ಮೆಕ್ಕೆಜೋಳ ಸಮಸ್ಯೆ! ಆವರ್ತನಿಧಿ ಬಳಕೆ ಏಕಿಲ್ಲ? ಜಗದೀಶ ಶೆಟ್ಟರ ಪ್ರಶ್ನೆ

ರೈತರ ಸಮಸ್ಯೆ ಕುರಿತು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶಿವು ಹಿರೇಮನಿ ಪಾಟೀಲ, ಲಿಂಗರಾಜ ಪಾಟೀಲ, ಕೋಟಿಗೌಡರ್​ ಇತರರು ಇದ್ದರು.
ರೈತರ ಸಮಸ್ಯೆ ಕುರಿತು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದರು. ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶಿವು ಹಿರೇಮನಿ ಪಾಟೀಲ, ಲಿಂಗರಾಜ ಪಾಟೀಲ, ಕೋಟಿಗೌಡರ್​ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರ ನ.13ರಂದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ವಿಷಯ ಮುಚ್ಚಿಟ್ಟು ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ ಎಂದು ಆರೋಪಿಸಿ, ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಕ್ಕೆಜೋಳ ಬೆಂಬಲ ಬೆಲೆ ನಿಗದಿಪಡಿಸಿದರೂ ಸಹ ಈ ವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಈ ರೀತಿಯ ಬಿಕ್ಕಟ್ಟು ಎದುರಾದಾಗ ರಾಜ್ಯ ಸರ್ಕಾರ ಆವರ್ತನಿಧಿಯನ್ನು ಬಳಸಿ ರೈತ ಉಪ್ನನಗಳನ್ನು ಖರೀದಿಸಬೇಕು. ತದನಂತರ ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಬಹುದು. ಆದರೆ, ರಾಜ್ಯ ಸರ್ಕಾರದಲ್ಲಿ ಆವರ್ತನಿಧಿ ಶೂನ್ಯ ಸುತ್ತುತ್ತಿದೆ. ಗ್ಯಾರಂಟಿಗಳಿಗೆ ಹಣ ವಿನಿಯೋಗಿಸುವ ನೆಪದಲ್ಲಿ ಸರ್ಕಾರ ರೈತ ವರ್ಗಕ್ಕೆ ನಾನಾವಿಧಗಳಿಂದ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಮೊದಲು ಹೆಸರುಉತ್ಪನ್ನವು ಕೂಡ ಹಾನಿಯಾಗಿದೆ. ಹಾನಿಯಾದ ಹೆಸರನ್ನು ಖರೀದಿಸಲು ಸಹ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಆದರೂ ಸಹ ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಲಿಲ್ಲ. ರಾಜ್ಯದಲ್ಲಿ ಜೋಳ, ಮೆಕ್ಕೆಜೋಳ, ಹೆಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಂಬಲ ಬೆಲೆ 1000 ರೂ. ಆಸುಪಾಸು ಇತ್ತು. ಕೇಂದ್ರದಲ್ಲಿ ಬಿಜೆಪಿ ಸಂರ್ಕಾರ ಬಂದಮೇಲೆ 2000 ದಿಂದ 3000 ರೂ. ವರೆಗೆ ಬೆಂಬಲ ನೆಲೆ ನಿಗದಿ ಮಾಡಲಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಕೇಂದ್ರ ಅನುಮತಿ ನೀಡಿದೆ. ಆದರೂ ರಾಜ್ಯ ಸರ್ಕಾರ ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲೇ ಹೆಚ್ಚಿನ ಪರಿಹಾರ:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬೆಳೆಹಾನಿಗೆ ಅಧಿಕ ಪರಿಹಾರ ನೀಡಲಾಗಿದೆ. 2009&10ರಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇದ್ದಾಗ ಪ್ರತಿ ಹೆಕ್ಟೇರ್​ ಖುಷ್ಕಿ ಬೆಳೆಗೆ 6200 ರೂ. ಪರಿಹಾರ, 2019&20ರಲ್ಲಿ 10000 ರೂ. ಪರಿಹಾರ ನೀಡಲಾಗಿದೆ. ಆದರೆ ಇಂದುಇನ ಕಾಂಗ್ರೆಸ್​ ಸರ್ಕಾರ ಕೇವಲ 8500 ರೂ. ಪರಿಹಾರ ನೀಡಿದೆ ಎಂದು ಆರೋಪಿಸಿದರು. ಬಿಜೆಪಿ ಅವಧಿಯಲ್ಲಿ ಮಳೆಯಿಂದ ಮನೆ ಹಾನಿ ಆದವರಿಗೆ 3 ರಿಂದ 5 ಲಕ್ಷದ ವರೆಗೆ ಪರಿಹಾರ ವಿತರಿಸಿದ್ದೇವೆ. ಕಾಂಗ್ರೆಸ್​ ಅವಧಿಯಲ್ಲಿ 50 ಸಾವಿರದಿಂದ 1.20 ಲಕ್ಷದ ವರೆಗೆ ಮಾತ್ರ ಪರಿಹಾರ ನಿಡಲಾಗುತ್ತಿದೆ. ಬಿಜೆಪಿ ಅಧಿಕಾರವಧಿಯಲ್ಲೇ ರೈತರಿಗೆ ಹೆಚ್ಚಿನ ಪರಿಹಾರ ನೀಡಿದ್ದೇವೆ. ಕಾಂಗ್ರೆಸ್​ ಸರ್ಕಾರ ರೈತರನ್ನು ಶೋಷಣೆ ಮಾಡುತ್ತಿದ್ದು, ಈಗ ತುರ್ತು ಪರಿಸ್ಥಿತಿಯಲ್ಲಿದೆ ಎಂದು ಆರೋಪಿಸಿದರು.
ಎರಡುವರೆ ವರ್ಷ ಆದರೂ ಕಾಂಗ್ರೆಸ್​ ವಲಯದಲ್ಲಿ ರಾಜಕೀಯ ನಾಟಕೀಯ ಬೆಳವಣಿಗೆ ನಡೆಯುತ್ತಿದೆ. ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿರುವ ಕಾಂಗ್ರೆಸ್​ ನಾಯಕರು ಕಬ್ಬು ಬೆಳೆಗಾರರು, ಮೆಕ್ಕೆಜೋಳ ಬೆಳೆ ಗಾರರಿಗೆ ಸ್ಪಂಧನೆ ನೀಡುತ್ತಿಲ್ಲ. ಕಾಂಗ್ರೆಸ್​ ಸರ್ಕಾರ ತನ್ನಿಂತಾನೆ ದಾರಿ ತಪ್ಪಿದೆ. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಸಕ್ಕರೆ ಖಾರ್ಕಾನೆ ಮಾಲೀಕರು ಮತ್ತು ರೈತರ ಜತೆ ಸಭೆ ನಡೆಸುತ್ತಿದ್ದೆ. ಈಗ ಈ ಸಕಾರಾತ್ಮಕ ಬೆಳವಣಿಗೆ ಇಲ್ಲ. ಅಧಿಕಾರದ ದುರಾಸೆಯಿಂದ ಸರ್ಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷ ಮಾಡುತ್ತಿದೆ ಎಂದರು.
ಎಸ್​ಎಪಿ ಕಾನೂನು:
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಎಸ್​ಎಪಿ ಹೊಸ ಕಾನೂನು ಜಾರಿ ಮಾಡಲಾಗಿತ್ತು. ರೈತ ಉತ್ಪನ್ನಗಳ ಬಗ್ಗೆ ಬಿಕ್ಕಟ್ಟು ಎದುರಾದಾಗ ಸಲಹಾತ್ಮಕ ಬೆಲೆ (ಅಡ್ವೆಸರಿ ಪೆಸ್​) ನಿಗದಿ ಮಾಡುವ ನಿಯಮ ಜಾರಿ ಮಾಡಲಾಗಿತ್ತು. ಆದರೂ ಈ ಕಾನೂನು ಪಾಲನೆ ಆಗುತ್ತಿಲ್ಲ. ಕಬ್ಬಿನಿಂದ ಹೊರ ಬರುವ ಇತರೆ ವಸ್ತುಗಳ ಮೇಲಿನ ಲಾಭದಲ್ಲೂ ರೈತರಿಗೆ ನೀಡಬೇಕು ಎಂಬ ನಿಯಮವೂ ಎಸ್​ಎಪಿ ಕಾನೂನಲ್ಲಿದೆ. ಕಾಂಗ್ರೆಸ್​ ಸರ್ಕಾರ ಇದ್ಯಾವುದನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಸಿ.ಸಿ. ಪಾಟೀಲ, ಎಸ್​.ವಿ. ಸಂಕನೂರು, ಚಂದ್ರು ಲಮಾಣಿ, ಮಾಜಿ ಸಚಿವ ಕಳಕಪ್ಪ ಬಂಡಿ, ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶಿವು ಹಿರೇಮನಿ ಪಾಟೀಲ, ಲಿಂಗರಾಜ ಪಾಟೀಲ, ಕೋಟಿಗೌಡರ್​ ಇತರರು ಇದ್ದರು.
ಬುರುಡೆ ಗ್ಯಾಂಗ್​:
ಧರ್ಮಸ್ಥಳ ಪ್ರಕರಣ ಗಮನಿಸಿದರೆ ಬುರುಡೆ ಬಿಟ್ಟ ಗ್ಯಾಂಗ್​ ಪರವಾಗಿ ರಾಜ್ಯ ಸರ್ಕಾರ ಮೃಧು ಧೋರಣೆ ತೋರಿದ್ದು ಸ್ಪಷ್ಟವಾಗುತ್ತಿದೆ. ಕಮ್ಯುನಿಷ್ಠರು ಹೇಳಿದಂತೆ ಸಿದ್ದರಾಮಯ್ಯ ಕೇಳಿದ್ದಾರೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ದೊಡ್ಡ ಹುನ್ನಾರಕ್ಕೆ ಕೈಹಾಕಿದ ಗ್ಯಾಂಗ್​ ಗೆ ತಕ್ಕ ಶಿೆ ಆಗಬೇಕು. ಆ ನಿಟ್ಟಿನಲ್ಲಿ ಕಾನೂನುಗಳ ಪಾಲನೆ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಯಾರ ಮೇಲೂ ಕಠೀಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶೆಟ್ಟರ ಆರೋಪಿಸಿದರು.
ಮತ್ತಿನ್ನೇನು ಆರೋಪ ಮಾಡಿದರು?
* ಕಿಸಾನ್​ ಸಮ್ಮಾನ್​ ಯೋಜನೆಯಲ್ಲಿ ಬಿಎಸ್​ವೈ ಸರ್ಕಾರದಲ್ಲಿ 10 ಸಾವಿರ ರೂ. ನೀಡಲಾಗಿತ್ತು. ಕಾಂಗ್ರೆಸ್​ ಸರ್ಕಾರ 6 ಸಾವಿರಕ್ಕೆ ಇಳಿಸಿದೆ.
* ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದ್ದರೂ ಸಹ ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧಿನಕ್ಕೆ ಏಕರೆಗೆ 30 ರಿಂದ 40 ಲಕ್ಷ ರೂ. ಘೋಷಣೆ ಮಾಡಿ ಉತ್ತರ ಕರ್ನಾಟಕ ಭಾಗದ ಜನರಿಗೆ ಮೋಸ ಮಾಡುತ್ತಿದ್ದಾರೆ.
* ರೈತರ ಬೆಳೆ ಖರೀದಿ ಕೇಂದ್ರದ ಆರಂಭ ಮಾಡುವ ಬದಲಾಗಿ ಕಾಂಗ್ರೆಸ್​ ಸರ್ಕಾರ ಎಂಎಲ್​ಎ ಖರೀದಿ ಕೇಂದ್ರ ಆರಂಭಿಸಿದ್ದಾರೆ.
* ನೀತಿ ಆಯೋಗದಲ್ಲಿ ಭಾಗವಹಿಸುವ ಬದಲಾಗಿ, ಎಲ್ಲವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತ ರಾಜಕಾರಣ ಮಾಡುತ್ತಿದ್ದಾರೆ.
* ಬಾಕಿ ಉಳಿಸಿಕೊಂಡಿರುವ ರೈತ ಉತ್ಪಾದಕ ಸಂಗಳ 620 ಕೋಟಿ ರೂ. ಬಿಡುಗಡೆ ಮಾಡಿಲ್ಲ.
* ಬಗರ್​ ಹುಕುಂ ಸಾಗುವಳಿ ಮಾಡುತ್ತಿರುವ 5 ಏಕರೆ ಒಳಗಿನ ರೈತರಿಗೆ ಅರಣ್ಯ ಇಲಾಖೆ ಕಿರುಕುಳದಿಂದ ಮುಕ್ತಿಗೊಳಿಸಬೇಕು.
* ರಾಜ್ಯದ ಎಲ್ಲ ಜಲಾಶಯಗಳ ಕ್ರಸ್ಟಗೇಟ್​ ದುರಸ್ಥಿ, ವಿವಿಧ ಯೋಜನೆಗಳ ಜಾರಿಗೆ ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ 30 ಸಾವಿರ ಕೋಟಿ ರೂ. ಶ್ರೀ ಬಿಡುಗಡೆ ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net