ನಗರದ ಕಿಲ್ಲಾ ಓಣಿ ಹಾಗೂ ಒಕ್ಕಲಿಗರ ಓಣಿ ಯುವಕರ ನಡುವಿನ ಹಳೆಯ ಗಲಾಟೆಯೇ ಈ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ. ಹಲ್ಲೆಯ ವೇಳೆ ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಟನೆಯಲ್ಲಿ ಹಲ್ಲೆಗೊಳಗಾದ ಅರುಣಕುಮಾರ್ ಬುಧವಾರ ರಾತ್ರಿ ಹೋಟೆಲ್ನಲ್ಲಿ ಆಹಾರ ಸೇವಿಸುತ್ತಿದ್ದಾಗ ಅಭಿಷೇಖ, ಸಾಯಿಲ್ ಮತ್ತು ಮುಸ್ತಾಕ್ ಎಂಬ ಮೂವರು ಏಕಾಏಕಿ ಒಳನುಗ್ಗಿ ಅರುಣಕುಮಾರ ಮೇಲೆ ತಲ್ವಾರ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಅರುಣಕುಮಾರ್ ಹೊಟೆಲ್ ನಿಂದ ಹೊರಗೆ ಓಡಿದ ಬಳಿಕ ಹತ್ತಿರದಲ್ಲೇ ಇದ್ದ ಬಾರ್ ಮುಂಭಾಗದಲ್ಲಿ ಮತ್ತೊಮ್ಮೆ ಬೀಯರ್ ಬಾಟಲಿನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಅರುಣಕುಮಾರ್ ನನ್ನು ಸ್ಥಳಿಯ ಜನರು ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಅರುಣಕುಮಾರ ಚಿಕಿತ್ಸೆ ಪಡೆಯುತ್ತಿದ್ದಾರೆ.