ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು: ಬಸವರಾಜ ಹೊರಟ್ಟಿ

 ಗದಗ ನಗರದ ಅಂಬೇಡ್ಕರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಎಸೆಸೆಲ್ಸಿ ಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಭೈರನಹಟ್ಟಿ ಶ್ರೀಗಳು, ಡಾ. ಈಶ್ವರ ಉಳ್ಳಾಗಡ್ಡಿ, ಆರ್​. ಎಸ್​. ಬುರಡಿ,  ಎಂ.ಕೆ. ಲಮಾಣಿ, ಎ. ಎಸ್​. ಪಾಟೀಲ, ಈಶ್ವರ ನಾಯಕ, ಜಿ.ಆರ್​. ಭಟ್​, ಉಮೇಶ ಹಿರೇಮಠ, ರವಿ ದಂಡಿನ, ಡಾ. ಬಿ. ಜಿ. ಜವಳಿ, ಎಸ್​. ಎಸ್​. ಪಟ್ಟಣಶೆಟ್ಟರ, ಡಾ. ಶರಣು ಗೋಗೇರಿ ಇತರರು ಇದ್ದರು.
ಗದಗ ನಗರದ ಅಂಬೇಡ್ಕರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಎಸೆಸೆಲ್ಸಿ ಲಿತಾಂಶ ಸುಧಾರಣೆ ಕಾರ್ಯಾಗಾರವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಭೈರನಹಟ್ಟಿ ಶ್ರೀಗಳು, ಡಾ. ಈಶ್ವರ ಉಳ್ಳಾಗಡ್ಡಿ, ಆರ್​. ಎಸ್​. ಬುರಡಿ, ಎಂ.ಕೆ. ಲಮಾಣಿ, ಎ. ಎಸ್​. ಪಾಟೀಲ, ಈಶ್ವರ ನಾಯಕ, ಜಿ.ಆರ್​. ಭಟ್​, ಉಮೇಶ ಹಿರೇಮಠ, ರವಿ ದಂಡಿನ, ಡಾ. ಬಿ. ಜಿ. ಜವಳಿ, ಎಸ್​. ಎಸ್​. ಪಟ್ಟಣಶೆಟ್ಟರ, ಡಾ. ಶರಣು ಗೋಗೇರಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅಂಬೇಡ್ಕರ ಭವನದಲ್ಲಿ ಬುಧವಾರ ಎಸೆಸೆಲ್ಸಿ ಪರೀೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ಸನ್ಮಾನ ಮತ್ತು ಎಸೆಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರು ಸಮಾಜದ ಶಿಲ್ಪಿಗಳು, ಆಧುನಿಕ ಸಮಾಜದ ವ್ಯವಸ್ಥೆಗೆ ತಕ್ಕಂತೆ ಮಕ್ಕಳಲ್ಲಿ ಜ್ಞಾನವನ್ನು ತುಂಬುವ ಕಾರ್ಯ ಮಾಡುವದರೊಂದಿಗೆ ತಂದೆ, ತಾಯಿ ಗುರು ಹಿರಿಯರಿಗೆ ಗೌರವಿಸುವ ಸಂಸ್ಕಾರವಂತ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು. ಶಿಕ್ಷಕರು ಉತ್ತಮ ಸಮಾಜ ನಿಮಾರ್ಣಕ್ಕೆ ಸಮಾಜಕ್ಕೆ ಕಾರಣಿಭೂತರು. ಶಿಕ್ಷಣದ ಗುಣಮಟ್ಟ ವೃದ್ಧಿಸಲು ಶಿಕ್ಷಕರಿಗೆ ಇಲಾಖೆ ಅಥವಾ ಸರ್ಕಾರ ಪಾಠ ಬೋಧನೆ ಮಾಡುವ ಕೆಲಸವನ್ನು ಮಾತ್ರ ನೀಡಬೇಕು. ಯಾವುದೇ ಅನ್ಯ ಕೆಲಸದ ಹೊರೆ ಶಿಕ್ಷಕರಿಗೆ ನೀಡಬಾರದು ಎಂದರು.
ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವನ್ನು ಮಕ್ಕಳಿಗೆ ನೀಡಿ ಗುಣಾತ್ಮಕ ಫಲಿತಾಂಶ ಪಡೆಯುವಂತೆ ಪ್ರೇರಣಾದಾಯಕ ಕಲಿಕೆಯನ್ನು ಗುರುಬಳಗ ಮಾಡುವುದರಿಂದ ಯಾವುದೇ ಸ್ಪರ್ಧೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಅರ್ಹರಾಗುತ್ತಾರೆ ಎಂದರು.
ಶಿಕ್ಷಣ ಇಲಾಖೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ ಫಲಿತಾಂಶ ಸುಧಾರಣೆಗಾಗಿ ಕೈಕೊಂಡ ಕಾರ್ಯಕ್ರಮಗಳ ಕುರಿತು ಮಾತನಾಡಿದರು ಹಾಗೂ ಗದಗ ಜಿಲ್ಲೆ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಬೈರನಟ್ಟಿಯ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶೇ. 100 ಫಲಿತಾಂಶ ಪಡೆದ 76 ಶಾಲಾ ಮುಖ್ಯಶಿಕ್ಷಕರಿಗೆ ಸರ್ಕಾರದಿಂದ ನೀಡಿದ ಪ್ರಶಸ್ತಿ ಫಲಕ ಹಾಗೂ ತಲಾ 25,000 ರೂ. ಗಳ ಚೆಕ್ಕಗಳನ್ನು ನೀಡಿ ಗೌರವಿಸಲಾಯಿತು.
ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಆರ್​. ಎಸ್​. ಬುರಡಿ ಮಾತನಾಡಿದರು. ಎಂ.ಕೆ. ಲಮಾಣಿ, ಎ. ಎಸ್​. ಪಾಟೀಲ, ಈಶ್ವರ ನಾಯಕ, ಜಿ.ಆರ್​. ಭಟ್​, ಉಮೇಶ ಹಿರೇಮಠ, ರವಿ ದಂಡಿನ, ಡಾ. ಬಿ. ಜಿ. ಜವಳಿ, ಎಸ್​. ಎಸ್​. ಪಟ್ಟಣಶೆಟ್ಟರ, ಡಾ. ಶರಣು ಗೋಗೇರಿ, ಡಾ. ಬಸವರಾಜ ಬಳ್ಳಾರಿ, ವಿ. ವಿ. ನಡುವಿನಮನಿ, ಎಂ. ಎಚ್​. ಕಂಬಳಿ, ಎಚ್​. ಎನ್​. ನಾಣಶಿನಾಯಕ, ಎ. ಎನ್​. ಕಂಬೋಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net