ಗದಗ ಜಿಲ್ಲೆಯಲ್ಲಿ 4.04 ಲಕ್ಷ ಮೌಲ್ಯದ 8.08 ಕೆ.ಜಿ.ಗಾಂಜಾ ನಾಶ

ಪೊಲೀಸ್​ ಇಲಾಖೆ ವತಿಯಿಂದ ಮಾದಕವಸ್ತುಗಳನ್ನು ನಾಶ ಪಡಿಸಲಾಯಿತು
ಪೊಲೀಸ್​ ಇಲಾಖೆ ವತಿಯಿಂದ ಮಾದಕವಸ್ತುಗಳನ್ನು ನಾಶ ಪಡಿಸಲಾಯಿತು
Published on
ವಿಜಯವಾಣಿ ಸುದ್ದಿಜಾಲ ಗದಗ
ಮಾದಕ ವಸ್ತುಗಳ ನಿರ್ಮೂಲನೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಜಿಲ್ಲಾ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 8.08 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ನಿಯಮಾನುಸಾರವಾಗಿ ಪೊಲೀಸ್​ ಇಲಾಖೆ ಶುಕ್ರವಾರ ನಾಶಪಡಿಸಿತು.
ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ಎನ್​ಡಿಪಿಎಸ್​ ಕಾಯ್ದೆಯಡಿ ದಾಖಲಾದ ಒಟ್ಟು ಎಂಟು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು 4,04,100 ಮೌಲ್ಯದ ಗಾಂಜಾ ಮಾದಕ ಪದಾರ್ಥವನ್ನು ವಿಲೇವಾರಿ ಮಾಡಲಾಯಿತು.
ನ್ಯಾಯಾಲಯದ ಆದೇಶದಂತೆ, ಜಿಲ್ಲಾ ಪೊಲೀಸ್​ ಅಧೀಕ್ಷಕರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಡ್ರಗ್​ ಡಿಸ್ಪೋಸರ್​ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಸಂರ್ಪೂಣ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಿತು. ಬಳಿಕ ಗಾಂಜಾವನ್ನು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಜೈವಿಕ ತ್ಯಾಜ್ಯ ವಿಲೇವಾರಿ ಟಕಕ್ಕೆ ಸಾಗಿಸಿ, ಪರಿಸರ ಸ್ನೇಹಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ ನಾಶಪಡಿಸಲಾಯಿತು.
ಮಾದಕ ವಸ್ತುಗಳು ಮತ್ತೊಮ್ಮೆ ದುಷ್ಕಮಿರ್ಗಳ ಕೈ ಸೇರದಂತೆ ತಡೆಯುವುದು, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ಸಮಾಜವನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ನ್ಯಾಯಾಲಯದ ಮಾರ್ಗಸೂಚಿ ಮತ್ತು ಎನ್​.ಡಿ.ಪಿ.ಎಸ್​. ಕಾಯ್ದೆಯ ನಿಯಮಾವಳಿ ಅಡಿಯಲ್ಲಿ ವಿಲೇವಾರಿ ಮಾಡಲಾಯಿತು.
ಗದಗ ಜಿಲ್ಲಾ ಪೊಲೀಸರು ಕಳೆದ ಕೆಲವು ತಿಂಗಳುಗಳಿಂದ ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ಅಕ್ರಮ ಸಂಗ್ರಹದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾವನ್ನು ನ್ಯಾಯಾಂಗ ಪ್ರಕ್ರಿಯೆ ರ್ಪೂಣಗೊಂಡ ಬಳಿಕ ಇದೀಗ ನಾಶಪಡಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ರೋಹನ್​ ಜಗದೀಶ, ಡಿಎಸ್ಪಿ ಮುರ್ತುಜಾ ಖಾದ್ರಿ ಸೇರಿದಂತೆ ಅಧಿಕಾರಿಗಳು ಇದ್ದರು.
ಕೋಟ್​
ಯುವ ಸಮುದಾಯವನ್ನು ಮಾದಕ ವ್ಯಸನದಿಂದ ದೂರವಿಡುವುದು ಹಾಗೂ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂರ್ಪೂಣವಾಗಿ ನಿರ್ಮೂಲನೆ ಮಾಡುವುದು ಪೊಲೀಸ್​ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ.
ರೋಹನ್​ ಜಗದೀಶ. ಎಸ್ಪಿ ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net