ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ವಿವಿಧ ಮಾನಂದಡಗಳನ್ನು ಅನುಸರಿಸಿರುವ ಗೋವಿಂದರಾವ ಸಮಿತಿಯು ಆಯಾ ವಲಯದಲ್ಲಿ ಕೊರತೆ, ತೀವ್ರ ಕೊರತೆ ಮತ್ತು ಅತ್ಯಂತ ತೀವ್ರ ಕೊರತೆ ಅನುಭವಿಸುತ್ತಿರುವುದನ್ನು ಗಮನಿಸಿದೆ. ಈ ಮಾನಂಡಗಳ ಅನ್ವಯ, ಜಿಲ್ಲೆಯ ರೋಣ ತಾಲೂಕು ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಲಿತಾಂಕ ಹೊಂದಿರುವ ತಾಲುಕುಗಳ ಪಟ್ಟಿಯಲ್ಲಿ 37ನೇ ಸ್ಥಾನ ಹೊಂದಿದ್ದು, ಆದಾಯ ವಲಯದಲ್ಲಿ ಅತೀ ತೀವ್ರ ಕೊರತೆ, ಆರೋಗ್ಯ ವಲಯದಲ್ಲಿ ಕೊರತೆ ಹಾಗೂ ಶಿಕ್ಷಣ ವಲಯದಲ್ಲಿ ಅತ್ಯಂತ ತೀವ್ರ ಕೊರತೆ ಅನುಭವಿಸುತ್ತಿದೆ. ಅದೇ ರೀತಿ ಜಿಲ್ಲೆಯ ಮುಂಡರಗಿ ತಾಲೂಕು 50ನೇ ಸ್ಥಾನದಲ್ಲಿದೆ. ಅದೇ ರೀತಿ ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಅತಿ ಹಿಂದುಳಿದ ಲಿತಾಂಕ ಹೊಂದಿರುವ ತಾಲೂಕುಗಳ ಪೈಕಿ ನರಗುಂದ 6ನೇ ಸ್ಥಾನ, ಗದಗ ತಾಲೂಕು 51ನೇ ಸ್ಥಾನ ಹೊಂದಿದೆ. ಆದಾಯ, ಆರೋಗ್ಯ ಮತ್ತು ಶಿಕ್ಷಣ ವಲಯದಲ್ಲಿ ಅಭಿವೃದ್ಧಿ ಹೊಂದಿದ ತಾಲೂಕುಗಳು ಜಿಲ್ಲೆಯಲ್ಲಿಲ್ಲ.