

ಶಿವಾನಂದ ಹಿರೇಮಠ, ಗದಗ
ಗೃಹಲಕ್ಷ್ಮಿ ಯೋಜನೆಗೆ ಜಿಎಸ್ಟಿ ಪಾವತಿ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಯೋಜನೆಯಲ್ಲಿ ಶೇ. 100 ರಷ್ಟು ಸಾಧನೆ ಅಸಾಧ್ಯ ಎಂಬಂತಾಗಿ, ಅರ್ಹರ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಯಿಂದ ಹೊರಗುಳಿಯುವಂತಾಗಿದೆ. ರಾಜ್ಯದಲ್ಲಿ ಮತ್ತೇ 1.25 ಲಕ್ಷ ಮಹಿಳೆಯರಿಗೆ ಜಿಎಸ್ಟಿ ತಾಂತ್ರಿಕ ಕಾರಣದಿಂದ ಗೃಹಲಕ್ಷ್ಮಿ ಯೋಜನೆ ಲಭಿಸುತ್ತಿಲ್ಲ. ಜಿಎಸ್ಟಿ ಸಮಸ್ಯೆ ಬಗ್ಗೆ ಹಲವು ಬಾರಿ ಸಚಿವ ಸಂಪುಟದಲ್ಲಿ ಮತ್ತು ಸಚಿವರ ನೇತೃತ್ವದಲ್ಲಿ ಸಭೆ ನಡೆದರೂ ಸಮಸ್ಯೆ ಬಗೆಹರಿಯದ ಸಾವಾಲಾಗಿದೆ. ಆರ್ಬಿಐ ನೀತಿ ತಿದ್ದುಪಡಿ ಆದರಷ್ಟೇ ಈ ಸಮಸ್ಯೆ ಬಗೆಹರಿಯಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.
ಜಿಎಸ್ಟಿ ಪ್ರಕರಣ ಗಂಭಿರವಾಗಿ ಪರಿಗಣಿಸಿರುವ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕೇಂದ್ರ ಜಿಎಸ್ಟಿ ವಿಭಾಗಕ್ಕೆ ಹಲವು ಬಾರಿ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಜತೆಗೆ ಸಮಸ್ಯೆಯ ಮೂಲ ತನಿಖೆ ನಡೆಸಿರುವ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಹಲವು ವಿಷಯಗಳು ಗಮನಕ್ಕೆ ಬಂದಿದೆ. ಗೃಹಲಕ್ಷಿ$್ಮ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1.25 ಲಕ್ಷ ಕ್ಕೂ ಅಧಿಕ ಅಜಿರ್ಗಳು ಬಾಕಿ ಉಳಿದಿವೆ.
ಪ್ರಮುಖ ಸಮಸ್ಯೆ ಏನು?
ರಾಜ್ಯದ ಹಲವು ಮಧ್ಯಮ, ಸಣ್ಣ ಕೈಗಾರಿಕೆ ಉದ್ಯಮಿಗಳು ಜಿಎಸ್ಟಿ ವಂಚನೆ, ಕಪು$್ಪ ಹಣ ಸಕ್ರಮಗೊಳಿಸಲು ಮತ್ತು ಮತ್ತೀತರೆ ಸೌಲಭ್ಯ ಪಡೆಯುವ ಉದ್ದೇಶದಿಂದ ವಿಶ್ವಾಸಿಕ ಬಡವರ ಹೆಸರಲ್ಲಿ, ಮನೆ ಕೆಲಸದವರ ಹೆಸರಲ್ಲಿ ಕಂಪನಿಗಳನ್ನು ಆರಂಭಿಸಿದ್ದಾರೆ. ಬಡವರ ಹೆಸರಲ್ಲಿ ಕಂಪನಿಗಳಿದ್ದು, ಅವರ ಹೆಸರಲ್ಲಿ ಜಿಎಸ್ಟಿ ಪಾವತಿ ಮತ್ತು ಐಟಿ ರಿರ್ಟನ ಪೈಲ್ ಆಗುತ್ತಿವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಿದ ಸಂದರ್ಭದಲ್ಲಿ ಬಡವರು ಜಿಎಸ್ಟಿ ಪಾವತಿದಾರರು ಎಂದು ಸೂಚಿಸಿ ಅಜಿರ್ ತಿರಸತವಾಗುತ್ತಿವೆ. ಇದರಿಂದ ಕಳೆದ 3 ವರ್ಷದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬಡವರಿಗೆ ಸಿಗಬೇಕಾದ ಅಂದಾಜು 1 ಲಕ್ಷ ರೂ. ಸಿಗದಂತಾಗಿದೆ. ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಆದಾಯ ತೆರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರ ನೀಡಿದೆ. ಜತೆಗೆ ಕೇಂದ್ರ ಜಿಎಸ್ಟಿ ವಿಭಾಗಕ್ಕೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಕೇವಲ ಉದ್ಯಮದಾರರು ವಂಚಿಸುತ್ತಿರುವ ಪ್ರಕರಣಗಳಲ್ಲದೇ ಮತ್ತೀತರೆ ಕಾರಣಗಳಿಂದಲೂ ಜಿಎಸ್ಟಿ ತಾಂತ್ರಿಕ ತೊಂದರಗಳಿವೆ.
ಮತ್ತೀತರೆ ಕಾರಣಗಳೇನು?
ಬೆಳೆ ಸಾಲ ಹೊರತುಪಡಿಸಿ ವೈಯಕ್ತಿಕ ಸಾಲ, ವಾಹನ ಮೇಲಿನ ಸಾಲ, ತುರ್ತು ಸಾಲ ಸೇರಿದಂತೆ ನಾನಾ ಕಾರಣಗಳಿಗೆ ಪಡಿತರ ಚೀಟಿ ಹೊಂದಿದ ವ್ಯಕ್ತಿಯು ರಾಷ್ಟ್ರೀಕೃತ ಬ್ಯಾಂಕ್, ನೋಂದಾಯಿತ ಸ್ಥಳಿಯ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುತ್ತಾರೆ. ಸಾಲ ಪಡೆಯುವ ಸಂದರ್ಭದಲ್ಲಿ ಸಾಲಕ್ಕೆ ಜಿಎಸ್ಟಿ ಹಾಕಲಾಗುತ್ತದೆ ಮತ್ತು ಸಾಲ ಪಡೆದ ವ್ಯಕ್ತಿಯ ಪ್ಯಾನ್ ಕಾರ್ಡ್ ಜೋಡಣೆ ಮಾಡಲಾಗುತ್ತದೆ. ಹಾಗಾಗಿ ಸಾಲ ಪಡೆದ ಪಡಿತರ ಚೀಟಿ ಹೊಂದಿದವರು ಜಿಎಸ್ಟಿ ಪಾವತಿದಾರ ಆಗುತ್ತಿದ್ದಾರೆ. ಒಂದು ವೇಳೆ ಸಾಲ ಪಡೆಯುವ ವ್ಯಕ್ತಿಗೆ ಜಾಮೀನು ನೀಡಿದ್ದರೂ ಸಹ ಜಾಮೀನು ನೀಡಿರುವ ಪಡಿತರ ಚೀಟಿ ಹೊಂದಿದ ವ್ಯಕ್ತಿಯನ್ನೂ ಸಹ ಜಿಎಸ್ಟಿ ಪಾವತಿದಾರ ಪಟ್ಟಿಗೆ ಸೇರ್ಪಡೆ ಗೊಳಿಸಲಾಗುತ್ತದೆ. ತದ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಕೆವೈಸಿ ಮಾಡಿದ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿದವರು ಜಿಎಸ್ಟಿ ಪಾವತಿದಾರ ಎಂದು ತಂತ್ರಾಂಶದಲ್ಲಿ ಬಿಂಬಿಸುತ್ತಿದೆ.
ವರ್ಷವಾದರೂ ಮುಗಿಯದ ಗೋಳು:
ಜಿಎಸ್ಟಿ ಸಮಸ್ಯೆ ಬೆಳಕಿಗೆ ಬಂದು ವರ್ಷವೇ ಕಳೆದರೂ ಇನ್ನೂ ಈ ಸಮಸ್ಯೆ ಬಗೆಹರಿದಿಲ್ಲ. ಕಳೆದ ಆ. 5, 2024ರಂದೇ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚಿಸಿದೆ. ಆದರೆ, ಜಿಎಸ್ಟಿ ಸಮಸ್ಯೆಯನ್ನು ಕೇಂದ್ರವೇ ಬಗೆಹರಿಸಬೇಕಾದ ಹಿನ್ನೆಲೆ ಸಮಸ್ಯೆ ಇನ್ನೂ ಜಟೀಲವಾಗುತ್ತ ಸಾಗಿದೆ. ದಿನದಿಂದ ದಿನಕ್ಕೇ ಅಜಿರ್ಗಳು ಬಾಕಿ ಉಳಿಯುವ ಸಂಖ್ಯೆ ದ್ವೀಗುಣವಾಗುತ್ತಿವೆ.
ಕೋಟ್:
ಜಿಲ್ಲೆಯಲ್ಲಿ 666 ಅರ್ಹ ಗೃಹಲಕ್ಷಿ$್ಮಯರಿಗೆ ಜಿಎಸ್ಟಿ ಸಮಸ್ಯೆ ಇದೆ. ಜಿಎಸ್ಟಿ ಸಮಸ್ಯೆ ಎದುರಿಸುತ್ತಿರುವ ಮಾಹಿತಿಯನ್ನು ಆಥಿರ್ಕ ಇಲಾಖೆಗೆ ಕಳುಹಿಸಲಾಗಿದೆ. ಆಥಿರ್ಕ ಇಲಾಖೆ ಅನುಮತಿ ನೀಡಿದ ನಂತರ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮಾವಣೆ ಆಗಲಿದೆ.
ಪದ್ಮಾವತಿ, ಡಿಡಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ