ಜನನ- ಮರಣ ನೋಂದಣಿಯಲ್ಲಿ ವಿಳಂಬ ಸಹಿಸಲಾಗದು: ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಕಟ್ಟುನಿಟ್ಟಿನ ಸೂಚನೆ
ಗದಗ ಜಿಲ್ಲಾಡಳಿತ ಭವನದಲ್ಲಿ ಜನನ ಮರಣ ನೋಂದಣಿ ಪ್ರಕ್ರಿಯೆ ಕುರಿತು ಸಭೆ ಜರುಗಿತು. ಸಿ. ಎನ್. ಶ್ರೀಧರ, ಡಾ. ದುರಗೇಶ್ ಕೆ. ಆರ್., ಎ. ಎ. ಕಂಬಾಳಿಮಠ, ಬಸನಗೌಡ ಕೊಟೂರ, ರುದ್ರಣ್ಣಗೌಡ ಜಿ. ಜೆ., ವಸಂತ ಮಡ್ಲೂರ, ಡಾ. ಎಸ್. ಎಸ್. ನೀಲಗುಂದ, ರಾಧಾ ಮಣ್ಣೂರ, ಆನಂದ ಬದಿ ಇತರರು ಇದ್ದರು.
ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಹಾಗೂ ದೋಷರಹಿತವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜನನ-ಮರಣ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ಜನನ- ಮರಣ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ ಹೊಂದಿರಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಅಥವಾ ಕಾರಣಗಳನ್ನು ಒಪ್ಪಲಾಗುವುದಿಲ್ಲ ಎಂದರು.
ಜನನ ಮತ್ತು ಮರಣ ನೋಂದಣಿ ಸರಿಯಾದ ಸಂದರ್ಭದಲ್ಲಿ ಹಾಗೂ ನಿಗದಿತ ಅವಧಿಯೊಳಗೆ ನಡೆಯುವಂತೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಸಭೆಯ ಗಮನಕ್ಕೆ ತಂದು ಅವುಗಳಿಗೆ ಶ್ರೀ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕು. ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರು ಆಗುತ್ತಾರೆ. ಜನನ ಮತ್ತು ಮರಣ ನೋಂದಣಿಯು ಮುಂದಿನ ದಿನಗಳಲ್ಲಿ ನಾಗರಿಕರಿಗೆ ಅಗತ್ಯವಾಗುವ ವಿವಿಧ ದಾಖಲೆಗಳು, ಸರ್ಕಾರಿ ಸೌಲಭ್ಯಗಳು ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಮೂಲ ಆಧಾರ ಆಗಿರುವುದರಿಂದ ಈ ಕಾರ್ಯದಲ್ಲಿ ನಿರ್ಲಕ್ಷ$್ಯಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ. ಎಸ್. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿನ 2 ಆಸ್ಪತ್ರೆಗಳು ನಿಗದಿತ ಅವಧಿಯೊಳಗೆ ಜನನ- ಮರಣ ನೋಂದಣಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಉತ್ತಮ ಸಾಧನೆ ತೋರಿವೆ. ಇತರೆ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್., ಎ. ಎ. ಕಂಬಾಳಿಮಠ, ಬಸನಗೌಡ ಕೊಟೂರ, ರುದ್ರಣ್ಣಗೌಡ ಜಿ. ಜೆ., ವಸಂತ ಮಡ್ಲೂರ, ಡಾ. ಎಸ್. ಎಸ್. ನೀಲಗುಂದ, ರಾಧಾ ಮಣ್ಣೂರ, ಆನಂದ ಬದಿ ಇತರರು ಇದ್ದರು.
ಜನನ ಪ್ರಮಾಣ:
ಜನವರಿಯಿಂದ ಮೆ 2026ರ ಅಂತ್ಯದ ವರೆಗೆ ಜಿಲ್ಲೆಯಲ್ಲಿ ಒಟ್ಟು 6,994 ಜನನ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 5,090 ಪ್ರಕರಣಗಳು ನಿಗದಿತ ಅವಧಿಯೊಳಗೆ ನೋಂದಣಿ ಆಗಿವೆ. ತಾಲೂಕುವಾರು ಪರಿಶೀಲನೆಯಲ್ಲಿ ಗದಗ ತಾಲೂಕು ಶೇ. 76.43ರಷ್ಟು ಹಾಗೂ ಮುಂಡರಗಿ ತಾಲೂಕು ಶೇ.76.56 ನೋಂದಣಿಯೊಂದಿಗೆ ಉತ್ತಮ ಸಾಧನೆ ಮಾಡಿವೆ. ಶಿರಹಟ್ಟಿ ತಾಲೂಕು ಶೇ. 73.68, ಲೆ$್ಮಶ್ವರ ಶೇ. 75.79, ನರಗುಂದ ಶೇ. 73.56, ರೋಣ ತಾಲೂಕು ಶೇ. 47.11ರಷ್ಟು ಸಾಧನೆ ಮಾಡಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮರಣ ಪ್ರಮಾಣ:
ಜನವರಿಯಿಂದ ಮೆ ತಿಂಗಳ ವರೆಗೆ ಜಿಲ್ಲೆಯಲ್ಲಿ ಒಟ್ಟು 3,872 ಮರಣ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 2,830 ಪ್ರಕರಣಗಳು ನಿಗದಿತ ಅವಧಿಯೊಳಗೆ ನೋಂದಣಿ ಆಗಿವೆ. ತಾಲೂಕುವಾರು ಪರಿಶೀಲನೆಯಲ್ಲಿ ಗದಗ ತಾಲೂಕು ಶೇ. 71.68, ಮುಂಡರಗಿ ಶೇ. 73.77, ಶಿರಹಟ್ಟಿ ಶೇ. 79.51, ಲೆ$್ಮಶ್ವರ ಶೇ. 68.47, ನರಗುಂದ ಶೇ. 73.63, ರೋಣ ತಾಲೂಕು ಶೇ. 69.91 ರಷ್ಟು ಪ್ರಗತಿ ಸಾಧಿಸಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನಿಡಿದರು.
ಕೊಟ್ :
ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಸಮಯೋಚಿತವಾಗಿ ಹಾಗೂ ದೋಷರಹಿತವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ನೋಂದಣಿಗೆ ಅವಕಾಶ ನೀಡಬಾರದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ನೋಂದಣಿ ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಕೀ ಹೊಂದಿರಬೇಕು. ನೋಂದಣಿ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರ ಆಗುತ್ತಾರೆ.