ಜಿಲ್ಲೆಯಲ್ಲಿ 902947 ಎನ್ಯುಮರೇಶನ್​ ಫಾರ್ಮ ವಿತರಣೆ: ಶೇ 100 ರಷ್ಟು ಸಾಧನೆ

 ಎಸ್​ಐಆರ್​ ಪ್ರಗತಿ ಕುರಿತು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಸುದ್ದಿಗೋಷ್ಟಿ ನಡೆಸಿದರು.  ಡಾ.ದುರಗೇಶ್​ ಕೆ.ಆರ್​, ಗಂಗಪ್ಪ ಎಂ, ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್​.ಡಿ. ಪಾಟೀಲ, ಸಂತೋಷ ಹಿರೇಮಠ ಇತರರು ಇದ್ದರು.
ಎಸ್​ಐಆರ್​ ಪ್ರಗತಿ ಕುರಿತು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಸುದ್ದಿಗೋಷ್ಟಿ ನಡೆಸಿದರು. ಡಾ.ದುರಗೇಶ್​ ಕೆ.ಆರ್​, ಗಂಗಪ್ಪ ಎಂ, ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್​.ಡಿ. ಪಾಟೀಲ, ಸಂತೋಷ ಹಿರೇಮಠ ಇತರರು ಇದ್ದರು.
Published on
774971 ಎನ್ಯುಮರೇಶನ್​ ಫಾರ್ಮಗಳ ಡಿಜಟಲೀಕರಣ: ಶೇ 85.83 ರಷ್ಟು ಪ್ರಗತಿ: ಸಿ.ಎನ್​. ಶ್ರೀಧರ
ವಿಜಯವಾಣಿ ಸುದ್ದಿಜಾಲ ಗದಗ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕುರಿತಂತೆ ಜಿಲ್ಲೆಯಲ್ಲಿ ಜು. 29 ರವರೆಗೆ 9,02,947 ಎನ್ಯುಮರೇಷನ್​ ಫಾರ್ಮಗಳನ್ನು ವಿತರಿಸಲಾಗಿದೆ. 774971 ಎನ್ಯುಮರೇಷನ್​ ಫಾರ್ಮಗಳನ್ನು ಡಿಜಟಲೀಕರಣ ಮಾಡಲಾಗಿದ್ದು, ಶೇ. 85.83 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ. 967 ಮತಗಟ್ಟೆಗಳಿವೆ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಬಿಎಲ್​ಓಗಳು ಆ. 8 ರವರೆಗೆ ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್​ ಫಾರ್ಮ ವಿತರಿಸುವ ಕಾರ್ಯವನ್ನು ವಿಸ್ತರಿಸಲಾಗಿದೆ. ಎಸ್​ಐಆರ್​ -2026ರ ಪ್ರಕ್ರಿಯೆ ಬಗ್ಗೆ ಊಹಾಪೋಹಗಳಿಗೆ ಕಿವಿ ಕೊಡದೇ ಎಸ್​ಐಆರ್​ ಬಗ್ಗೆ ಚುನಾವಣಾ ಆಯೋಗದಿಂದ ಹೊರಡಿಸಲಾದ ವೇಳಾಪಟ್ಟಿಯಂತೆ ಎಲ್ಲರೂ ಸಂಬಂಧಿಸಿದ ಬಿಎಲ್​ಓ ಗಳಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅತ್ಯಂತ ಪಾರದರ್ಶಕ ಮತ್ತು ನಿಖರವಾದ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪರಿಷತ ವೇಳಾಪಟ್ಟಿ:
ಆ. 8 ರವರೆಗೆ ಬಿಎಲ್​ಓ ಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಶನ್​ ಫಾರ್ಮ ವಿತರಿಸಲಿದ್ದಾರೆ. ಆ. 8 ರೊಳಗಾಗಿ ಮತಗಟ್ಟೆಗಳ ಪುನರ್​ ವಿಂಗಡಣೆ ಕಾರ್ಯ ಜರುಗಲಿದೆ. ಆ. 17 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆ. 17 ರಿಂದ ಸೆ. 16 ರವರಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು. ಆ. 17 ರಿಂದ ಅ. 15 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ಅ. 19 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್​ ಕೆ.ಆರ್​, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್​.ಡಿ. ಪಾಟೀಲ, ಚುನಾವಣಾ ತಹಸೀಲ್ದಾರ ಸಂತೋಷ ಹಿರೇಮಠ ಇತರರು ಇದ್ದರು.
ಎಸ್​ಐಆರ್​ ಪ್ರಕ್ರಿಯೆಯಲ್ಲಿ 29907 ಮರಣ ಹೊಂದಿದ ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡ 66286 ಮತದಾರರು, ಈಗಾಗಲೇ ಇನ್ನೊಂದು ಕಡೆ ಹೆಸರು ನೋಂದಣಿಯಾದ 13240 ಮತದಾರರು, 5853 ಗೈರು ಮತದಾರರು ಹಾಗೂ ವಿವಿಧ ಕಾರಣಗಳಿಂದ 369 ಮತದಾರರ ಎನ್ಯುಮರೇಶನ್​ ಫಾರ್ಮಗಳು ಸಂಗ್ರಹಿಸಲು ಸಾಧ್ಯವಾಗದೇ ಇರುವುದರಿಂದ ಒಟ್ಟಾರೆಯಾಗಿ 115655 ಸಂಗ್ರಹಿಸಲು ಸಾಧ್ಯವಾಗದ ಎನ್ಯುಮರೇಶನ್​ ಫಾರ್ಮಗಳಿವೆ ಎಂದು ತಿಳಿಸಿದರು.
ಬಿಎಲ್​ಓ ಕಾರ್ಯ ನಿರ್ವಹಣೆ:
ಜಿಲ್ಲೆಯಲ್ಲಿ ಒಟ್ಟು 967 ಮತಗಟ್ಟೆಗಳಿದ್ದು 967 ಬಿಎಲ್​ಓಗಳನ್ನು ನಿಯಮಿಸಲಾಗಿದೆ. ಶಿರಹಟ್ಟಿ- 252 ಜನ ಬಿಎಲ್​ಓ, ಗದಗ- 226, ರೋಣ- 269, ನರಗುಂದ- 220 ಜನರನ್ನು ನೇಮಿಸಲಾಗಿದೆ. 97 ಬಿಎಲ್​ಓ ಗಳ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 967 ಮತದಾರರ ನೆರವು ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net