ಜಿಲ್ಲೆಯ ಸ್ಲಂ ಪ್ರದೇಶಗಳಲ್ಲಿನ ಜನರಿಗೆ ತುರ್ತು ಚಿಕಿತ್ಸೆ, ಹೆರಿಗೆ, ನವಜಾತ ಶಿಶು ಸಮಗ್ರ ಆರೋಗ್ಯ, ಆರೈಕೆ, ಲಸಿಕಾ ಕಾರ್ಯಕ್ರಮ ಸೇರಿದಂತೆ ಆರೋಗ್ಯ ಇಲಾಖೆ ಅಡಿಯಲ್ಲಿ ದೊರಕುವ ಎಲ್ಲ ಆರೋಗ್ಯ ಸೇವೆಗಳನ್ನು ನೀಡಲು ಸ್ಲಂ ಹಾಗೂ ಬಡ ರ್ದುಬಲ ಜನರು ವಾಸಿಸುವ ಜಿಲ್ಲೆಯ 21ಕ್ಕೂ ಹೆಚ್ಚು ಸ್ಥಳಗಳಲ್ಲಿ "ನಮ್ಮ ಕ್ಲಿನಿಕ್' ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ನಮ್ಮ ಕ್ಲಿನಿಕ್ಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕ ಅಲ್ಲದ ಉಪಕರಣಗಳ ಖರೀದಿಗೆ ರಾಜ್ಯ ಸರ್ಕಾರ 2025&26ನೇ ಸಾಲಿನ ಅಕ್ಟೋಬರ್ ತಿಂಗಳಲ್ಲಿ ಗದಗ ನಗರಸಭೆಗೆ 28 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ತಾಂತ್ರಿಕ ವಸ್ತಗಳ ಖರೀದಿಗೆ ನಗರಸಭೆಯಲ್ಲಿ ಪರಿಣಿತರ ಕೊರತೆ ಇರುವ ಕಾರಣ ಜಿಲ್ಲೆಯ ಆರೋಗ್ಯ ಇಲಾಖೆ ಖಾತೆಗೆ ನಗರಸಭೆಯು ಕಳೆದ ನವೆಂಬರ್ನಲ್ಲಿ ಅನುದಾನವನ್ನು ವರ್ಗಾವಣೆ ಮಾಡಿವೆ. ಹಿಗೀದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಹಣವನ್ನು ಖರ್ಚು ಮಾಡದೇ ಲಾಂತರ ರೂ. ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿವೆ.