ವೀರಾಂಜನೇಯಸ್ವಾಮಿ ಶಕ್ತಿ, ಸೇವೆಯ ಅವತಾರ: ಸಿದ್ದು ಪಾಟೀಲ

ನಗರದ ವೀರಾಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ ಮಾತನಾಡಿದರು. ಶಂಕರ ಹಾನಗಲ್​, ಜಗದೀಶಚಂದ್ರ ನಾಡಗೌಡ್ರ, ರಾಮಣ್ಣ ಕಾಶಪ್ಪನವರ, ವಿ. ಆರ್​. ಕುಂಬಾರ, ಕೆ. ಬಿ. ಕೊಣ್ಣೂರ, ಕಳಕಯ್ಯ ಹಿರೇಮಠ, ಮಂಜುನಾಥ ನಾಯಕ ಇತರರು ಇದ್ದರು.
ನಗರದ ವೀರಾಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ ಮಾತನಾಡಿದರು. ಶಂಕರ ಹಾನಗಲ್​, ಜಗದೀಶಚಂದ್ರ ನಾಡಗೌಡ್ರ, ರಾಮಣ್ಣ ಕಾಶಪ್ಪನವರ, ವಿ. ಆರ್​. ಕುಂಬಾರ, ಕೆ. ಬಿ. ಕೊಣ್ಣೂರ, ಕಳಕಯ್ಯ ಹಿರೇಮಠ, ಮಂಜುನಾಥ ನಾಯಕ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ರಾಮನ ಭಕ್ತನಾದ ವೀರಾಂಜನೇಯ ಸ್ವಾಮಿಯು ಶಕ್ತಿ ಮತ್ತು ಸೇವೆಯ ಅವತಾರ ಎಂದು ಬಣ್ಣಿಸಲಾಗಿದೆ. ಶೃದ್ಧಾಭಕ್ತಿಯಿಂದ ಪೂಜಿಸಿ ನಡೆದುಕೊಳ್ಳುವ ಭಕ್ತಾಧಿಗಳಿಗೆ ಆಂಜನೇಯ ಸ್ವಾಮಿ ಒಳಿತನ್ನು ಮಾಡುವನು ಎಂಬ ನಂಬಿಕೆ ಇದೆ ಎಂದು ಜಿಪಂ ಮಾಜಿ ಅಧ್ಯ, ಲಕ್ಕುಂಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ ಹೇಳಿದರು.
ಗುರುವಾರ ನಗರದ ಹಾತಲಗೇರಿ ರಸ್ತೆಯಲ್ಲಿ ಇರುವ ವಿವೇಕಾನಂದ ನಗರದ ವೀರಾಂಜನೇಯ ದೇವಸ್ಥಾನ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಹನುಮ ಜಯಂತಿ, ವೀರಾಂಜನೇಯ ದೇವಸ್ಥಾನದ 16ನೇ ವರ್ಷದ ವಾಷಿರ್ಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಹನುಮ ಜಯಂತಿ ದಿನ ಹನುಮಂತನ ಪೂಜೆಯಿಂದ ತೊಂದರೆಗಳು ದೂರವಾಗುತ್ತವೆ. ಶಕ್ತಿ, ಭಕ್ತಿ ಮತ್ತು ಆರೋಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರೀರಾಮನ ಭಕ್ತನಾಗಿ ಹನುಮಂತನ ಭಕ್ತಿ ಮತ್ತು ಬಲವನ್ನು ಈ ದಿನ ಸ್ಮರಿಸಲಾಗುತ್ತಿದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಬಿ. ಎನ್​. ಯರನಾಳ ಮಾತನಾಡಿ 16ನೇ ವರ್ಷದ ವಾಷಿರ್ಕೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಈ ದೇವಸ್ಥಾನ, ಈ ಭಾಗದ ಆರಾದ್ಯ ವೀರಾಂಜನೇಯ ಸ್ವಾಮಿಯಾಗಿದ್ದು ಇಲ್ಲಿನ ಪ್ರಜ್ಞಾವಂತ ಭಕ್ತಾಧಿಗಳು ಶೃದ್ಧಾಭಕ್ತಿಯಿಂದ ನಡೆದುಕೊಳ್ಳುವ ಮೂಲಕ ದೇವಸ್ಥಾನದ ಪ್ರಾಂಗಣವನ್ನು ಅತ್ಯಂತ ಚೊಕ್ಕಟವಾಗಿ ಇಟ್ಟಿದ್ದಾರೆ ಎಂದರು.
ನಗರಸಭೆ ಮಾಜಿ ಉಪಾಧ್ಯ ಶಂಕರ ಹಾನಗಲ್​, ನಿವೃತ್ತ ಪೌರಾಯುಕ್ತ ಜಗದೀಶಚಂದ್ರ ನಾಡಗೌಡ್ರ, ರಾಮಣ್ಣ ಕಾಶಪ್ಪನವರ, ವಿ. ಆರ್​. ಕುಂಬಾರ, ಕೆ. ಬಿ. ಕೊಣ್ಣೂರ, ಕಳಕಯ್ಯ ಹಿರೇಮಠ, ಮಂಜುನಾಥ ನಾಯಕ, ಸಿ. ಎಂ. ಪಾಟೀಲ, ಸಿ. ಎನ್​. ಹಿರೇಮಠ, ಮೇರಾಜ ಪೂಜಾರ, ದೇವೇಂದ್ರಪ್ಪ ಹೂಲಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net