ಬಿಜೆಪಿಯ ನಗರಸಭೆ ಮೂವರ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ಸದಸ್ಯತ್ವ ಅನರ್ಹತೆ ಆದೇಶವನ್ನು ೆ. 10 ರಂದು ಎತ್ತಿ ಹಿಡಿದಿದ್ದ ಹೈಕೋರ್ಟ, ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸುವಂತೆಯೂ ಆದೇಶದಲ್ಲಿ ಉಲ್ಲೇಖಿಸಿತ್ತು. ಹೈಕೋರ್ಟ ಆದೇಶ ಹೊರಬಿದ್ದ ನಂತರ ಬಿಜೆಪಿ ಸದಸ್ಯರು ಚುನಾವಣೆಗೆ ತಡೆ ನೀಡುವಂತೆ ಹೈಕೋರ್ಟ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು. ಆದರೆ, ಬಿಜೆಪಿ ಸದಸ್ಯರ ಅಜಿರ್ಯನ್ನು ಹೈಕೋರ್ಟ ವಜಾ ಮಾಡಿದ್ದು, ಚುನಾವಣೆಗೆ ಯಾವುದೇ ಅಡತಡೆ ಇಲ್ಲದಂತಾಗಿದೆ. ಕಳೆದ ಒಂದೂವರೆ ವರ್ಷದಿಂದ "ಸದಸ್ಯತ್ವದ ಅನರ್ಹತೆ' ಕುರಿತು ಹಗ್ಗ ಜಗ್ಗಾಟದಲ್ಲಿ ನಗರದ ಪ್ರಥಮ ಪಜೆಯ ಹುದ್ದೆ ಇಲ್ಲದಂತಾಗಿತ್ತು. ಕಾಂಗ್ರೆಸ್ ಬಯಸಿದಂತೆ ವಾತಾವರಣ ಸೃಷ್ಟಿಯಾಗಿದ್ದು, ಈ ಹಿಂದೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದಲ್ಲಿ ಸ್ಪಧಿರ್ಸಿದ್ದ ಕಾಂಗ್ರೆಸ್ ಅಭ್ಯಥಿರ್ಗಳೇ ಮಾ. 3 ರಂದು ನಡೆಯುವ ಚುನಾವಣೆಯಲ್ಲಿ ಅಧಿಕಾರ ಗದ್ದುಗೆ ಏರುವುದು ನಿಶ್ಚಯವಾಗಿದೆ.