ಜು. 19 ರಂದು ಭೋವಿ ಸಮಾಜದ ಜನೋತ್ಸವ ಕಾರ್ಯಕ್ರಮ: ರವಿ ಪೂಜಾರ

  ಭೋವಿ ಸಮಾಜ ಸಮಾವೇಶ ಕುರಿತು  ರವಿ ಪೂಜಾರ ಸುದ್ದಿಗೋಷ್ಠಿ ನಡೆಸಿದರು. ಜಯಕ್ಕ ಕಳ್ಳಿ, ರಾವೇಂದ್ರ ಧಾರವಾಡ, ಆಂಜನೇಯ ಕಟಗಿ, ರವಿ ಗುಂಜೀಕರ, ಡಾ. ಬಸವರಾಜ ಬಳ್ಳಾರಿ, ಹುಚ್ಚಪ್ಪ ಸಂದಕದ, ಸೋಮು ಗುಡಿ, ಪರಸುರಾಮ ಕರಡಿಕೊಳ್ಳ, ಪವನ ಪೂಜಾರ ಉಪಸ್ಥಿತರಿದ್ದರು.
ಭೋವಿ ಸಮಾಜ ಸಮಾವೇಶ ಕುರಿತು ರವಿ ಪೂಜಾರ ಸುದ್ದಿಗೋಷ್ಠಿ ನಡೆಸಿದರು. ಜಯಕ್ಕ ಕಳ್ಳಿ, ರಾವೇಂದ್ರ ಧಾರವಾಡ, ಆಂಜನೇಯ ಕಟಗಿ, ರವಿ ಗುಂಜೀಕರ, ಡಾ. ಬಸವರಾಜ ಬಳ್ಳಾರಿ, ಹುಚ್ಚಪ್ಪ ಸಂದಕದ, ಸೋಮು ಗುಡಿ, ಪರಸುರಾಮ ಕರಡಿಕೊಳ್ಳ, ಪವನ ಪೂಜಾರ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಭೋವಿ ಸಮಾಜದ ಪಿಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಭೋವಿ ಜನೋತ್ಸವ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಿಎಂ ಡಿ.ಕೆ ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಭೋವಿ ಸಮಾಜದ ರಾಜ್ಯ ಕಾರ್ಯದಶಿರ್ ರವಿ ಪೂಜಾರ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಪ್ರತಿಭಾವಂತ ವಿಧ್ಯಾಥಿರ್ಗಳಿಗೆ, ಐಎಎಸ್​, ಐಪಿಎಸ್​ ಸಾಧಕರಿಗೂ ಸನ್ಮಾನ ಆಯೋಜನೆ ಮಾಡಲಾಗಿದೆ. ಲಕ್ಷಾಂತರ ಜನ ಸೇರುವ ಈ ಸಮಾವೇಶದಲ್ಲಿ ವಧು-ವರರ ಸಮಾವೇಶ ಕೂಡ ನಡೆಯುತ್ತಿದೆ. ಇದೇ ವೇಳೆ ನೂರಾರು ಯುವಕರಿಂದ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಅರವಿಂದ ಲಿಂಬಾವಳಿ, ಪಾವಗಡ ವೆಂಕಟೇಶ, ಅಖಂಡ ಶ್ರೀನಿವಾಸ ಮೂತಿರ್ ಸೇರಿದಂತೆ ಭೋವಿ ಸಮಾಜದ ಮಾಜಿ, ಹಾಲಿ ಸಚಿವರು, ಶಾಸಕರು ಭಾಗವಹಿಸಲಿದ್ದು, ದೇಶದ ವಿವಿಧ ಭಾಗಗಳಿಂದ ಭೋವಿ ಸಮಾಜದ ಮುಖಂಡರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.
ನಾಗಮೋಹನ್​ ದಾಸ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು ತಿರುಚಿ ಅನ್ಯಾಯ ಮಾಡಲಾಗಿದೆ. ಆಥಿರ್ಕವಾಗಿ ನಾವು ಹಿಂದೂಳಿದಿದ್ದರೂ ನಮ್ಮನ್ನು ಮೆಲ್ಪಂಕ್ತಿಯಲ್ಲಿ ತೋರಿಸಿ ಅನ್ಯಾಯ ಮಾಡಲಾಗಿದೆ. ವಿಧಾನ ಪರಿಷತ್​ ಗೆ ಭೋವಿ ಸಮುದಾಯದವರನ್ನು ಆಯ್ಕೆ ಮಾಡಬೇಕು. ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯಲಿದೆ ಎಂದರು.
ಜಯಕ್ಕ ಕಳ್ಳಿ, ರಾವೇಂದ್ರ ಧಾರವಾಡ, ಆಂಜನೇಯ ಕಟಗಿ, ರವಿ ಗುಂಜೀಕರ, ಡಾ. ಬಸವರಾಜ ಬಳ್ಳಾರಿ, ಹುಚ್ಚಪ್ಪ ಸಂದಕದ, ಸೋಮು ಗುಡಿ, ಪರಸುರಾಮ ಕರಡಿಕೊಳ್ಳ, ಪವನ ಪೂಜಾರ ಉಪಸ್ಥಿತರಿದ್ದರು.
ಕೋಟ್​:
ಭೋವಿ ಜನಾಂಗವನ್ನು ಧಾಮಿರ್ಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥಿರ್ಕವಾಗಿ ಒಗ್ಗೂಡಿಸುವ ನಿಟ್ಟಿನಲ್ಲಿ ಸಮಾವೇಶ ನಡೆಯುತ್ತಿದೆ. ಒಳಮೀಸಲಾತಿಯಲ್ಲಿ ಭೋವಿ ಸಮಾಜಕ್ಕೆ ಅನ್ಯಾಯ ಆಗಿದೆ. ಹೊಸ ಸರ್ಕಾರದಲ್ಲಿ ಭೋವಿ ಸಮಾಜದ ಶಾಸಕನಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಆಗ್ರಹಕ್ಕಾಗಿ ಈ ಸಮಾವೇಶ ನಡೆಯಲಿದೆ.
ರವಿ ಗುಂಜೀಕರ, ನಿಕಟಪೂರ್ವ ಅಧ್ಯಕ್ಷ, ಸರ್ಕಾರಿ ನೌಕರ ಸಂ,
ಕೋಟ್​:
ಚಿತ್ರದುರ್ಗದಲ್ಲಿ ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಸುಮಾರು 10 ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ತೆರಳಲಿದ್ದು, ವಾಹನದ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಬಾಂಧವರು ಆಗಮಿಸಿ ಯಶಸ್ವಿ ಗೋಳಿಸಬೇಕು
ಡಾ. ಬಸವರಾಜ ಬಳ್ಳಾರಿ, ಭೋವಿ ಸಮಾಜದ ಮುಖಂಡರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net