ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಅವರು ಮಾತನಾಡಿ ಜಿಲ್ಲೆಗೆ ಬೇಕಾಗಿರುವ ಯೋಜನೆ ಗ್ರಾಮ ಪಂಚಾಯತಿ ಹಂತದಿAದ ಹಿಡಿದು ಅವರಿಂದಲೇ ಸಂಗ್ರಹಿಸಿ ಯೋಜನೆ ರೂಪಿಸಲಾಗುವುದು. ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ಜಿಲ್ಲೆ ಅಬಿವ್ರದ್ದಿ ಹೊಂದಲು ಸಾಧ್ಯವಾಗುತ್ತದೆ. ಗದಗ ಜಿಲ್ಲೆಯ ಕೂಡ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ದಕ್ಷಿಣ ಕನ್ನಡ . ಉಡುಪಿ. ಬೆಳಗಾವಿ ಇತರೆ ಜಿಲ್ಲೆಗಳು ಮುಂದುವರಿದ ಜಿಲ್ಲೆಗಳಾಗಿವೆ. ಜಿಲ್ಲೆಯ ಅಬಿವೃದ್ದಿಗೆ ಸಾಕ್ಷರತೆ ಪ್ರಮಾಣ ಮುಖ್ಯವಾಗಿದೆ.ಜಿಲ್ಲೆಯಲ್ಲಿ ಮೂಲಭೂತ ಸೌಲಭ್ಯ. ಕುಡಿಯುವ ನೀರಿನ ಸರಬರಾಜು ಕುರಿತಂತೆ ಕೊರತೆಗಳ ಪಟ್ಟಿ ತಯಾರಿಸಬೇಕು. ಗ್ರಾಮÀ ಪಂಚಾಯತನವರು ತಮ್ಮ ಅಧಿಕಾರದ ಸದುಪಯೋಗ ಪಡಿಸಿಕೊಳ್ಳಬೆಕು ಎಂದರು.
ಪ್ರತಿಷ್ಟಿತ ರಾಮನ್ ಮ್ಯಾಗೆಸೆ ಪ್ರಶಸ್ತಿ ಪುರಸ್ಕೃತ ಮತ್ತು ಸ್ಟಾಕ್ ಹೋಂ ಜಲ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಸಿಂಗ್ ಅವರು ಮಾತನಾಡಿ ದೇಶದ ಪ್ರಗತಿಗೆ ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆಯು ಬಹಳ ಮುಖ್ಯವಾಗಿದೆ. ಸಂಸ್ಕೃತಿ ಮತ್ತು ಪ್ರಕೃತಿ ರಕ್ಷಣೆ ಎರಡೂ ಮುಂದಿನ ಸ್ಥಾನದಲ್ಲಿದ್ದರೆ ಭಾರತದ ಜಿಡಿಪಿ ಮೊದಲಿನ ಸ್ಥಾನದಲ್ಲಿರುತ್ತದೆ. ಬಡಜನರು ಉನ್ನತ ಸ್ಥಾನಕ್ಕೇರಲು ಯೋಜನಾ ಸಮಿತಿ ಸಹಾಯವಾಗಲಿದೆ. ಗ್ರಾಮದ ಜನರು ಸಂಘಟಿತರಾದಾಗ ಸುಧಾರಣೆ ಸಾಧ್ಯವಾಗುತ್ತದೆ. ಗ್ರಾಮಸಭೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕುರಿತು ಚರ್ಚೆಯಾಗಬೇಕು. ಗ್ರಾಮಸ್ಥರು ಸ್ವಾವಲಂಬಿಗಳಾಗಬೇಕು. ತಮ್ಮ ಪ್ರದೇಶದಲ್ಲಿನ ನೀರು ಮತ್ತು ಮಣ್ಣಿನ ಸಂರಕ್ಷಣೆ , ಬೀಜ ಉತ್ಪಾದನೆ ಮಾಡುವುದು ಅವರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು. ಈ ಹಿಂದೆ ಅವರು ನೀರಿನ ಸಂರಕ್ಷಣೆಗಾಗಿ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಆರೋಗ್ಯ ಮತ್ತು ಆಹಾರ ತಜ್ಞ ಡಾ. ಖಾದರ್ ಅವರು ಮಾತನಾಡಿ ಮಣ್ಣಿನ ಮತ್ತು ನೀರಿನ ಸಂರಕ್ಷಣೆ ಮಾಡುವುದು ಮುಖ್ಯ ಕೆಲಸವಾಗಿದೆ. ಗ್ರಾಮಿಣ ಪ್ರದೇಶದಲ್ಲಿ ಗೊಮಾಳ ಸಂಸ್ಕçತಿಯ ಪ್ರಾಮುಖ್ಯತೆ ತಿಳಿಸಿದರು. ನಮ್ಮ ಭೂಮಿಯನ್ನು ನಾವು ಸಂರಕ್ಷಣಾ ಮಾಡಬೇಕು. ಸಾವಯವ ಧಾನ್ಯದ ಬಳಕೆ ಹೆಚ್ಚಾಗಬೆಕು. ನಗರೀಕರಣ ಕ್ಕೆ ಪ್ರಾಮುಖ್ಯತೆ ಕೊಟ್ಟ ಹಾಗೆ ಗ್ರಾಮಿಣ ಪ್ರದೇಶದ ಪ್ರಾಮುಖ್ಯತೆ ಕೊಡಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಗಳ ಬಳಕೆ ವಿನಾಶಕಾರಿಯಾಗಿದೆ. ಎಲ್ಲ ಜೀವರಾಶಿಗಳಿಗೆ ಮಣ್ಣು ಮತ್ತು ನೀರು ಬಹಳ ಮುಖ್ಯವಾಗಿದೆ. ಆರೋಗ್ಯ ನಮ್ಮ ಸ್ವಂತ ಸ್ವತ್ತಾಗಬೇಕು. ನಮ್ಮ ಪ್ರದೇಶದ ಮಣ್ಣಿನಲ್ಲಿಯೇ ನಮ್ಮ ಆಹಾರ ಬೆಳೆದುಕೊಳ್ಳಲು ಪ್ರಯತ್ನಿಸಬೇಕು. ಅನವಶ್ಯಕ ಆಹಾರ ಸೇವನೆಯಿಂದಲೇ ಅನಾರೋಗ್ಯ ಉಂಟಾಗುವುದನ್ನು ನಾವು ಕಾಣುತ್ತಿದ್ದೇವೆ. ಮಣ್ಣು ಮತ್ತು ನೀರು ಪೋಲಾಗದಂತೆ ತಡೆದು ಸ್ವಾವಲಂಬಿ ಯಾಗಿ ಬೆಳೆ ಬೆಳಯಬೇಕು ಎಂದು ಡಾ.ಖಾದರ್ ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಮಟ್ಟದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಬಜೆಟ್ ತಯಾರಿಸಲಾಗುತ್ತಿದೆ. ಸ್ವಾವಲಂಬಿ ಬದುಕು ಸ್ವಾಭಿಮಾನದ ಬದುಕಾಗಿದೆ. ಗ್ರಾಮ ಪಂಚಾಯತ್ ಗಳಿಂದ ಮಾಹಿತಿ ಸಂಗ್ರಹಣೆಯಾಗಿ ತಾಲೂಕು ಪಂಚಾಯತ್ ನಂತರ ಜಿಲ್ಲಾ ಪಂಚಾಯತ್ ವರೆಗೆ ಜಿಲ್ಲೆಯಲ್ಲಿ ಬೇಕಾಗುವ ಒಂದು ಸಮಗ್ರ ಕೈ ಪಿಡಿಯನ್ನು ಸರ್ಕಾರದ ಮುಂದೆ ಇಟ್ಟಾಗ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಗಣ್ಯರಾದ ಸಿದ್ದು ಪಾಟೀಲ, ಬಳಿಗಾರ, ವಾಸಣ್ಣ ಕುರಡಗಿ, ಎಲ್.ಡಿ.ಚಂದಾವರಿ, ಕೃಷ್ಣ ಪರಾಪೂರ, ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಜಿಲ್ಲಾ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.