ಜಿಲ್ಲಾಡಳಿತ ಭವನದ ಆವರಣದಲ್ಲಿ ಏರ್ಪಡಿಸಿದ್ದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜೆ. ಎ. ಬಾವಿಕಟ್ಟಿ, ಎಸ್. ಆರ್. ನದಾಫ, ಎಸ್. ಬಿ. ಬನ್ನಿಕಲ್ಲ, ಕೆ. ಎ. ಹುಲಗೇರಿ, ಜಿ. ಡಿ. ದಾಸರ, ರವಿ ಪ್ರಕಾಶ, ಎಸ್. ವೈ. ವಿಬೂತಿ, ರಾಜು ಕೇರೂರ, ಅಶೋಕ ಹಾದಿ, ಎಸ್. ಎಸ್. ಮುಳಗುಂದ ಹಲವರು ಇದ್ದರು.
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಸಾಕ್ಷರತಾ ದಿನಾಚರಣೆಯನ್ನು ಜಿಲ್ಲಾಡಳಿತ ಕಛೇರಿಯ ಆವರಣದಲ್ಲಿ ನೆರವೇರಿಸಲಾಯಿತು.
ಜಿಪಂ ಸಿಇಓ ಮುಕುಲ್ ಜೈನ ಸಾಕ್ಷರತಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಅಕ್ಷರ ಎಂಬುದು ಕೇವಲ ಜ್ಞಾನವಲ್ಲ. ಅದು ಬದುಕನ್ನು ಬದಲಿಸುವ ಶಕ್ತಿ. ಒಬ್ಬ ವ್ಯಕ್ತಿಗೆ ಅಕ್ಷರ ಕಲಿಸಿದರೆ ಒಂದು ಕುಟುಂಬಕ್ಕೆ ಬೆಳಕು ನೀಡಿದಂತೆ ಒಂದು ಸಮಾಜವನ್ನು ಸಾಕ್ಷರಗೊಳಿಸಿದರೆ ಇಡೀ ರಾಷ್ಟ್ರಕ್ಕೆ ಬೆಳಕು ನೀಡಿದಂತೆ. ಸಾಕ್ಷರತೆಯು ವ್ಯಕ್ತಿಯ ಬದುಕನ್ನು, ವೈಯಕ್ತಿಕ ಅಭಿವೃದ್ಧಿ, ಆಥಿರ್ಕ ಅಭಿವೃದ್ಧಿ, ಸಾಮಾಜಿಕ ಜಾಗೃತಿ, ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಮಹಿಳಾ ಸಬಲೀಕರಣ ಹಾಗೂ ಇನ್ನೂ ಹಲವು ರೀತಿಯಲ್ಲಿ ಪರಿವರ್ತನೆ ಮಾಡುತ್ತದೆ. ಜಿಲ್ಲೆಯನ್ನು ಸಂರ್ಪೂಣ ಸಾಕ್ಷರಗೊಳಿಸಲು ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಸ್. ಎಸ್. ಕುರಿಯವರ ಮಾತನಾಡಿ, ಒಂದು ದೇಶದ ನಿಜವಾದ ಅಭಿವೃದ್ಧಿಯನ್ನು ಅಳೆಯಲು ಆ ದೇಶದ ಆಥಿರ್ಕ ಪ್ರಗತಿಯ ಜೊತೆಗೆ ಅಲ್ಲಿನ ಜನರ ಶಿಕ್ಷಣ ಮತ್ತು ಸಾಕ್ಷರತೆಯ ಮಟ್ಟವೂ ಪ್ರಮುಖ ಮಾನದಂಡವಾಗಿದೆ. ಸಾಕ್ಷರತೆ ಹೆಚ್ಚಾದಂತೆ ದೇಶದ ಅಭಿವೃದ್ಧಿಯೂ ವೇಗ ಪಡೆಯುತ್ತದೆ. ಸಾಕ್ಷರ ವ್ಯಕ್ತಿ ಉತ್ತಮ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಾನೆ. ಆರೋಗ್ಯದ ಬಗ್ಗೆ ಜಾಗೃತನಾಗುತ್ತಾನೆ. ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾನೆ. ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಹೀಗಾಗಿ ಸಾಕ್ಷರತೆ ದೇಶದ ಮಾನವ ಸಂಪನ್ಮೂಲವನ್ನು ಬಲಪಡಿಸುತ್ತದೆ. ಜ್ಞಾನ ಹೊಂದಿರುವ ನಾಗರಿಕರೇ ದೇಶದ ದೊಡ್ಡ ಸಂಪತ್ತು. ಆದಕಾರಣ ಸಾಕ್ಷರತೆ ಒಂದು ಸರ್ಕಾರಿ ಯೋಜನೆ ಮಾತ್ರವಲ್ಲ. ಒಂದು ಸಾಮಾಜಿಕ ಚಳುವಳಿಯಾಗಿದೆ. ನಾವು ಕನಿಷ್ಠ ಒಬ್ಬ ಅನಕ್ಷರಸ್ಥ ವ್ಯಕ್ತಿಗೆ ಓದಲು ಮತ್ತು ಬರೆಯಲು ಕಲಿಸುವ ಸಂಕಲ್ಪ ಮಾಡಬೇಕಾಗಿದೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಸಹಯೋಗದೊಂದಿಗೆ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.
ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೆ ಸಾಕ್ಷರತಾ ಪ್ರಮಾಣ ವಚನವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಸಾಕ್ಷರತಾ ದಿನಾಚರಣೆಯ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ ಉಪಕಾರ್ಯದಶಿರ್ ಸಿ.ಆರ್. ಮುಂಡರಗಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ಡಿ. ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ನಡುವಿನಮನಿ ಹಲವರು ಇದ್ದರು.