ಗದಗ ನಗರದ ಪ್ರಥಮ ಆಟೋ ಚಾಲಕಿ ರಾಖಾ ಅವರ ಮನೆಗೆ ಭೇಟಿ ನೀಡಿ ದಿನಸಿ ಕಿಟ್ ವಿತರಿಸಲಾಯಿತು. ವೆಂಕನಗೌಡ ಗೋವಿಂದಗೌಡ್ರ, ರವಿ ಕರಬಸಣ್ಣವರ, ಅಮರೇಶ ಅಂಗಡಿ, ಯಲ್ಲಪ್ಪ ಹೊಂಬಾಳ, ಕುಮಾರ ಜಗಳೂರು, ಮಂಜುನಾಥ ಮಟ್ಟಿ, ಚಂದ್ರುಗೌಡ ಸಂಕನಗೌಡ್ರ, ಈಶ್ವರ ಗುಡಿಮನಿ, ಶ್ರೀನಿವಾಸ ಖೋಡೆ, ಪ್ರವಿಣ ಛಲವಾದಿ ಸೇರಿದಂತೆ ಇತರರು ಇದ್ದರು.
ಮಧ್ಯಪ್ರಾಚ್ಯ ಯುದದ ಪರಿಣಾಮ ಆಟೋ ಚಾಲಕರ ಪರಸ್ಥಿತಿ ಕಷ್ಟಕರವಾಗಿದೆ. ಆಟೋ ಚಾಲಕರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ಯುದ್ಧದಿಂದ ಸಂಕಟಕ್ಕೆ ಸಿಲುಕಿದ ಗದಗ ನಗರದ ಪ್ರಥಮ ಮಹಿಳಾ ಆಟೋ ಚಾಲಕಿ ರೇಖಾ ಹಳ್ಳೂರ ಅವರ ಮನೆಗೆ ಬುಧವಾರ ಭೇಟಿ ನೀಡಿ ಎರಡು ತಿಂಗಳ ದಿನಸಿ ಕಿಟ್ ಕೊಟ್ಟು ಮಾತನಾಡಿದ ಅವರು, ಆಟೋ ಚಾಲಕರಿಗೆ ಪ್ರತಿ ತಿಂಗಳ ಬ್ಯಾಂಕಿನ ಸಾಲದ ಕಂತುಗಳು, ಅದರ ರಿಪೇರಿಯ ಖರ್ಚುಗಳು ಬರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದಂತೆ ಯುದ್ಧ ಮುಗಿಯುವವರೆಗೆ ಪ್ರತಿ ತಿಂಗಳಿಗೆ ಆಟೋ ಚಾಲಕರಿಗೆ 15 ಸಾವಿರ ಗೌರವ ದನ ನೀಡಬೇಕು ಅಥವಾ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದಂತೆ ಆಟೋ ಚಾಲಕರು ಯುದ್ಧ ಮುಗಿಯುವವರೆಗೆ ಪೆಟ್ರೋಲ್ ಬಳಿಕೆ ಮಾಡಬೇಕು. ಆಟೋ ಚಾಲಕರು ಪೆಟ್ರೋಲ್ ಬಳಕೆ ಮಾಡಬೇಕೆಂದರೆ ಅದಕ್ಕೆ ಮೈಲೇಜ ಇರುವುದಿಲ್ಲ. ಆದ ಕಾರಣ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಪ್ರತಿದಿನದಂತೆ 3 ಲೀಟರ್ ಪೆಟ್ರೋಲಿಗೆ ಸಬ್ಸಿಡಿ ನೀಡಬೇಕು ಎಂದು ವೆಂಕನಗೌಡ ಗೋವಿಂದಗೌಡ್ರ ರಾಜ್ಯ ಸರ್ಕಾರ ಮನವಿ ಮಾಡಿದವರು.
ಈ ಸಂದರ್ಭದಲ್ಲಿ ರವಿ ಕರಬಸಣ್ಣವರ, ಅಮರೇಶ ಅಂಗಡಿ, ಯಲ್ಲಪ್ಪ ಹೊಂಬಾಳ, ಕುಮಾರ ಜಗಳೂರು, ಮಂಜುನಾಥ ಮಟ್ಟಿ, ಚಂದ್ರುಗೌಡ ಸಂಕನಗೌಡ್ರ, ಈಶ್ವರ ಗುಡಿಮನಿ, ಶ್ರೀನಿವಾಸ ಖೋಡೆ, ಪ್ರವಿಣ ಛಲವಾದಿ ಸೇರಿದಂತೆ ಇತರರು ಇದ್ದರು.