ಎಚ್​.ಕೆ. ಪಾಟೀಲ ಪ್ರತಿಷ್ಠಾನ ವತಿಯಿಂದ ಗಣಿತ ಬಾಲ ಭಾಸ್ಕರ ರಸಪ್ರಶ್ನೆ ಸ್ಪರ್ಧೆ

ಗದಗನಲ್ಲಿ ಎಚ್​. ಕೆ. ಪಾಟೀಲ ಪ್ರತಿಷ್ಠಾನ ವತಿಯಿಂದ ಗಣಿತ ಬಾಲ ಭಾಸ್ಕರ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವ ಕುರಿತು ಆನಂದ ಪೋತ್ನಿಸ್​ ಸುದ್ದಿಗೋಷ್ಟಿ ನಡೆಸಿದರು. ಎಕನಾಥ ನಾಗೂರು, ಎಂ.ಜಿ. ರೆಹಮಾನ್​, ಆರ್​.ಆರ್​. ಓದುಗೌಡರ ಇತರರು ಇದ್ದರು.
ಗದಗನಲ್ಲಿ ಎಚ್​. ಕೆ. ಪಾಟೀಲ ಪ್ರತಿಷ್ಠಾನ ವತಿಯಿಂದ ಗಣಿತ ಬಾಲ ಭಾಸ್ಕರ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸುವ ಕುರಿತು ಆನಂದ ಪೋತ್ನಿಸ್​ ಸುದ್ದಿಗೋಷ್ಟಿ ನಡೆಸಿದರು. ಎಕನಾಥ ನಾಗೂರು, ಎಂ.ಜಿ. ರೆಹಮಾನ್​, ಆರ್​.ಆರ್​. ಓದುಗೌಡರ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಎಚ್​.ಕೆ. ಪಾಟೀಲ ಪ್ರತಿಷ್ಠಾನ ವತಿಯಿಂದ ಗಣಿತ ಬಾಲ ಭಾಸ್ಕರ ರಸಪ್ರಶ್ನೆ ಸ್ಪರ್ಧೆ, ಗಣಿತಾ ಪ್ರತಿಭಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ಆನಂದ ಪೋತ್ನಿಸ್​ ಬುಧವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪರೀಕ್ಷಾ ತರಬೇತಿ ಮತ್ತು ಕ್ವಿಜ್​ ಗಳನ್ನು ಜಿಲ್ಲೆಯ ಶಾಲಾ ಮಟ್ಟದಲ್ಲಿ ವಿವಿಧ ಹಂತದಲ್ಲಿ ನಡೆಸಲಾಗುವುದು. ಜು. 18 ರಂದು ಆಯಾ ಶಾಲಾ ಮಟ್ಟದಲ್ಲಿ ಕ್ವಿಜ್​ ಏರ್ಪಡಿಸಲಾಗುವುದು. ಇಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾಥಿರ್ಗಳಿಗೆ ಜು. 25 ರಂದು ನಗರದ ಜಿಎನ್​ ಟಿಟಿಎಫ್​ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾಥಿರ್ಗಳಿಗೆ ಆ.8 ರಂದು ಜಿಎನ್​ ಟಿಟಿಎಫ್​ ನಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ಪ್ರಥಮ 5 ಸಾವಿರ, 3 ಸಾವಿರ, ತೃತೀಯ 2 ಸಾವಿರ ಹಾಗೂ ಸಮಾಧಾನಕರ ಬಹುಮಾನ 1 ಸಾವಿರ ರೂ ವಿತರಿಸಲಾಗುವುದು ಎಂದು ಹೇಳಿದರು.
ಕೃಷ್ಣಗೌಡ ಪಾಟೀಲ ಮಾತನಾಡಿ, ಈ ಪ್ರತಿಷ್ಠಾನ ವತಿಯಿಂದ ಕಳೆದ ಸಾಲಿನಲ್ಲಿ ಗಣಿತ ಬಾಲ ಬಾಸ್ಕರ ಎಂಬ ಶಿಬಿರ ಏರ್ಪಡಿಸಲಾಗಿತ್ತು. ಶಾಲಾ ಮಟ್ಟದ 8 ಮತ್ತು 9 ನೇ ತರಗತಿ ಮಕ್ಕಳಿಗೆ ಈ ಶಿಬಿರ ನಡೆಸಲಾಗಿತ್ತು. ನಂತರ ಜಿಲ್ಲಾ ಮಟ್ಟದ ಕ್ವಿಜ್​ ಮಾಡಲಾಗಿತ್ತು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ಶಿಬಿರ ಅನುಕೂಲ ಆಗಿತ್ತು. 13000 ಕ್ಕೂ ಅಧಿಕ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಮುಂದುವರಿದು ಈ ಬಾರಿ 8, 9 ಹಾಗೂ 10ನೇ ತರಗತಿ ಮಕ್ಕಳಿಗೆ ಈ ವರ್ಷ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಕನಾಥ ನಾಗೂರು, ಎಂ.ಜಿ. ರೆಹಮಾನ್​, ಆರ್​.ಆರ್​. ಓದುಗೌಡರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net