ರಾಜ್ಯ ಸರ್ಕಾರ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ. ಐಟಿ ಬಿಟಿ ರಾಜ್ಯ. ಇದನ್ನು ಮತ್ತೆ ಪ್ರಾಚಿನತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಆಯೋಗ ಹ್ಯಾಕ್ ಮಾಡುವ ಬಗ್ಗೆ ತೋರಿಸಿ ಎಂದು ಕರೆದರೂ ಕಾಂಗ್ರೆಸ್ ಭಾಗವಸುತ್ತಿಲ್ಲ. ಯಾವ ಇವಿಎಂ ಚುನಾವಣೆ ಮೂಲಕ ಗೆದ್ದಿದ್ದಾರೆ ಅದನ್ನೇ ತಿರಸ್ಕಾರ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮೊದಲು ರಾಜಿನಾಮೆ ಕೊಟ್ಟು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಎದುರಿಸಲಿ. ಭಾರತದ ಚುನಾವಣೆ ಆಯೋದಗ ಪ್ರತಿನಿಧಿಗಳು ಆಫ್ರಿಕಾ ಯುರೋಪ್ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ನಮ್ಮ ಚುನಾವಣೆ ಆಯೋಗದ ಅಧಿಕಾರಿಗಳು ಹೋಗುತ್ತಾರೆ. ಅಂತಹ ತಂತ್ರಜ್ಞಾನ ನಮ್ಮಲಿದೆ ಎಂದರು.