ಉದ್ಯಾನವನ ನಿರ್ವಹಣೆಗೆ ಕಳೆದ ಎರಡೂ ವರ್ಷಗಳಲ್ಲಿ 62 ಲಕ್ಷ ರೂ. ವ್ಯಯ

Gadag Garden
Gadag Garden
Published on
ಕಳೆದ ಎರಡೂ ವರ್ಷಗಳಲ್ಲಿ 62 ಲಕ್ಷ ರೂ. ನಿರ್ವಹಣೆಗೆ ವ್ಯಯ
ಕುಷ್ಠರೋಗದಂತೆ ಕಾಣುತ್ತಿವೆ ನಗರದ ಉದ್ಯಾನವನಗಳು
ಲೆಕ್ಕಕ್ಕೆ ಖರ್ಚು, ಆದರೆ ನಿರ್ವಹಣೆ ಶೂನ್ಯ
ಶಿವಾನಂದ ಹಿರೇಮಠ ಗದಗ 
ನಗರದ ಜನರಿಗೆ ವಾಯು ವಿಹಾರ, ವ್ಯಾಯಾಮ, ಸಕಾರಾತ್ಮಕ ಸಮಯ ಕಳೆಯಲು ಸುಸಜ್ಜಿತವಾಗಿ ಇರಬೇಕಾದ ನಗರದ ಉದ್ಯಾನವನಗಳಿಗೆ ಪ್ರತಿ ವರ್ಷ ಹತ್ತಾರು ಲಕ್ಷ ರೂ ವ್ಯಯಿಸಿದರೂ ಬದಲಾಗುತ್ತಿಲ್ಲ. ಬದಲಾಗಿ ಕುಷ್ಠ ರೋಗದಂತೆ ಕಾಣುತ್ತಿವೆ. ನಿರ್ವಹಣೆಗೆ ಪ್ರತಿ ವರ್ಷ ಹತ್ತಾರು ಲಕ್ಷ ಸುರಿದರೂ ನಿರ್ವಹಣೆ ಶೂನ್ಯ ಎಂಬುದು ಉದ್ಯಾನವನಗಳ ಇಂದಿನ ಭೌತಿಕ ಪರಿಸ್ಥಿತಿ ಗಮನಿಸಿದರೆ ಅರ್ಥವಾಗುತ್ತಿದೆ. ನಿರ್ವಹಣೆ ಆಗುತ್ತಿಲ್ಲವೇಕೆ? ಅಥವಾ ಮೇಲುಸ್ತುವಾರಿ ನಡೆಸುತ್ತಿಲ್ಲವೇ ಎಂಬ ಅನುಮಾನ ಮೂಡುತ್ತಿದೆ. 
ಹಣ ವ್ಯರ್ಥ:
ನಗರಸಭೆ ಅಡಿಯಲ್ಲಿ ಇರುವ 42 ಉದ್ಯಾನವ ನಿರ್ವಹಣೆಗೆ ಕಳೆದ ಎರಡು ವರ್ಷಗಳಲ್ಲಿ ಅಂದಾಜು 62 ಲಕ್ಷ ರೂ. ವ್ಯಯಿಸಲಾಗಿದೆ. ಆದರೂ ನಗರದಲ್ಲಿ ಒಂದೂ ಸುಸಜ್ಜಿತ ಉದ್ಯಾನವನಗಳನ್ನು ರ್ದುಬಿನ್​ ಹಾಕಿ ನೋಡುವ ಸ್ಥಿತಿ ಉದ್ಭವಿಸಿದೆ. ಮೂಲ ಸೌಕರ್ಯದಿಂದ ವಂಚಿತವಾಗಿವೆ. ಅಕ್ರಮ -ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗಿವೆ. ನಗರದ ಹಲವು ಉದ್ಯಾನಗಳಿಗೆ ದಶಕಗಳ ಇತಿಹಾಸವಿದೆ. ಹಲವು ಉದ್ಯಾನದ ಒಪನ್​ ಜಿಮ್​, ಬಯಲು ರಂಗಮಂದಿರಗಳು ಇವೆ. ಆದರೆ ನಿರ್ವಹಣೆ ಕೊರತೆಯಿಂದ ಅವೆಲ್ಲವೂ ದುಸ್ಥಿತಿಗೆ ಬಂದು ನಿಂತಿವೆ. ಸ್ವಚ್ಛತೆ ಕೊರತೆ ಪ್ರಮುಖವಾಗಿದೆ. ಉದ್ಯಾನವನಗಳು ಕಸಕಡ್ಡಿ ತುಂಬಿ ತುಳುಕುತ್ತಿವೆ. ಮಳೆ ನೀರು ನಿಲ್ಲುವ ಸ್ಥಳಗಾಳಾಗಿ ಬದಲಾಗಿವೆ. ಮಕ್ಕಳ ಆಟಕ್ಕೆ ಮೀಸಲಾದ ಜಾಗದಲ್ಲಿ ಪರಿಕರಗಳು ಕಿತ್ತು ಹೋಗಿವೆ. ಜಾರುಬಂಡಿ, ಜೋಕಾಲಿ ಮುರಿದು ಬಿದ್ದಿವೆ. ಕಬ್ಬಿಣದ ಸಾಮಾನುಗಳು ತುಕ್ಕು ಹಿಡಿದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಉದ್ಯಾನ ನಿರ್ವಹಣೆ ಕೊರತೆ ಎದುರಿಸುತ್ತಿರುವ ಜೊತೆಗೆ ಅಕ್ರಮ- ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗಿದೆ. ಸಂಜೆಯಾಗುತ್ತಲೆ ಕುಡುಕರು ಉದ್ಯಾನದ ಕಲ್ಲಿನ ಆಸನಗಳ ಮೇಲು ಕುಳಿತು ರಾಜಾರೋಷವಾಗಿ ಮದ್ಯ ಸೇವನೆ ಮಾಡುವುದು, ಗಾಂಜಾ ಸೇದುವುದು ಸಾಮಾನ್ಯವಾಗಿದೆ. ವಾಯು ವಿಹಾರಿಗಳು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಶಪಿಸುತ್ತಲೇ ಹೆಜ್ಜೆ ಹಾಕುವುದು ನಿತ್ಯವೂ ಕೇಳಿ ಬರುತ್ತದೆ. ಲಕ್ಷ ಲಕ್ಷ ರ್ಖಚಾದರೂ ಉದ್ಯಾನಗಳ ನಿರ್ವಹಣೆ ಏಕಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. 
ಬಾಕ್ಸ್​:
ಉದ್ಯಾನವನ ನಿರ್ವಹಣೆಗೆ ವ್ಯಯಿಸುವ ಅನುದಾನವನ್ನು ಪ್ರತಿ ತಿಂಗಳು ಬಿಡುಗಡೆ ಮಾಡದೇ ಎರಡೂ ಅಥವಾ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಆದರೆ, ಈ ಎರಡು ಮೂರು ತಿಂಗಳು ಉದ್ಯಾನವನಗಳ ನಿರ್ವಹಣೆ ಆಗುವುದಿಲ್ಲ. ನಿರ್ವಹಣೆ ಆಗದಿದ್ದರು ಬಿಲ್​ ಪಾವತಿ ಮಾಡಲಾಗುತ್ತದೆ. ವಿವಿದೋದ್ದೇಶ ಸಂಕ್ಕೆ ಉದ್ಯಾನವನ ನಿರ್ವಹಣೆ ಗುತ್ತಿಗೆ ನೀಡಿರುವ ನಗರಸಭೆ ಬಿಲ್​ ಪಾವತಿ ಮಾಡುತ್ತಿದೆ. ಆದರೆ, ನಿರ್ವಹಣೆ ಮಾಡದಿರುವ ಬಗ್ಗೆ ಪ್ರಶ್ನಿಸುತ್ತಿಲ್ಲ.
ಬಾಕ್ಸ್​
2023&24ನೇ ಸಾಲಿನಲ್ಲಿ ವಾರ್ಡ್​ ನಂ 29ರ ಶಿವಶರಣ ಹರಳಯ್ಯ ಉದ್ಯಾನವನ ಒಂದಕ್ಕೇ 2.88 ಲಕ್ಷ ಬಿಲ್​ ಪಾವತಿಸಲಾಗಿದೆ. ಒಂದೇ ಉದ್ಯಾನವನದ ನಿರ್ವಹಣೆಗೆ ಇಷ್ಟೊಂದು ಹಣ ವ್ಯಯಿಸಿದ್ದು ಅನುಮಾನಕ್ಕೆ ಕಾರಣವಾಗಿದೆ. ಅದೇ ರೀತಿ 2024 25 ಮತ್ತು 2025 26 ನೇ ಸಾಲಿನ  ಲಕ್ಷ ರೂ ವ್ಯಯಿಸಲಾಗಿದೆ. ಒಮದೇ ಉದ್ಯಾನವನದ ಮೇಲೆ ನಗರಸಭೆ ಇಷ್ಟೊಂದು ಪ್ರೀತಿ ಏತಕ್ಕೆ ಎಂಬ ಪ್ರಶ್ನೆ ಮೂಡುತ್ತಿದೆ. 
 ಬಾಕ್ಸ್​:
 * 2025&26ನೇ ಸಾಲಿನಲ್ಲಿ ಉದ್ಯಾನವನ ನಿರ್ವಹಣೆಗೆ 28 ಲಕ್ಷ ವ್ಯಯ
 * 2024&25ರಲ್ಲಿ 34.40 ಲಕ್ಷ ವ್ಯಯ
ಕೋಟ್​ 
ಉದ್ಯಾನವನಗಳ ನಿರ್ವಹಣೆ ಬಗ್ಗೆ ಪರಿಶೀಲಿಸಲಾಗುವುದು. ಅಕ್ರಮ ಕಂಡು ಬಂದರೆ ತನಿಖೆ ನಡೆಸಲಾಗುವುದು. ನಿರ್ವಹಣೆ ಹೊತ್ತ ಸಂ ಸಂಸ್ಥೆಗಳಿಗೆ ನೊಟೀಸ್​ ನೀಡಲಾಗವುದು  
 ರಾಜಾರಾಮ ಪವಾರ, ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ.
ಕೋಟ್​:
ನಿರ್ವಹಣೆ ಹೆಸರಲ್ಲಿ ಲಕ್ಷ ಲಕ್ಷ ಬಿಲ್​ ತೆಗೆಯಲಾಗುತ್ತಿದೆ. ಈ ಬಗ್ಗೆ ನಗರಸಭೆ ಸದಸ್ಯರಿಗೆ ಮಾಹಿತಿಯನ್ನೇ ನೀಡುವುದಿಲ್ಲ. ವಾರ್ಡಗಳಲ್ಲಿ ಮತದಾರರು ನಗರಸಭೆ ಸದಸ್ಯರನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ನಿರ್ವಹಣೆ ಹೆಸರಲ್ಲಿ ಹಣ ಪಾವತಿ ಆಗುತ್ತಿರುವುದು ಜನರಿಗೆ ಗೊತ್ತಾಗುವುದಿಲ್ಲ. ಇಂತಹ ಅಕ್ರಮಗಳ ತೆಡೆಗೆ ಜನ ಜಾಗೃತಿಗಳಾಗಬೇಕು. ನಿರ್ವಹಣೆ ಮೇಲುಸ್ತುವಾರಿ ನಡೆಸಬೇಕು.
 ಚಂದ್ರು ತಡಸದ, ನಗರಸಭೆ ಸದಸ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net