ಕಾಂಗ್ರೆಸ್​ ಮಹಿಳಾ ವಿರೋಧಿ ಅಲ್ಲ: ಸ್ವಾತಿ ಮಳಗಿ

Congress press meet
Congress press meet
Published on
ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್​ ಪಕ್ಷ ಮಹಿಳಾ ವಿರೋಧಿ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆದರೆ, ಕಾಂಗ್ರೆಸ್​ ಯಾವತ್ತೂ ಮಹಿಳಾ ವಿರೋಧಿ ಅಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದಶಿರ್ ಸ್ವಾತಿ ಮಳಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಹಿಳೆಯರ ಮತ ಕಬಳಿಸುವ ಹುನ್ನಾರದಿಂದ ರಾಜಕೀಯದಲ್ಲಿ ಶೇ. 33 ಮೀಸಲಾತಿ ಜಾರಿಗೆ ತರಲು ಬಿಜೆಪಿ ಸಂಚು ರೂಪಿಸಿತ್ತು. ಈಗ ಅದು ವಿಫಲವಾಗಿದೆ. 2023 ರಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೋಳಿಸಿತ್ತು. ಆದರೆ, ಈಗ ಮತ್ತೋಮ್ಮೆ ವಿಶೇಷ ಅಧಿವೇಶನ ನಡೆಸುವ ಅಗತ್ಯವೆನಿತ್ತು? ಕೇಂದ್ರ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೇ ಲೋಕಸಭೆಯ 543 ಸ್ಥಾನಗಳಲ್ಲಿ ಮೀಸಲಾತಿ ನೀಡಲಿ. ಬಿಹಾರ ರಾಜ್ಯದಲ್ಲಿ ಮಹಿಳೆಯರಿಗೆ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 50 ಮೀಸಲಾತಿಯನ್ನು ನೀಡಲಾಗಿದೆ. ಮಹಿಳಾ ಮೀಸಲಾತಿಯನ್ನು ಜಾರಿಗಳಿಸಿದ್ದೇ ಕಾಂಗ್ರೆಸ್​ ಪಕ್ಷ ಎಂದರು.
ಮಹಿಳೆಯರಿಗೆ ರಾಜಕೀಯ ಸ್ಥಾನ-ಮಾನ ಸಿಗಬೇಕು. ಬಹುತೇಕ ಎಲ್ಲ ಮತಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಮಹಿಳೆಯರು ಮತ ಹಾಕುವುದಕ್ಕಷ್ಟೆ ಸಿಮಿತವಾಗಿರಬೇಕು ಎನ್ನುವ ದುರುದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಕ್ಷೇತ್ರ ಮರುವಿಂಗಡಣೆ ಆಗಬೇಕಾದರೆ ಕನಿಷ್ಠ 8 ರಿಂದ 9 ವರ್ಷ ಸಮಯ ಬೇಕಾಗುತ್ತದೆ. 2023 ರ ಮಸೂದೆ ಪ್ರಕಾರ ಕ್ಷೇತ್ರ ಮರುವಿಂಗಡಣೆ ಆಗಬೇಕು. ಇಲ್ಲವಾದರೆ ಈಗಿರುವ ಸ್ಥಾನಗಳಲ್ಲೇ ಮೀಸಲಾತಿ ಘೋಷಿಸಬೇಕು ಎಂದರು.
ಕಾಂಗ್ರೆಸ್​ ಪರಾಜಿತ ಅಭ್ಯಥಿರ್ ಸುಜಾತಾ ದೊಡ್ಡಮನಿ ಮಾತನಾಡಿ, ಮೊದಲು ಜಾತಿ ಗಣತಿಯನ್ನು ಮಾಡಬೇಕು. ಜಾತಿ ಗಣತಿಯ ನಂತರ ಮೀಸಲಾತಿ ಯಾರಿಗೆ ಎಷ್ಟು ನೀಡಬೇಕು ಎನ್ನುವ ಬಗ್ಗೆ ಚಚಿರ್ಸಬೇಕು. ಗಣತಿ ಮಾಡದೇ ಮೀಸಲಾತಿ ಜಾರಿಗೋಳಿಸಿದರೇ ಉಪಯೋಗವಿಲ್ಲ. ಇದಕ್ಕೆ ಕಾಂಗ್ರೆಸ್​ ವಿರೋಧವಿದೆ. ಬಿಜೆಪಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಈಗಿರುವ ಸ್ಥಾನಗಳಲ್ಲೇ ಮೀಸಲಾತಿ ನೀಡಲಿ. ಕ್ಷೇತ್ರ ಮರುವಿಂಗಡಣೆಗಾಗಿ ಈ ಕುತಂತ್ರವನ್ನು ಬಿಜೆಪಿ ಹೆಣದಿತ್ತು. ಅದು ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಮಹಿಳೆಯರಿಗಾಗಿ ಐದು ಗ್ಯಾರಂಟಿ ಯೋಜನೆ ನೀಡಿದೆ. ಇದರಿಂದ ಮಹಿಳೆಯರು ಖುಷಿಯಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಆಥಿರ್ಕ ಸ್ಥಿತಿ ಸುಧಾರಣೆ ಆಗಿದೆ ಎಂದರು.
ರುದ್ರಮ್ಮ ಕೆರಕಲಮಟ್ಟಿ, ಜಯಕ್ಕ ಕಳ್ಳಿ, ಸುರೇಖಾ, ನಾಜಬೇಗಂ ಯಲೆಗಾರ, ದಾನೇಶ್ವರಿ ಭಜಂತ್ರಿ, ಉಮಾ ದ್ಯಾವನೂರ, ಶೋಭಾ ದೇಸಳ್ಳಿ, ವೀಣಾ ಕಟ್ನಳ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net