ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜು.17ಕ್ಕೆ ಪ್ರತಿಭಟನೆ: ಬಿ. ವೈ. ವಿಜಯೇಂದ್ರ

  ಗದಗ ಪ್ರವಾಸಿಮಂದಿರದಲ್ಲಿ ಬಿಜೆಪಿ ರಾಜ್ಯಶಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಸ್​.ವಿ. ಸಂಕನೂರ, ಶರಣು ತಣ್ಣಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಸುರೇಶ ಕಳ್ಳಪ್ಪನವರ, ಎಂ. ಎಸ್​. ಕರಿಗೌಡ್ರ, ಭೀಮಸಿಂಗ್​ ರಾಠೋಡ, ಎಂ. ಎಂ ಹಿರೇಮಠ, ಬೂದಪ್ಪ ಹಳ್ಳಿ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಇದ್ದರು.
ಗದಗ ಪ್ರವಾಸಿಮಂದಿರದಲ್ಲಿ ಬಿಜೆಪಿ ರಾಜ್ಯಶಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿದರು. ರಾಜು ಕುರಡಗಿ, ಎಸ್​.ವಿ. ಸಂಕನೂರ, ಶರಣು ತಣ್ಣಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಸುರೇಶ ಕಳ್ಳಪ್ಪನವರ, ಎಂ. ಎಸ್​. ಕರಿಗೌಡ್ರ, ಭೀಮಸಿಂಗ್​ ರಾಠೋಡ, ಎಂ. ಎಂ ಹಿರೇಮಠ, ಬೂದಪ್ಪ ಹಳ್ಳಿ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಜು. 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಬಿಜೆಪಿಯ ಮಾಜಿ, ಹಾಲಿ ಶಾಸಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕಾಂಗ್ರೆಸ್​ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳ ಕೊಲೆ, ದೌರ್ಜನ್ಯ, ಅಲ್ಪಸಂಖ್ಯಾತರ ಓಲೈಕೆ ಮೀತಿಮಿರಿದೆ. ನಮಗೆ ಕಾಂಗ್ರೆಸ್​ ಸರ್ಕಾರ ಬೆನ್ನಿಗೆ ನಿಲ್ಲತ್ತದೆ ಎಂದು ಮತೀಯ ಶಕ್ತಿಗಳ ದೌರ್ಜನ್ಯ ದಿನೇ-ದಿನೆ ಹೆಚ್ಚುತ್ತಿದೆ. ಹಾವೇರಿಯಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಹಿಂದೂ ಯುವಕನ ಕೈ ಕಡಿದಿದ್ದಾರೆ. ರಟ್ಟಿಹಳ್ಳಿಯಲ್ಲಿ ಶಿವಾಜಿ ರಾವ್​ ಎನ್ನುವ ಮರಾಠಾ ಸಮುದಾಯದ ವ್ಯಕ್ತಿಯ ಹತ್ಯೆಯಾಗಿದೆ. ಯಲ್ಲಾಪೂರದಲ್ಲಿ ದಲಿತ ಮಹಿಳೆಯ ಹತ್ಯೆ, ಕೊಪ್ಪಳದಲ್ಲಿ ಗವಿಸಿದ್ದಪ್ಪನ ಬರ್ಬರ ಹತ್ಯೆ ಮಾಡಲಾಗಿದ್ದು, ಸರ್ಕಾರದಲ್ಲಿ ಹಿಂದೂ ವಿರೋಧಿ ನೀತಿ ಎದ್ದು ಕಾಣುತ್ತಿದೆ ಎಂದರು.
ಕಾಂಗ್ರೆಸ್​ ಸರ್ಕಾರ ಹಿಂದೂಗಳ ರಕ್ಷಣೆಗೆ ಬರುತ್ತಿಲ್ಲ. ಆಡಳಿತ ಪಕ್ಷದ ಶಾಸಕರು, ಸಚಿವರ ಹೇಳಿಕೆಯಿಂದ ಮತೀಯ ಶಕ್ತಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಎಸ್​ಐಆರ್​ ಪ್ರಕ್ರಿಯೆಯನ್ನು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಹಗಲು-ರಾತ್ರಿ ಪರಿಷ್ಕರಣೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರ ಅಕ್ರಮ ವಲಸಿಗರಿಗೆ ಪಿಆರ್​ಸಿ ನೀಡುತ್ತಿರುವುದು ಖಂಡನಾರ್ಹ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆಯಿದೆ. ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಿಡದಿಯಲ್ಲಿ ರೈತರ ಜಮೀನು ಕಿತ್ತುಕೊಳ್ಳಲು ರಾಜ್ಯ ಸರ್ಕಾರ ದುಸ್ಸಾಹಸಕ್ಕೆ ಕೈ ಹಾಕಿದೆ. ಕೊಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಕಸಿದುಕೊಳ್ಳಬಾರದು ಎಂದರು.
ಬೆಂಗಳೂರಿಗೆ ಬಂದಿರುವ ವಿಮಾನ ನಿಲ್ದಾಣವನ್ನು ಕನಕಪುರಕ್ಕೆ ಒಯ್ಯಲಿದ್ದಾರೆ. ತುಮಕೂರ ಭಾಗದಲ್ಲಿ ಏರ್​ಪೋರ್ಟ ನಿರ್ಮಾನ ಆದರೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಆಗಲಿದೆ. ತಮ್ಮ ರೀಯಲ್​ ಎಷ್ಟೇಟ್​ ದಂಧೆಗಾಗಿ ಕನಕಪುರಕ್ಕೆ ವಿಮಾನ ನಿಲ್ದಾಣ ಒಯ್ಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ, ಶರಣು ತಣ್ಣಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಸುರೇಶ ಕಳ್ಳಪ್ಪನವರ, ಎಂ. ಎಸ್​. ಕರಿಗೌಡ್ರ, ಭೀಮಸಿಂಗ್​ ರಾಠೋಡ, ಎಂ. ಎಂ ಹಿರೇಮಠ, ಬೂದಪ್ಪ ಹಳ್ಳಿ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಇದ್ದರು.
ಕೋಟ್​:
ಗದಗ ಜಿಲ್ಲೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಭೀಕರ ಬರಗಾಲವಿದೆ. ಬಿತ್ತನೆ ಮಾಡಿದರೂ ಮೊಳಕೆ ಬರದೇ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ರಕ್ಷಣೆಗೆ ಧಾವಿಸಬೇಕು. ಸಚಿವರು ರೈತರ ಸಮಸ್ಯೆ ಆಲಿಸಿ, ಪರಿಹಾರ ನೀಡಬೇಕು. ಪ್ರಧಾನಿಗೆ ಪತ್ರ ಬರೆದು ಕೈಕಟ್ಟಿ ಕುಳಿತರೇ ರೈತರ ಕಣ್ಣಿರು ಒರೆಸಲು ಸಾಧ್ಯವಿಲ್ಲ
ಬಿ. ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net