ಮಹಿಳಾ ಮೀಸಲು ಮಸೂದೆ ಸೋಲಿಸಿದ ಕಾಂಗ್ರೆಸ್​ ಪಕ್ಷದಿಂದ ಸಂಭ್ರಮಾಚರಣೆ: ಸಿ.ಸಿ. ಪಾಟೀಲ

 ಗದಗ ಪತ್ರಿಕಾ ಭವನದಲ್ಲಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ಎಸ್​.ವಿ. ಸಂಕನೂರು, ರಾಜು ಕುರುಡಗಿ, ನಿರ್ಮಲಾ ಕೊಳ್ಳಿ, ವಿದ್ಯಾವತಿ ಗಡಗಿ, ವಿಜಯಲಕ್ಷಿ$್ಮ ಮಾನ್ವಿ ಸೇರಿದಂತೆ ಹಲವರು ಇದ್ದರು.
ಗದಗ ಪತ್ರಿಕಾ ಭವನದಲ್ಲಿ ಶಾಸಕ ಸಿ.ಸಿ. ಪಾಟೀಲ ಸುದ್ದಿಗೋಷ್ಟಿ ನಡೆಸಿದರು. ಎಸ್​.ವಿ. ಸಂಕನೂರು, ರಾಜು ಕುರುಡಗಿ, ನಿರ್ಮಲಾ ಕೊಳ್ಳಿ, ವಿದ್ಯಾವತಿ ಗಡಗಿ, ವಿಜಯಲಕ್ಷಿ$್ಮ ಮಾನ್ವಿ ಸೇರಿದಂತೆ ಹಲವರು ಇದ್ದರು.
Published on
ಕಾಂಗ್ರೆಸ್ಸಿಗೆ ಮಹಿಳೆಯರ ಶಾಪ: ಶಾಸಕ ಸಿ.ಸಿ. ಪಾಟೀಲ
ವಿಜಯವಾಣಿ ಸುದ್ದಿಜಾಲ ಗದಗ
ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್​ ವಿಂಗಡನೆ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್​ ಹಾಗೂ ಮಿತ್ರ ಪಕ್ಷಗಳಿಗೆ ಮಹಿಳೆಯರ ಶಾಪ ತಟ್ಟುತ್ತದೆ ಎಂದು ಶಾಸಕ ಸಿ. ಸಿ. ಪಾಟೀಲ ಹೇಳಿದರು
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂಬುದು ಬಿಜೆಪಿ ನೇತೃತ್ವದ ಕೇಂದ್ರದ ಎನ್​ಡಿಎ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಮಹಿಳಾ ಮೀಸಲಾತಿ ಜಾರಿಯಾಗುವ ಮೂಲಕ ದಶಕಗಳ ಹಿಂದಿನ ಮಹಿಳೆಯರ ಬೇಡಿಕೆಯನ್ನು ಈಡೇರಿಸಿ ಎಲ್ಲ ಪಕ್ಷಗಳಲ್ಲಿರುವ ತಾಯಂದಿರರಿಗೆ, ಮಹಿಳೆಯರಿಗೂ ಲೋಕಸಭೆಯಲ್ಲಿ ಧ್ವನಿ ನೀಡುವ ಮಹಾತ್ವಾಕಾಂೆ ಮಸೂದೆ ಇದಾಗಿತ್ತು. ಆದರೆ, ಇಂಡಿ ಮೈತ್ರಿ ಕೂಟ ಮಸುದೆಯನ್ನು ವಿರೋಧಿಸಿ, ಸೋಲಿಸಿ, ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನು ದೇಶದ ಮಹಿಳೆಯರು ನೋಡಿದ್ದಾರೆ. ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್​ ವಿಂಗಡಣೆ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್​ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋ ಹೊಂದಿದ್ದಾರೆ ಎಂದರು.
ಇಂದಿನ ಕಾಲದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿಯೂ ಪುರುಷರಿಗಿಂತ ಕಡಿಮೆ ಇಲ್ಲ. ಮಹಿಳಾ ಮೀಸಲಾತಿ ಜಾರಿ ಆಗುವುದರಿಂದ ದಶಕಗಳ ಕಾಲದಿಂದಲೂ ಕೇಳಿ ಬರುತ್ತಿದ್ದ ಮಹಿಳೆಯರ ಬೇಡಿಕೆ ಈಡೇರಲಿದೆ. ಲೋಕಸಭೆಯಲ್ಲಿ ಮಹಿಳೆಯರ ಧ್ವನಿ ಮತ್ತಷ್ಟು ಬಲವಾಗಲು ಇದು ಮಹತ್ವದ ಹೆಜ್ಜೆಯಾಗಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೊಂಡಿರುವ ಡಿಜಿಟಲ್​ ಇಂಡಿಯಾ, ಮೇಕ್​ ಇನ್​ ಇಂಡಿಯಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಕಾಂಗ್ರೆಸ್​ ವಿರೋಧಿಸುತ್ತಲೇ ಬಂದಿದೆ. ಹಾಗೆಯೇ ಸಂವಿಧಾನದ ಆಟಿರ್ಕಲ್​ 370 ರದ್ದತಿಯನ್ನು ಸಹ ವಿರೋಧಿಸಿತು. ಆದರೆ 370 ರದ್ದತಿಯ ನಂತರ ಕಾಶ್ಮೀರದಲ್ಲಿ ಪ್ರವಾಸೋದ್ಯಮವು ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿ ಅವರು ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಹಸ್ತಕ್ಷೇಪ ಮಾಡುವಂತ ಕ್ರಮಗಳಿಗೆ ಮುಂದಾಗಿದ್ದಾರೆ. ಇಂತಹ ಕ್ರಮಗಳಿಗೆ ಭವಿಷ್ಯದಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಟೀಕಿಸಿದರು.
ವಿಧಾನ ಪರಿಷತ್​ ಶಾಸಕ ಎಸ್​.ವಿ. ಸಂಕನೂರ ಮಾತನಾಡಿ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್​ ವಿಂಗಡಣೆ ವಿಷಯವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಮಸೂದೆ ಸೋಲಿಸುವ ಮೂಲಕ ಮಹಿಳೆಯರ ಜೊತೆಗೆ ವಿವಿಧ ರಾಜ್ಯಗಳ ಜನರಿಗೂ ಅನ್ಯಾಯವಾಗಿದೆ. ಆದರೆ ಬಿಜೆಪಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗಿ ಮಹಿಳಾ ಮೀಸಲಾತಿ ಬಿಲ್ಲನ್ನು ಜಾರಿಗೆ ತರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜು ಕುರುಡಗಿ, ನಿರ್ಮಲಾ ಕೊಳ್ಳಿ, ವಿದ್ಯಾವತಿ ಗಡಗಿ, ವಿಜಯಲಕ್ಷಿ$್ಮ ಮಾನ್ವಿ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net