ಮಾನವ ಕಳ್ಳಸಾಗಾಣಿಕೆ ತಡೆಗೆ ಇಲಾಖೆಗಳ ಸಮನ್ವಯ ಅಗತ್ಯ: ನ್ಯಾಯಧೀಶ ಸಿ. ಎಸ್​. ಶಿವನಗೌಡ್ರ

ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾಯ ಜೀತ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಿ.ಎನ್​. ಶ್ರೀಧರ, ಜಿಪಂ ಉಪ ಕಾರ್ಯದಶಿರ್ ಸಿ. ಆರ್​. ಮುಂಡರಗಿ, ರಾಧಾ ಮಣ್ಣೂರ, ಎಸ್​. ಎಸ್​. ನೀಲಗುಂದ, ಸಂದೀಪ ಪಾಟೀಲ, ವೇಣುಗೋಪಾಲ, ಚಿತ್ರಾ ವಿ ಸೇರಿದಂತೆ ಹಲವರು ಇದ್ದರು.
ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಕಾಯ ಜೀತ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಿ.ಎನ್​. ಶ್ರೀಧರ, ಜಿಪಂ ಉಪ ಕಾರ್ಯದಶಿರ್ ಸಿ. ಆರ್​. ಮುಂಡರಗಿ, ರಾಧಾ ಮಣ್ಣೂರ, ಎಸ್​. ಎಸ್​. ನೀಲಗುಂದ, ಸಂದೀಪ ಪಾಟೀಲ, ವೇಣುಗೋಪಾಲ, ಚಿತ್ರಾ ವಿ ಸೇರಿದಂತೆ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಇವುಗಳನ್ನು ಸಂರ್ಪೂಣವಾಗಿ ನಿರ್ಮೂಲನೆ ಮಾಡಲು ಜಿಲ್ಲೆಯ ಎಲ್ಲಾ ಇಲಾಖೆಗಳು ಒಂದಾಗಿ ಶ್ರಮಿಸುವುದು ಅತ್ಯಗತ್ಯ ಎಂದು ಹಿರಿಯ ದಿವಾಣಿ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಸಿ. ಎಸ್​. ಶಿವನಗೌಡ್ರ ಹೇಳಿದರು.
ನಗರದ ಗದಗ ಜಿಲ್ಲಾಡಳಿತ ಭವನ ಆವರಣದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ದತಿ ಕಾಮಿರ್ಕ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಯಮಾನುಸಾರ ಕೆಲಸಕ್ಕೆ ತಕ್ಕ ಸೂಕ್ತ ವೇತನ ನೀಡದಿರುವುದು ಸಹ ಜೀತ ಪದ್ಧತಿಯ ಒಂದು ರೂಪವೇ ಆಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿಗೆ ಮುಖ್ಯ ಕಾರಣ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಆಗಿದೆ. ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣದ ಹಕ್ಕು ತಲುಪಿಸಿದರೆ ಈ ಪಿಡುಗನ್ನು ಆರಂಭದಲ್ಲೇ ತಡೆಯಬಹುದು ಎಂದರು.
ಜೀತ ಪದ್ಧತಿ ಮತ್ತು ಮಾನವ ಕಳ್ಳಸಾಗಾಣಿಕೆಯಂತಹ ಕೃತ್ಯಗಳು ಹೆಚ್ಚಾಗಿ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತವೆ. ಇವುಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಕಾರ ಅಗತ್ಯ. ಸಂತ್ರಸ್ತರನ್ನು ಬರಿ ಮುಕ್ತ ಗೊಳಿಸುವುದಷ್ಟೇ ಅಲ್ಲದೇ, ಅವರಿಗೆ ಸೂಕ್ತ ಬಿಡುಗಡೆ ಪತ್ರ, ಆಥಿರ್ಕ ನೆರವು, ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸಿ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಈ ಪ್ರಕ್ರಿಯೆ ರ್ಪೂಣಗೊಳ್ಳುತ್ತದೆ ಎಂದರು.
ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಮಾತನಾಡಿ, ಹಕ್ಕಿನ ವಂಚನೆ ಮಾಡಿಕೊಂಡು ಜೀತದಾಳಾಗಿ ದುಡಿಸಿಕೊಳ್ಳುವುದು, ಅತ್ಯಲ್ಪ ವೇತನ ನೀಡುವುದು ಹಾಗೂ ಮಾನವೀಯತೆ ಇಲ್ಲದೆ ಕಷ್ಟಪಟ್ಟು ಕೆಲಸ ಮಾಡಿಸಿಕೊಳ್ಳುವುದು ಸಹ ಒಂದು ರೀತಿಯ ಜೀತ ಪದ್ಧತಿಯೇ ಆಗಿದೆ ಎಂದರು.
ಜೀತ ಪದ್ಧತಿಯನ್ನು ನಡೆಸುವವರು ಮತ್ತು ಅದನ್ನು ನೋಡಿಯೂ ಸುಮ್ಮನಿರುವವರ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಅಂತಹ ಕೃತ್ಯಗಳನ್ನು ಕಂಡು ಸುಮ್ಮನಿರುವುದು ಬಹಳ ದೊಡ್ಡ ಅಪರಾಧ. ಸಾರ್ವಜನಿಕರ ಗಮನಕ್ಕೆ ಇಂತಹ ಪ್ರಕರಣಗಳು ಬಂದ ತಕ್ಷಣ ನೇರವಾಗಿ ತಡೆಯಲು ಸಾಧ್ಯವಾಗದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯ ಗಮನಕ್ಕೆ ತರುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಜೀತ ಪದ್ಧತಿ ವಿರೋಧಿ ದಿನಾಚರಣೆ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಪಂ ಉಪ ಕಾರ್ಯದಶಿರ್ ಸಿ. ಆರ್​. ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್​.ಎಸ್​. ನೀಲಗುಂದ, ಜಿಲ್ಲಾ ಬಾಲಕಾಮಿರ್ಕ ಇಲಾಖೆಯ ಯೋಜನಾ ನಿರ್ದೇಶಕ ಸಂದೀಪ ಪಾಟೀಲ, ವೇಣುಗೋಪಾಲ, ಚಿತ್ರಾ ವಿ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net