ಬಾರದ 2544 ಕೋಟಿ ಅನುದಾನ! ಅಭಿವೃದ್ಧಿಗೆ ಹಿನ್ನೆಡೆ

Gadag Delimitation news
Gadag Delimitation news
Published on
ಶಾಸಕರ ಪ್ರಭಾವ ! ವಿಕೇಂದ್ರೀಕರಣ ವ್ಯವಸ್ಥೆಯಡಿ ಜಾರಿ ಇಲ್ಲ ಅನುದಾನ
ಶಿವಾನಂದ ಹಿರೇಮಠ, ಗದಗ
ವಿಕೇಂದ್ರೀಕರಣ ವ್ಯವಸ್ಥೆಯಡಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಅನುದಾನದ ಕೊರತೆ ಉಂಟಾಗಿದೆ. ಜಿಲ್ಲೆಯ ಗ್ರಾಮಗಳ ಅಭಿವೃದ್ಧಿಗೆ ಜಿಲ್ಲಾ ಯೋಜನಾ ವಿಭಾಗದಿಂದ ಸಲ್ಲಿಕೆ ಆಗಿದ್ದ ಹೆಚ್ಚುವರಿ 2544 ಕೋಟಿ ಅನುದಾನ ಬಿಡುಗಡೆ ಆಗದ ಹಿನ್ನೆಲೆ ಗ್ರಾಮ ಸಭೆಗಳಲ್ಲಿ ಅನುಮೂದಿತ ಯೋಜನೆಗಳ ಅನುಷ್ಠಾನಕ್ಕೆ ಭಾರೀ ಹಿನ್ನಡೆ ಆಗಿದ್ದು, ಪಂಚಾಯತ್​ ರಾಜ್​ ಕಾನೂನಿ ಅಡಿಯಲ್ಲಿ ನ್ಯಾಯಬದ್ಧವಾಗಿ ಗ್ರಾಮಗಳ ಅಭಿವೃದ್ಧಿಗೆ ಸಿಗಬೇಕಾಗಿದ್ದ ಅನುದಾನ ದೊರೆಯುತ್ತಿಲ್ಲ. ಇದರಿಂದ ವಿಕೇಂದ್ರೀಕರಣ ಎಂಬುದು ಪಂಚಾಯತ್​ ರಾಜ್ಯ ಕಾನೂನಿನ ಪುಸ್ತಕದಲ್ಲಿ ಮಾತ್ರ ಇದೆಯೆ ವಿನಹ ಭೌತಿಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ. ಮತ್ತೊಂದೆಡೆ, ಸ್ಥಳಿಯ ಶಾಸಕ, ಜನಪ್ರತಿನಿದಿಗಳು ತಮ್ಮ ಅಧಿಕಾರ ವ್ಯಾಪ್ತಿ ಕೈತಪ್ಪಿ ಹೋಗುತ್ತದೆ ಎಂಬ ಭಯದಿಂದಲೂ ಸಹ ಯೋಜನಾ ಸಮಿತಿ ವತಿಯಿಂದ ಸಲ್ಲಿಕೆ ಆಗಿದ್ದ ಯೋಜನೆಗಳ ಅನುಮೋದನೆ ತಡೆ ಉಂಟು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವು ಕೇಳಿ ಬಂದಿದೆ. ಕೇವಲ ಗದಗ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಈ ಆರೋಪ ಚಾಲ್ತಿಯಲ್ಲಿದೆ.
ಏನಿದು ಹೆಚ್ಚುವರಿ ಅನುದಾನ?
ಪಂಚಾಯತ್​ ರಾಜ್​ ಕಾಯಿದೆ ಸೆಕ್ಷನ್​ 3/ಇ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪೂಕರವಾದ ಯೋಜನೆಗಳನ್ನು ವಾರ್ಡಸಭೆಗಳಲ್ಲಿ ಸಿದ್ಧಪಡಿಸಿ, ಅದರ ಮೂಲಕ ಗ್ರಾಮ ಸಭೆ, ಜಿಪಂ ಸಭೆಗಳಲ್ಲಿ ಅನುಮೋದನೆ ಪಡೆದು ಜಿಲ್ಲಾ ಯೋಜನಾ ಸಮಿತಿ ವತಿಯಿಂದ ರಾಜ್ಯ ವಿಭಾಗದಕ್ಕೆ ಯೋಜನೆಗಳ ಒಟ್ಟು ವಿವಿರ ಮತ್ತು ಯೋಜನೆಗಳಿಗೆ ಬೇಕಾದ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಪಂಚಾಯತ್​ ರಾಜ್​ ಕಾಯಿದೆ ಸೆಕ್ಷನ್​ 309 ಹಾಗೂ 310ರಲ್ಲಿ ಈ ಬಗ್ಗೆ ಉಲ್ಲೇಖವಿದೆ. ಹಾಗೂ ಕಾನೂನುಬದ್ಧವಾಗಿ ಅನುದಾನ ಇದಾಗಿದ್ದು, ರಾಜ್ಯ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಬೇಕಾಗುತ್ತದೆ. ಗ್ರಾಮಗಳಲ್ಲಿ ರಸ್ತೆ, ನೀರು ಪೂರೈಕೆ, ಹೊಲಗದ್ದೆಗಳ ರಸ್ತೆ, ಭೌತಿಕ ಕಟ್ಟಡಗಳು, ಅಂಗನವಾಡಿ, ಗ್ರಾಮೀಣ ಸಾಮಾಜಿಕ ವ್ಯವಸ್ಥೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಗ್ರಾಮ ಸಭೆಗಳಲ್ಲಿ ಸಿದ್ಧಪಡಿಸಿ ಜಿಲ್ಲಾ ಯೋಜನಾ ಸಮಿತಿಗೆ ಕಳಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 5 ಲಕ್ಷಕ್ಕೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ಗ್ರಾಪಂಗಳಿಂದ ಯೋಜನೆ ಸಮಿತಿಗೆ ಸಲ್ಲಿಕೆ ಆಗಿತ್ತು. ಜಿಲ್ಲೆಯ ಈ 5 ಲಕ್ಷಕ್ಕೂ ಅಧಿಕಾರಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ 5175 ಕೋಟಿ ಪ್ರಸ್ತಾವನೆ ಸಿದ್ಧವಾಗಿತ್ತು. ಈ 5175 ಕೋಟಿಯಲ್ಲಿ ಜಿಪಂ ನಲ್ಲಿ ಅಗತ್ಯ 2631 ಕೋಟಿ ಅನುದಾನ ಇದ್ದು, ಇನ್ನೂಳಿದ ಕೊರತೆಯ 2544 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಯೋಜನಾ ಸಮಿತಿಯಿಂದ ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಆಗಿತ್ತು. ಆದರೆ ಆಥಿರ್ಕ ಸಂಪನ್ಮೂಲಕದ ಕೊರತೆಯಿಂದ ರಾಜ್ಯ ಸರ್ಕಾರ ಬಜೆಟ್​ ನಲ್ಲಿ ಅನುದಾನ ಮೀಸಲಿಟ್ಟಿಲ್ಲ ಎಂದು ತಿಳಿದು ಬಂದಿದೆ.
ಜನಪ್ರತಿನಿಧಿಗಳ ಪ್ರಭಾವ:
ಹೆಚ್ಚುವ 2544 ಕೋಟಿ ಅನುದಾನ ನೀಡದಿರುವುದಕ್ಕೆ ಜನಪ್ರತಿನಿಧಿಗಳ ಪ್ರಭಾವವು ಒಂದು ಕಾರಣವಾಗಿದೆ ಎಂದು ತಿಳಿದು ಬಂದಿದೆ. ನೇರವಾಗಿ ಯೋಜನಾ ಸಮಿತಿ ಮೂಲಕ ಗ್ರಾಪಂಗಳಿಗೆ ನೇರವಾಗಿ ಅನುದಾನ ಬಿಡುಗಡೆಯಾದರೆ ಸ್ಥಳಿಯ ಜನಪ್ರತಿನಿಧಿಗಳ ಒಳಗೊಳ್ಳುವಿಕೆ ತಪ್ಪಿದಂತಾಗುತ್ತದೆ. ಇದರಿಂದ ಸ್ಥಳಿಯ ಕಾರ್ಯಕರ್ತರು ಬೇಸರಗೊಳ್ಳುತ್ತಾರೆ ಎಂಬ ಕಾರಣದಿಂದ ಶಾಸಕರ, ಜನಪ್ರತಿನಿಧಿಗಳ ಪ್ರಾದೇಶಿಕ ಅಭಿವೃದ್ಧಿಗೆ ಅನುದಾನ ಮೀಸಲು ಇಟ್ಟುಕೊಳ್ಳುವುದಕ್ಕಾಗಿ ಯೋಜನಾ ಸಮಿತಿ ಮೂಲಕ ಸಲ್ಲಿಕೆ ಆಗುವ ಯೋಜನೆಗಳಿಗೆ ತಡೆ ನೀಡುತ್ತಿದ್ದಾರೆ ಎಂಬ ಆರೋಪ ವಿಧಾನಸೌಧದಿಂದಲೇ ಕೇಳಿಬರುತ್ತಿದೆ. ಸ್ಥಳಿಯ ಮಟ್ಟದಲ್ಲಿ ತಮ್ಮ ಪ್ರಭಾವ ಇಟ್ಟುಕೊಳ್ಳಲು ಶಾಸಕರು ಈ ಮಾಗೋರ್ಪಾಯ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಕೋಟ್​:
ಕಳೆದ ಬಾರಿ 2026&27 ನೇ ಸಾಲಿನ ಅಭಿವೃದ್ಧಿ ಯೋಜನೆಗಳ ಪಟ್ಟಿ ತಯಾರಿಸುವಲ್ಲಿ ಗದಗ ಜಿಲ್ಲೆ ಮೊದಲನೇ ಸ್ಥಾನದಲ್ಲಿ ಇತ್ತು. ಆದರೆ, ಇತರೆ ಜಿಲ್ಲೆಗಳು ತರಾತುರಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ಇದೇ ಕಾರಣದಿಂದ ಯಾವ ಜಿಲ್ಲೆಗಳಿಗೂ ಬಜೆಟ್​ ನಲ್ಲಿ ಅನುದಾನ ಹಂಚಿಕೆ ಆಗಲಿಲ್ಲ. ಈ ಬಾರಿ ಅನುದಾನ ಹಂಚಿಕೆ ಆಗಬಹುದು ಎಂಬ ನಿರೀೆ ಇದೆ. ಸಾಧ್ಯವಾದಷ್ಟು ಉತ್ತಮ ಕೆಲಸವನ್ನು ನಮ್ಮ ಅಧಿಕಾರಿಗಳ ಮಾಡಿದ್ದಾರೆ.
- ಸಿ.ಎನ್​. ಶ್ರೀಧರ, ಜಿಲ್ಲಾಧಿಕಾರಿ
ಕೋಟ್​:
ವಿಕೆಂದ್ರೀಕರಣ ವ್ಯವಸ್ಥೆ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಿಸಬಹುದು. ಆದರೆ, ಗ್ರಾಮಗಳ ಅಭಿವೃದ್ಧಿಗೆ ಅನುದಾನ ಇಲ್ಲದ್ದರಿಂದ ಗ್ರಾಮಗಳ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಆಥಿರ್ಕ ದಿವಾಳಿ ಆಗಿರುವುದುಕ್ಕೆ ಇದೊಂದೆ ಸಾ.
- ರಾಜು ಕುರಡಗಿ, ಬಿಜೆಪಿ ಜಿಲ್ಲಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net