ಸಿಎಂ, ಸಿದ್ದರಾಮಯ್ಯ ಅವರೋ? ವೇಣಗೋಪಾಲರೋ: ಸಿ.ಸಿ. ಪಾಟೀಲ

ಸರ್ಕಾರದ ವೈಲ್ಯವನ್ನು ಖಂಡಿಸಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರಾಜು ಕುರುಡಗಿ, ಲಿಂಗರಾಜಗೌಡ ಪಾಟೀಲ, ಎಂ.ಎಸ್​ . ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷಿ$್ಮ ಮಾನ್ವಿ, ರಾವೇಂದ್ರ ಯಳವತ್ತಿ,  ಉಷಾ ದಾಸರ ಇತರರು ಇದ್ದರು.
ಸರ್ಕಾರದ ವೈಲ್ಯವನ್ನು ಖಂಡಿಸಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ರಾಜು ಕುರುಡಗಿ, ಲಿಂಗರಾಜಗೌಡ ಪಾಟೀಲ, ಎಂ.ಎಸ್​ . ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷಿ$್ಮ ಮಾನ್ವಿ, ರಾವೇಂದ್ರ ಯಳವತ್ತಿ, ಉಷಾ ದಾಸರ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸುಮಾರು 80 ಕೋಟಿ ಮೌಲ್ಯದ 5 ಎಕರೆ ಅತಿಕ್ರಮಣ ಮಾಡಿದ ಜಾಗವನ್ನು ಸರ್ಕಾರ ವಶಪಡಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್​ ಅವರು ಈ ಕಾರ್ಯಾಚರಣೆಯನ್ನು ಉತ್ತರ ಪ್ರದೇಶ ಮಾದರಿಯ ಬುಲ್ಡೋಜರ್​ ಸರ್ಕಾರ ಎಂದು ಟೀಕಿಸಿರುವುದು ಸರಿಯಲ್ಲ. ದೇಶದ್ರೋಹಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಉತ್ತರ ಪ್ರದೇಶದ ಕ್ರಮಕ್ಕೂ, ಇಲ್ಲಿನ ಅತಿಕ್ರಮಣ ತೆರವಿಗೂ ಹೋಲಿಕೆ ಮಾಡುವುದು ಎಷ್ಟು ಸರಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದಶಿರ್ ವೇಣುಗೋಪಾಲ್​ ಅವರ ಕರೆ ಬರುತ್ತಿದ್ದಂತೆ ಸಿದ್ದರಾಮಯ್ಯ ಮಾತಿನ ಧಾಟಿ ಬದಲಾಗಿದೆ. ಕೇವಲ 400 ಜನರ ಓಲೈಕೆಗಾಗಿ ರಾಜ್ಯದ 6 ಕೋಟಿ ಜನರ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ. ರಾಜ್ಯ ಸರ್ಕಾರವನ್ನು ನಡೆಸುತ್ತಿರುವುದು ಸಿದ್ದರಾಮಯ್ಯನವರೋ, ಸುಪರ್​ ಸಿಎಂ ವೇಣುಗೋಪಾಲ್​ ಅವರೋ ಅಥವಾ ಕೇರಳ ಸಿಎಂ ಪಿಣರಾಯಿ ವಿಜಯನ್​ ಎನ್ನುವುದು ಗೊತ್ತಾಗುತ್ತಿಲ್ಲ. ರಾಜ್ಯದ ಆಡಳಿತದಲ್ಲಿ ಕೆ. ಸಿ. ವೇಣುಗೋಪಾಲ್​ ಅವರ ಹಸ್ತಕ್ಷೇಪ ಹೆಚ್ಚಾಗಿದೆ. ಅವರು ಈಗ ಕರ್ನಾಟಕದ ಸೂಪರ್​ ಸಿಎಂ ಆಗಿದ್ದಾರೆ. ಈ ಸರ್ಕಾರದಲ್ಲಿ ಆಡಳಿತವೂ ಇಲ್ಲ. ಜನಪರ ಕಾಳಜಿಯೂ ಇಲ್ಲ. ಪ್ರತಿನಿತ್ಯ ಸಿಎಂ ರ್ಕುಚಿ ಉಳಿಸಿಕೊಳ್ಳುವ ಚರ್ಚೆಯೇ ನಡೆಯುತ್ತಿದೆ. ಕೇರಳದ ಅಲ್ಪಸಂಖ್ಯಾತರನ್ನು ಓಲೈಸಲು ದಕ್ಷಿಣದ ರಾಜ್ಯಗಳ ನಡುವೆ ಜಗಳ ತಂದಿಡುತ್ತಿದ್ದಾರೆ ಎಂದು ಸಿ.ಸಿ.ಪಾಟೀಲ ಆರೋಪಿಸಿದರು.
ಅಧಿವೇಶನ ವಿಲ:
ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದಲೇ ಪ್ರತಿ ವರ್ಷವೂ ನೂರಾರು ಕೋಟಿ ಖರ್ಚು ಮಾಡಿ ನೆಡಸಲಾಗುವ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂರ್ಪೂಣ ವ್ಯರ್ಥವಾಗಿದೆ. ಇದೊಂದು ಅಭಿವೃದ್ಧಿ ಶೂನ್ಯ ಹಾಗೂ ದ್ವೇಷದ ರಾಜಕಾರಣ ಮಾಡುವ ತುಲಕ್​ ಸರ್ಕಾರವಾಗಿದೆ. ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಸಿದ್ಧರಾಮಯ್ಯ ಎಲ್ಲಾ ಸದಸ್ಯರ ಅಭಿಪ್ರಾಯ ಆಲಿಸಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನಾದರೂ ವಿಶೇಷ ಯೋಜನೆ ಮತ್ತು ಅನುದಾನ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಿರೀಕ್ಷೆಗಳನ್ನು ಅವರು ಹುಸಿಗೊಳಿಸಿದ್ದಾರೆ. ಕೇವಲ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವದಕ್ಕಾಗಿಯೇ ತಮ್ಮ ಭಾಷಣವನ್ನು ಮೀಸಲಿಟ್ಟಿದ್ದು ದುರದೃಷ್ಟಕರ ಎಂದರು.
ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ನಯಾ ಪೈಸೆ ಅನುದಾನ ಘೋಷಿಸಲಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ನಡೆಸಿದ ಈ ಅಧಿವೇಶನದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್​ ಇಲಾಖೆ ವೈಲ್ಯ:
ರಾಜ್ಯದಲ್ಲಿ ಡ್ರಗ್​ ಮಾಫಿಯಾ ನೋಡಿದರೆ ಗಾಬರಿ ಮೂಡಿಸುತ್ತದೆ. ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ಎರಡು ಬಾರಿ ಡ್ರಗ್​ ಮಾಫಿಯಾ ಪತ್ತೆ ಮಾಡುತ್ತಾರೆ. ಆದರೆ, ನಮ್ಮ ಪೊಲೀಸರು ಮತ್ತು ಗುಪ್ತಚರ ವಿಭಾಗ ಏನು ಮಾಡುತ್ತಿದೆ? ಇಲಾಖೆ ಕೈಯನ್ನು ಯಾರು ಕಟ್ಟಿ ಹಾಕಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಡ್ರಗ್​ ಪೆಡ್ಲರ್​ ಮತ್ತು ಕೋಟ್ಯಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಗೃಹ ಸಚಿವರು ಸದನದಲ್ಲಿ ಉತ್ತರ ನೀಡಿದ್ದಾರೆ. ಆದರೆ ಡ್ರಗ್​ ತಯಾರಕರನ್ನು ಹಿಡಿಯುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಪ್ರಧಾನ ಕಾರ್ಯದಶಿರ್ ಲಿಂಗರಾಜಗೌಡ ಪಾಟೀಲ, ಮುಖಂಡರಾದ ಎಂ.ಎಸ್​ . ಕರಿಗೌಡ್ರ, ಸಿದ್ದಪ್ಪ ಪಲ್ಲೇದ, ವಿಜಯಲಕ್ಷಿ$್ಮ ಮಾನ್ವಿ, ರಾವೇಂದ್ರ ಯಳವತ್ತಿ, ಉಷಾ ದಾಸರ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ್​, ಶಿವರಾಜಗೌಡ ಹಿರೇಮನಿ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net