7 ತಾಲೂಕು, 122 ಗ್ರಾಪಂ ಹಾಗೂ 330 ಗ್ರಾಮಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಶೇ. 63ರಷ್ಟು ಮಳೆ ಆಧಾರಿತ ಕೃಷಿ ಭೂಮಿ ಇದೆ. ಜಿಲ್ಲೆಗೆ ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳ ಅಭಿವೃದ್ಧಿಗೆ ಹೆಚ್ಚುವರಿ 106 ಕೋಟಿ ಅನುದಾನಕ್ಕೆ ಯೋಜನಾ ಕರಡು ಪ್ರತಿ ಸಲ್ಲಿಕೆ ಆಗಿತ್ತು. ಆದರೆ, ಅದರಲ್ಲಿ ಹೊಲಗದ್ದೆಗಳ ರಸ್ತೆ, ಒಳಗಟ್ಟಿ ನಿರ್ಮಾಣ, ಒಡ್ಡು ನಿರ್ಮಾಣ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಬಜೆಟ್ ಹಂಚಿಕೆ ಮಾಡಲು ಸರ್ಕಾರ ಹಿಂದಡಿ ಇಟ್ಟಿತು.