ಸಿಕ್ಕಿರುವ ಅವಕಾಶ ಬಳಸಿ ಉಕ ಭಾಗದ ಅಭಿವೃದ್ಧಿಗೆ ಶ್ರಮೀಸುತ್ತೇನೆ: ಸ್ಪೀಕರ್ ಜಿ.ಎಸ್. ಪಾಟೀಲ

G S Patil Program
G S Patil Program
Published on
ವಿಜಯವಾಣಿ ಸುದ್ದಿಜಾಲ ಗದಗ
ನನಗೆ ಸಿಕ್ಕಿರುವ ಅವಕಾಶವನ್ನು ನಾಡು ಮೆಚ್ಚುವಂತೆ ಕಾರ್ಯ ನಿರ್ವಹಿಸುತ್ತೇನೆ. ಅದಕ್ಕಾಗಿ ಜನರ ಆಶೀರ್ವಾದ ಬೇಕು ಎಂದು ವಿಧಾನಸಭೆ ಸ್ಪೀಕರ್ ಜಿ.ಎಸ್. ಪಾಟೀಲ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಆಯಾಮಕ್ಕೆ ನಾವು ಸಾಕ್ಷಿ ಆಗಿದ್ದೇವೆ. ದಿವಂಗತ ಕೆ.ಎಚ್. ಪಾಟೀಲರು ಸಹಕಾರ ರಂಗಕ್ಕೆ ಕೊಡುಗೆ ನೀಡಿದ್ದಾರೆ. ಅವರ ಸಮ್ಮುಖದಲ್ಲೇ ನಾನು ಜನಸೇಗೆ ಬಂದಿದ್ದೇನೆ. ರೈತರು, ಬಡವರ ಸೇವೆ ಮಾಡುವ ವಿಧಾನವನ್ನು ಕೆ.ಎಚ್. ಪಾಟೀಲ ಅವರಿಂದ ಕಲಿತು ಅಳವಡಿಸಿಕೊಂಡಿದ್ದೇನೆ ಎಂದರು.
ಸ್ಪೀಕರ್ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ವಿರೋಧ ಇದ್ದೆ ಇರುತ್ತದೆ. ಅದನ್ನು ಹೊರತುಪಡಿ ಎಲ್ಲರನ್ನೂ ಸಮನಾಗಿ ಕಂಡು ಕಾರ್ಯ ಮಾಡಬೇಕು ಕೆಲವೊಮ್ಮೆ ವಿರೋಧ ಪಕ್ಷದವರು ಆಡಳಿತ ಪಕ್ಷದ ನಿರ್ಣಯವನ್ನು ವಿರೋಧಿಸಿದಾಗ ಕೆಲವೊಮ್ಮೆ ಅವರ ನಿರ್ಣಯಗಖು ಸೂಕ್ತವು ಅನಿಸುತ್ತದೆ. ಕಾವೇರಿ ಸಮಸ್ಯೆ, ಬಿಡದಿ ಸಮಸ್ಯೆ, ಕೆಪಿಎಸ್ಸಿ ಸಮಸ್ಯೆ ಇದೆ. ಇದೆಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ಎಲ್ಲರೂ ಸಮನಾದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಬರ ನಿರ್ವಹಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕಿದೆ ಎಂದರು.
ಗದಗ ಜಿಲ್ಲೆಯಲ್ಲಿ ಎಲ್ಲ ರಾಜಕೀಯ ನಾಯಕರು ಒಗ್ಗಟ್ಟಾಗಿದ್ದೇವೆ ಎಂದ ಜಿ.ಎಸ್. ಪಾಟೀಲ ಕೆಲ ಸಂದರ್ಭದಲ್ಲಿ (ಸಚಿವ ಸಂಪುಟ ವಿಸ್ತರಣೆ) ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಬಂದಿದ್ದು ಸತ್ಯ. ಅದೆಲ್ಲವನ್ನು ಬದಿಗಿಟ್ಟು ಎಲ್ಲರೂ ಒಕ್ಕಟ್ಟಾಗಿ ಇರಬೇಕು ಎಂದರು.
ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಮಾತನಾಡಿ, ಸಭಾಪತಿಯಾಗಿ ವಿರೋಧ ಹಾಗೂ ಆಡಳಿತ ಪಕ್ಷ ಎರಡನ್ನು ಸಮಾನವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಭಾವನೆಗೆ ಅವಕಾಶ ಕೊಡದೇ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ ಎಂದು ಹೇಳಿದರು.
ಉಪ ಸಭಾಧ್ಯಕ್ಷೆ ಉಮಾಶ್ರೀ ಮಾತನಾಡಿ, ಉಪ ಸಭಾಧ್ಯಕ್ಷ ಹುದ್ದೆ ಎಂಬುದು ಸಂವಿಧಾನದಲ್ಲಿ ಉನ್ನತ ಸ್ಥಾನ ಇದೆ. ಸಂವಿಧಾನ ಬದ್ಧ ನಡುವಳಿಕೆಗಳನ್ನು ಸದನದಲ್ಲಿ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ನೀಡಲಾಗಿದೆ. ಎಲ್ಲ ಧರ್ಮಗಳಿಗೆ ಸಂವಿಧಾನದಲ್ಲಿ ಸಮಾನತೆ ನೀಡಲಾಗಿದೆ. ಬಹಳ ವರ್ಷಗಳ ನಂತರ ಮಹಿಳೆಗೆ ಈ ಹುದ್ದೆ ನೀಡಿದ್ದು ವಿಶೇಷ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್. ಎಫ್. ಜಕ್ಕಪ್ಪನ್ನವರ ಮಾತನಾಡಿ, ಜಿ.ಎಸ್. ಪಾಟೀಲರಿಗೆ ಹಲವು ಗುರಿಗಳಿವೆ. ಅವರು ಗುರಿ ಇಟ್ಟರೆ ಬಿಡುವುದಿಲ್ಲ. ಧಾರವಾಡ ಗದಗ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಘೋಷಿಸಲು ಸರ್ಕಾರಕ್ಕೆ ನಿರ್ದೇಶಿಸಿ ಸಭಾಧ್ಯಕ್ಷರ ಅಧಿಕಾರ ಆರಂಭದಲ್ಲೆ ಸ್ಪಷ್ಟಪಡಿಸಿದರು.‌ಮೋಡಬಿತ್ತನೆ ಮಾಡಲು ಸರ್ಕಾರಕ್ಕೆ ಸಲಹೆ ನೀಡಿದರು. ಈ ಎರಡು ಸಲಹೆಗಳನ್ನು ಸಿಎಂ ಡಿ.ಕೆ. ಶಿವಕುಮಾರ್ ಸ್ವೀಕರಿಸಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.
ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಜಿ.ಎಸ್. ಪಾಟೀಲ ಮತ್ತು ಸಲೀಂ ಅಹಮ್ಮದ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಸಭಾಪತಿ, ಸಭಾಧ್ಯಕ್ಷ ಆಗುವ ಅವಕಾಶ ಸಿಕ್ಕಿದೆ. ರಾಜ್ಯಪಾಲರ ನಂತರ ಗೌರವ ಸ್ಥಾನ ಸಿಗುವ ಎರಡೂ ಸ್ಥಾನ ಜಿಲ್ಲೆಗೆ ಲಭಿಸಿದೆ. ಗದಗ ಜಿಲ್ಲೆಗೆ ಇದೊಂದು ಗೌರವದ ಅವಕಾಶ. ರಾಜ್ಯದ ಜನರ ಹಕ್ಕುಗಳನ್ನು ರಕ್ಷಿಸುವ, ಜನರಿಗೆ ಸೌಕರ್ಯಗಳನ್ನು ಒದಗಿಸಲು ಉತ್ತಮ ಅವಕಾಶ ಒದಗಿ ಬಂದಿದೆ. ಸಭಾಪತಿ, ಸಭಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳು ಎಂದರು.
ಈಗ ವಿಧಾನಸಭೆಗಳ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ವಿಧಾನ ಸೌದಕ್ಕಿಂತೂ ಗ್ರಾಮ ಪಂಚಾಯತಿಗಳೇ ಉತ್ತಮ ಎಂಬ ಅಭಿಪ್ರಾಯ ಜನರಲ್ಲಿದೆ. ಆದರೆ, ಪ್ರಜಾತಂತ್ರ ವ್ಯವಸ್ಥೆ ಉತ್ತಮಗೊಳಿಸುವ ಅಧಿಕಾರ ಈಗ ಸಭಾಪತಿ ಜಿ.ಎಸ್. ಪಾಟೀಲ, ಸಭಾಧ್ಯಕ್ಷ ಸಲೀಂ ಅಹಮ್ಮದ ಅವರಿಗೆ ಸಿಕ್ಕಿದೆ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದವಿಲ್ಲದೆ ಅಧಿವೇಶನ ನಡೆಸಿ ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.
ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಶಾಸಕ ಎಚ್.ಕೆ. ಪಾಟೀಲ, ಸಭಾಪತಿ ಜಿ.ಎಸ್. ಪಾಟೀಲ, ಉಪ ಸಭಾಪತಿ ಉಮಾಶ್ರೀ, ಉಪ ಸಭಾಧ್ಯಕ್ಷ ಮಂಕಾಳವೈದ್ಯ, ಜಿ.ಕೆ. ಆದಪ್ಪಗೌಡ್ರ, ಮಾಜಿ ಸಂಸದ ಐ.ಜಿ. ಸನದಿ, ಆರ್. ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಶಾಸಕ ಎನ್.ಎಚ್. ಕೋನರೆಡ್ಡಿ, ಎಫ್. ಎಚ್. ಜಕ್ಕಪ್ಪನ್ನವರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೃಷ್ಣ ಪರಾಪೂರೆ, ಶಕುಂತಲಾ ಅಕ್ಕಿ, ಸುಜಾತಾ ದೊಡ್ಡಮನಿ, ವಾಸಪ್ಪ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ, ಬಿ.ಬಿ. ಅಸೂಟಿ, ಅಕ್ಬರಸಾಬ ಬಬರ್ಚಿ, ಶೇಖಣ್ಣ ಗದ್ದಿಕೇರಿ, ಮುರಗೇಶ ಬಡ್ನಿ, ಲೋಕನಾಥ ಕಬಾಡಿ, ಸಾಧಿಕ ನರಗುಂದ, ಆರ್.ಕೆ. ಪಾಟೀಲ, ಪ್ರಭು ಬುರಬುರೆ, ಗುರಣ್ಣ ಬಳಗಾನೂರ, ರವಿ ಮೂಲಿಮನಿ, ಟಿ. ಈಶ್ವರ, ಪರಶುರಾಮ ಅಳಗವಾಡಿ, ಡಿ.ಆರ್. ಪಾಟೀಲ ಇತರರು ಇದ್ದರು
ಬಾಕ್ಸ್:
1956 ರಿಂದಲೂ ಯಾರನ್ನೂ ಸಭಾಧ್ಯಕ್ಷ ಸ್ಥಾನದಿಂದ ಬಲವಂತವಾಗಿ ತೆಗೆದು ಹಾಕಿದ್ದಿಲ್ಲ. ಆದರೆ, ನನ್ನನ್ನು ಬಲವಂತವಾಗಿ ಕಾಂಗ್ರೆಸ್ ತೆಗೆದು ಹಾಕಿತು ಎಂಬ ಬಸವರಾಜ ಹೊರಟ್ಟಿ ಮಾತು ಆಧಾರ ರಹಿತ. ಹಲವು ದಶಕದಿಂದ ಉನ್ನತ ಸ್ಥಾನ ಹೊಂದಿದ ಹೊರಟ್ಟಿ ಅವರನ್ನು ಗೌರವದಿಂದ ರಾಜೀನಾಮೆ ಕೇಳಿದ್ದೇವೆ. ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಬಾರದು ಎಂಬ ದೃಢ ನಿರ್ಣಯವನ್ನು ಕಾಂಗ್ರೆಸ್ ತೆಗೆದುಕೊಂಡಿತ್ತು. ಹಾಗಾಗಿ, ಅವರನ್ನು ಗೌರವ ಪೂರ್ವಕವಾಗಿ ಅಭಿನಂಧಿಸಿ ಬಿಳ್ಕೊಟ್ಟಿದ್ದೇವೆ ಎಂದು ಎಚ್.ಎಫ್ ಜಕ್ಕಪ್ಪನ್ನವರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net