ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು: ಡಾ. ನಾಯ್ಕರ

 ಗದಗ ಎಎಸ್​ಎಸ್​ ಸಂಸ್ಥೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಜರುಗಿತು. ಡಾ. ವಿ. ಟಿ ನಾಯ್ಕರ, ಪ್ರೊ. ಬಿ. ಪಿ. ಜೈನರ, ಡಾ. ಎಸ್​. ಡಿ. ಬಂಡಾರ್ಕರ, ಪ್ರಶಾಂತ  ಹೊಂಬಾಳಿ, ಡಾ. ಸುನಿಲ ನಾಗರಬೆಟ್ಟ, ಸವಿತಾ, ರಾಧಿಕಾ ಪುರೋಹಿತ್​ ಇತರರು ಇದ್ದರು.
ಗದಗ ಎಎಸ್​ಎಸ್​ ಸಂಸ್ಥೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಜರುಗಿತು. ಡಾ. ವಿ. ಟಿ ನಾಯ್ಕರ, ಪ್ರೊ. ಬಿ. ಪಿ. ಜೈನರ, ಡಾ. ಎಸ್​. ಡಿ. ಬಂಡಾರ್ಕರ, ಪ್ರಶಾಂತ ಹೊಂಬಾಳಿ, ಡಾ. ಸುನಿಲ ನಾಗರಬೆಟ್ಟ, ಸವಿತಾ, ರಾಧಿಕಾ ಪುರೋಹಿತ್​ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಇತ್ತಿಚೆಗೆ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ. ಟಿ ನಾಯ್ಕರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇವತ್ತು ಪುಸ್ತಕಗಳನ್ನು ಓದುವ ರೂಢಿ ಬಹಳಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಯುವ ಜನತೆ ಸೋಶಿಯಲ್​ ಮೀಡಿಯಾಗಳಲ್ಲಿ ತಲ್ಲೀಣರಾಗಿದ್ದಾರೆ. ಸೊಶಿಯಲ್​ ಮಿಡಿಯಾದಿಂದ ತಮ್ಮ ಸುಂದರವಾದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾಥಿರ್ಗಳು ಹೆಚ್ಚು ಸಮಯವನ್ನು ಪುಸ್ತಕದೊಂದಿಗೆ ತೊಡಗಲು ರೂಡಿ ಮಾಡಿಕೊಳ್ಳಬೇಕು. ಈ ಒಂದು ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಪುಸ್ತಕ ದಿನಾಚರಣೆ ಆಚರಿಸುತ್ತಿದೆ. ಪುಸ್ತಕಗಳು ಮಾನವನ ಅತ್ಯುತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಅವು ಜ್ಞಾನವನ್ನು ಹೆಚ್ಚಿಸುವುದಷ್ಟೇ ಅಲ್ಲ, ಜೀವನದ ಮೌಲ್ಯಗಳನ್ನು, ಸಂಸತಿಯನ್ನು ಮತ್ತು ಚಿಂತನೆಗಳನ್ನು ವಿಸ್ತರಿಸುತ್ತವೆ ಎಂದರು.
ವಿಶ್ವ ಪುಸ್ತಕ ದಿನದ ಅಂಗವಾಗಿ ಕಾಲೇಜು ಮತ್ತು ಗ್ರಂಥಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪುಸ್ತಕ ಪ್ರದರ್ಶನಗಳು, ಓದು ಸ್ಪರ್ಧೆಗಳು, ಕಥಾ ವಾಚನ ಕಾರ್ಯಕ್ರಮಗಳು ಮತ್ತು ಲೇಖಕರ ಪರಿಚಯ ಕಾರ್ಯಕ್ರಮಗಳು ವಿದ್ಯಾಥಿರ್ಗಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತವೆ. ಮುಂಬರುವ ದಿನಗಳಲ್ಲಿ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದಿಂದ ಜಿಲ್ಲಾ ಮಟ್ಟದಲ್ಲಿ "ನಾನು ನನ್ನ ಪುಸ್ತಕ" ಒಂದು ದಿನದ ವಿಶೇಷ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗುವುದು. ಎಲ್ಲ ವಿದ್ಯಾಥಿರ್ಗಳು ಇದರ ಸದುಪಯೋಗ ಬಳಸಿಕೊಳ್ಳಬೇಕು ಎಂದರು.
ಪ್ರೊ. ಬಿ. ಪಿ. ಜೈನರ, ಡಾ. ಎಸ್​. ಡಿ. ಬಂಡಾರ್ಕರ, ಪ್ರಶಾಂತ ಹೊಂಬಾಳಿ, ಡಾ. ಸುನಿಲ ನಾಗರಬೆಟ್ಟ, ಸವಿತಾ, ರಾಧಿಕಾ ಪುರೋಹಿತ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net