸೇವಾಲಾಲರ ಆಧ್ಯಾತ್ಮಿಕತೆ ಮತ್ತು ಶಿವಾಜಿಯ ಶೌರ್ಯ ಇಂದು ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಇತಿಹಾಸ ಮತ್ತು ಸಂಸತಿಯ ಬಗ್ಗೆ ಸಮಾಜ ಜಾಗೃತಿ ಆಗಬೇಕು ಎಂದರು.
ಪಠ್ಯಪುಸ್ತಕಗಳಲ್ಲಿ ದೇಶದ ವಿವಿಧ ರಾಜರ ಇತಿಹಾಸವಿದ್ದರೂ, ಶಿವಾಜಿ ಮಹಾರಾಜರ ಕೊಡುಗೆಗಳನ್ನು ಸಮಗ್ರವಾಗಿ ಪರಿಚಯಿಸುವ ಅಗತ್ಯವಿದೆ. ಮಕ್ಕಳಿಗೆ ಶಿವಾಜಿ ಮಹಾರಾಜರ ಜೊತೆಗೆ ಸಂತ ಸೇವಾಲಾಲ್ ಅವರಂತಹ ಮಹನೀಯರ ಜೀವನ ಮೌಲ್ಯಗಳನ್ನು ತಿಳಿಸಬೇಕಾಗಿದೆ ಎಂದರು
ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಶಿವಾಜಿ ಮಹಾರಾಜರು ಸಮಾಜ ಏಕತೆಗೆ ಪ್ರೇರಕ ಶಕ್ತಿ. ಸಮಾಜದಲ್ಲಿ ಜಾತಿ ಭೇದ ತೊಡೆದುಹಾಕಿ ಯುವಕರು ಹಾಗೂ ಮಹಿಳೆಯರು ಸಂಟಿತರಾಗಿ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಗದೀಶ್ ಎಸ್.ಪಿ, ಶಿವಪ್ಪ ನಾಯಕ, ವಿಜಯಕುಮಾರ ಗಡ್ಡಿ, ಮಹೇಶ ರೋಖಡೆ, ಸೋಮು ಗುಡಿ, ಸಹದೇವ ಗಣಾಚಾರಿ, ಕೆ. ಸಿ. ಮಲ್ಲಾಪೂರ, ಜಯಂ ವೀರೂಪಾಕ್ಷಪ್ಪ ಹೆಬ್ಬಳ್ಳಿ, ಸುರೇಶ ಲಮಾಣಿ, ರಾಜಣ್ಣ ಮಲ್ಲಾಡದ, ರವಿಕಾಂತ ಅಂಗಡಿ, ವೆಂಕಟೇಶ ರಾಥೋಡ, ಮೋಹನ್ ಗ್ವಾರಿ, ರಾಜು ಮುಧೋಳ ಇತರರು ಇದ್ದರು.