ದೇಶದ ಭದ್ರತೆಗೆ ಚಿನ್ನ ಮಿತವ್ಯಯ ಬಳಸಲು ಪ್ರಧಾನಿ ಹೇಳಿದ್ದಾರೆ: ಸಿ.ಸಿ. ಪಾಟೀಲ

ಗದಗ ಪತ್ರಿಕಾ ಭವನದಲ್ಲಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಂ. ಎಂ. ಹಿರೇಮಠ, ಎಂ. ಎಸ್​. ಕರೀಗೌಡ್ರ, ಉಷಾ ದಾಸರ, ಶಶಿಧರ ದಿಂಡೂರು, ಮಹೇಶ ದಾಸರ, ನೀರ್ಮಲಾ ಕೊಳ್ಳಿ ಇತರರು ಇದ್ದರು.
ಗದಗ ಪತ್ರಿಕಾ ಭವನದಲ್ಲಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಂ. ಎಂ. ಹಿರೇಮಠ, ಎಂ. ಎಸ್​. ಕರೀಗೌಡ್ರ, ಉಷಾ ದಾಸರ, ಶಶಿಧರ ದಿಂಡೂರು, ಮಹೇಶ ದಾಸರ, ನೀರ್ಮಲಾ ಕೊಳ್ಳಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ವಿದೇಶಿ ವಿನಿಮಯ ಕೊರತೆ ಆಗಬಾರದು ಮತ್ತು ದೇಶದ ಹಿತದೃಷ್ಟಿಯಿಂದ ಸಂಪನ್ಮೂಲಗಳ ಬಳಕೆಯಲ್ಲಿ ಮಿತವ್ಯಯ ಅನುಸರಿಸಿ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದನ್ನೇ ದಿಕ್ಕು ತಪ್ಪಿಸುವ ರೀತಿಯಲ್ಲಿ ಕೇಂದ್ರದ ವಿಪಕ್ಷ ಕಾಂಗ್ರೆಸ್​ ಮುಕಮಡರು ಹೇಳಿಕೆ ನೀಡುತ್ತಿರುವುದು ವಿಪರ್ಯಾಸ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ದೇಶದ ಹಿತ ಕಾಪಾಡುವ ದೃಷ್ಟಿಯಿಂದ 1967 ರಲ್ಲಿ ಇಂದಿರಾ ಗಾಂಧಿ ಅವರು ಕೂಡ ಇಂತಹದ್ದೇ ಹೇಳಿಕೆ ನೀಡಿದ್ದರು. ಕಾಂಗ್ರೆಸ್​ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ವೀರಪ್ಪ ಮೊಯ್ಲಿ, ಕಪಿಲ್​ ಸಿಬಲ್​ ಅವರು ಹಲವು ಸಂದರ್ಭಗಳಲ್ಲಿ ತೈಲದ ಮಿತ ಬಳಕೆ ಕುರಿತು ಹೇಳಿಕೆ ನೀಡಿದ್ದರು. ಇಂಧಿರಾ ಗಾಂಧಿ ಅವರು ಶಿಸ್ತು ಕಾಪಾಡಲು ಚಿನ್ನ ಖರೀದಿಸಬೇಡಿ ಎಂದು ಹೇಳಿಕೆ ನೀಡಿದ್ದನ್ನು ಇಂದಿನ ಕಾಂಗ್ರೆಸ್​ ಮುಖಂಡರು ಮರೆತಿದ್ದಾರೆ. ರಾಹುಲ್​ ಗಾಂಧಿ ಇನ್ನೂ ಹುಡುಗನಿದ್ದಾನೆ. ಪ್ರಭುದ್ಧತೆ ಇಲ್ಲ. ಚುನಾವಣಾ ಫಲಿತಾಂಶದ ದಿನ ವಿದೇಶ ಪ್ರಯಾಣ ಬೆಳೆಸುತ್ತಾರೆ. ಇಂತವರು ಪೂರ್ವಾಪರ ಆಲೋಚನೆ ಇಲ್ಲದೇ ಮಾತನಾಡುತ್ತಿದ್ದಾರೆ. ರಾಹುಲ್​ ಗಾಂಧಿ ಅವರ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಹಲವು ಬಾರಿ ಬಜೆಟ್​ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಹೇಳಿಕೆಯನ್ನು ಆಲೋಚಿಸಿದೇ ವಿರೋಧಿಸುತ್ತಿದ್ದಾರೆ. ದೇಶದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್​ ರಾಜಕಾರಣ ಮಾಡಬಾರದು.ಮಧ್ಯ ಪ್ರಾಚ್ಯದಲ್ಲಿ ಯುದ್ಧ ನಡೆದಾಗ ಅದರ ಪರಿಣಾಮ ಭಾರತದ ಮೇಲೂ ಆಗಲಿದೆ. ಪ್ರಧಾನಿ ಮೋದಿ ಅವರು ತಮ್ಮ ಸ್ವಂತಕ್ಕಾಗಿ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ತಮಿಳುನಾಡಿನ ಸಿಎಂ ವಿಜಯ್​ ಅವರು, ಚುನಾವಣೆ ಮೊದಲು ಕೇವಲ ವಿಜಯ್​ ಆಗಿದ್ದರು. ಚುನಾವಣೆ ನಂತರ ಜೋಸೆಫ್​ ವಿಜಯ ಆದರು. ಸನಾತನ ಹಿಂದೂಗಳು ಇದೆಲ್ಲವನ್ನು ಅರ್ಥ ಮಾಡಿಕೊಳ್ಳಬೇಕು. ಸ್ಟಾ$ಲಿನ ಅವರು ಸನಾತನ ಧರ್ಮ ನಾಶ ಮಾಡಬೇಕು ಎಂದು ಹೇಳಿದ್ದಾರೆ. ಸನಾತನ ವಿರೋಧಿಸಿದ ಎಲ್ಲರೂ ಒಂದಿಲ್ಲೊಂದು ಕಾರಣದಿಂದ ನಾಶ ಆಗಿದ್ದಾರೆ. ಹಾಗೆಯೇ ಸ್ಟಾಲಿನ ಅವರು ರಾಜಕಾರಣದಿಂದ ನಾಶ ಆಗಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ. ಎಂ. ಹಿರೇಮಠ, ಎಂ. ಎಸ್​. ಕರೀಗೌಡ್ರ, ಉಷಾ ದಾಸರ, ನೀರ್ಮಲಾ ಕೊಳ್ಳಿ ಇತರರು ಇದ್ದರು.
ನಗರಸಭೆಯ ಬಿಜೆಪಿ ಮೂವರ ಸದಸ್ಯರ ಅನರ್ಹತೆ ಆದೇಶವನ್ನು ಹೈಕೋರ್ಟ್​ ರದ್ದು ಮಾಡಿದೆ. ಈಗ ಬಿಜೆಪಿ ಮೂವರು ಸದಸ್ಯರು ಅರ್ಹ ಸದಸ್ಯರಾಗಿದ್ದಾರೆ ಎಂಬುದು ವಿಶೇಷ. ರಾಜಕೀಯ ದುರುದ್ದೇಶದಿಂದ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್​ ತೊಂದರೆ ಕೊಟ್ಟಿದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಅವರ ಮೊಬೈಲ್​ ಬೆಳಗ್ಗೆ 10 ರಿಂದ 5ರ ವರೆಗೆ ಮಾತ್ರ ಆನ್​ ಆಗಿರುತ್ತದೆ. 10 ಗಂಟೆಗೂ ಮೊದಲು, 5 ಗಂಟೆ ನಂತರ ಅವರ ಫೋನ್​ ಸ್ವಿಚ್​ಆಫ್​ ಆಗಿರುತ್ತದೆ. ಈ ಬಗ್ಗೆ ಕಾನೂನು ಸಚಿವ ಎಚ್​.ಕೆ. ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ. ಇನ್ನೂ ಕೆಲವೇ ತಿಂಗಳಲ್ಲಿ ಅವರು ನಿವೃತ್ತ ಆಗಲಿದ್ದಾರೆ. ಅದಕ್ಕಾಗಿ ನಿರ್ಲಕ್ಷ$್ಯ ವಹಿಸುತ್ತಿದ್ದಾತರೆ. ಹೀಗಾದರೆ ಜನರ ಸಮಸ್ಯೆ ಅಧಿಖಾರಿಗಳ ಗಮನಕ್ಕೆ ಬರುವುದು ಹೇಗೆ?. ಶಾಸಕರಿಗೆ ಇದೇ ರೀತಿ ಆದರೆ ಜನ ಸಾಮಾನ್ಯರ ಗತಿ ಏನು ಎಂದು ಸಿ.ಸಿ. ಪಾಟೀಲ ಅವರು ಜಿಲ್ಲಾಧಿಕಾರಿ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net