ಮಧುಮೇಹ ನಿಯಂತ್ರಣಕ್ಕೆ ಮಾನಸಿಕ ಬೆಂಬಲ ಮುಖ್ಯ: ಡಾ. ಹುಸೇನ ಅಭಿಮತ

 ಗದಗ ನಗರದ ಖಾಸಗಿ ಹೊಟೆಲ್​ ನಲ್ಲಿ ಮದುಮೇಹ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾವರವನ್ನು ಡಾ. ಹುಸೈನ್​ ಉದ್ಗಾಟಿಸಿದರು. ಡಾ. ಅಜಯ ರಾಜು, ಡಾ. ಸ್ಟೀನ್​, ಪ್ರೊ. ಬ್ಯೂಲಾ ಪ್ರಿಯದಶಿರ್ನಿ ಇತರರು ಇದ್ದರು.
ಗದಗ ನಗರದ ಖಾಸಗಿ ಹೊಟೆಲ್​ ನಲ್ಲಿ ಮದುಮೇಹ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾವರವನ್ನು ಡಾ. ಹುಸೈನ್​ ಉದ್ಗಾಟಿಸಿದರು. ಡಾ. ಅಜಯ ರಾಜು, ಡಾ. ಸ್ಟೀನ್​, ಪ್ರೊ. ಬ್ಯೂಲಾ ಪ್ರಿಯದಶಿರ್ನಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮಧುಮೇಹ ಕೇವಲ ಔಷಧದಿಂದ ನಿಯಂತ್ರಣಕ್ಕೆ ಬರುವುದಿಲ್ಲ. ಆಹಾರ, ವ್ಯಾಯಾಮ, ಪಾದದ ಆರೈಕೆ ಮತ್ತು ಮಾನಸಿಕ ಬೆಂಬಲ ಎಲ್ಲವೂ ಮುಖ್ಯ ಆಗುತ್ತದೆ. ರೋಗಿಯ ಆರೈಕೆಯಲ್ಲಿರುವ ನರ್ಸ್​ಗಳು ಈ ಎಲ್ಲಾ ಅಂಶಗಳನ್ನು ಗಮನಿಸಬಲ್ಲರು ಎಂದು ಸಿಎಂಸಿ ವೆಲ್ಲೂರಿನ ಹಿರಿಯ ವೈದ್ಯ ಡಾ. ಅನ್ವರ್​ ಹುಸೇನ ಹೇಳಿದರು.
ಕ್ರಿಶ್ಚಿಯನ್​ ಮೆಡಿಕಲ್​ ಕಾಲೇಜು, ಬಾಸೆಲ್​ ಮಿಷನ್​ ಸಿಎಸ್​ಐ ಆಸ್ಪತ್ರೆ ಸಹಯೋಗದಲ್ಲಿ ನಗರದ ಖಾಸಗಿ ಹೊಟೆಲ್​ ನಲ್ಲಿ ಏರ್ಪಡಿಸಿದ್ದ ಮದಮೇಹ ಮಧುಮೇಹ ನಿರ್ವಹಣೆ ಕುರಿತು ನಸಿಂರ್ಗ್​ ಶಿಣ (ಸಿ.ಎನ್​.ಇ) ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹೊಸ ಚಿಕಿತ್ಸಾ ವಿಧಾನಗಳು, ಇನ್ಸುಲಿನ್​ ನಿರೋಧಕತೆ ಮತ್ತು ಗರ್ಭಾವಸ್ಥೆಯ ಮಧುಮೇಹ ನಿರ್ವಹಣೆ ಕುರಿತು ವಿವರಿಸಿದ ಅವರು, ಸುರತ ಇನ್ಸುಲಿನ್​ ಚುಚ್ಚುಮದ್ದು ತಂತ್ರ, ಇನ್ಸುಲಿನ್​ ಪೆನ್​ ಬಳಕೆ, ಸ್ವಯಂ ರಕ್ತ ಗ್ಲುಕೋಸ್​ ಪರೀೆ ತರಬೇತಿ ನೀಡುವ ವಿಧಾನ ಕುರಿತು ವಿವರಿಸಿದರು.
ಬಾಸೆಲ್​ ಮಿಷನ್​ ನಸಿಂರ್ಗ್​ ಕಾಲೇಜಿನ ಪ್ರಾಂಶುಪಾಲ ಪ್ರೊ. ಬ್ಯೂಲಾ ಪ್ರಿಯದಶಿರ್ನಿ ಮಾತನಾಡಿ ಭಾರತೀಯ ನಸಿಂರ್ಗ್​ ಪರಿಷತ್ತಿನ (ಐಎನ್​ಸಿ) ಮಾರ್ಗಸೂಚಿಯಂತೆ, ಉತ್ತರ ಕರ್ನಾಟಕ ಭಾಗದಲ್ಲಿ ಮಧುಮೇಹದಂತಹ ನಿದಿರ್ಷ್ಟ ಕಾಯಿಲೆಗಳ ಕುರಿತು ತರಬೇತಿ ಅವಕಾಶಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ ಎಂದರು.
ಬಾಸೆಲ್​ ಮಿಷನ್​ ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ಅಜಯ ರಾಜು ಮಾತನಾಡಿ ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಶೇ.11 ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಐಸಿಎಂಆರ್​ ಅಧ್ಯಯನ ಹೇಳುತ್ತದೆ. ಗ್ರಾಮೀಣ ಭಾಗದಲ್ಲಿ ರೋಗ ಪತ್ತೆಯಾಗುವುದು ತಡವಾಗುತ್ತದೆ. ಹೀಗಾಗಿ ಪ್ರಾಥಮಿಕ ಹಂತದಲ್ಲೇ ನರ್ಸ್​ಗಳು ತಪಾಸಣೆ, ಸಲಹೆ ಮತ್ತು ಮಧುಮೇಹದ ಆರೋಗ್ಯ ಕಾಳಜಿ ಮಾಡಿದರೆ ತೊಂದರೆಗಳನ್ನು ತಡೆಗಟ್ಟಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಸಿಂರ್ಗ್​ ಕಾಲೇಜುಗಳಿಂದ 125 ಕ್ಕೂ ಹೆಚ್ಚು ನರ್ಸ್​ಗಳು ಭಾಗವಹಿಸಿದ್ದರು.
ಡಾ. ಸ್ಟೀನ್​, ಹಿರಿಯ ಶುಶ್ರೂಷಾಧಿಕಾರಿಗಳು ಹಾಗೂ ನಸಿಂರ್ಗ್​ ವಿದ್ಯಾಥಿರ್ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net