ಬಿಜೆಪಿ ಕಚೇರಿಯಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮ

 ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಸಿ.ಸಿ. ಪಾಟೀಲ ಉದ್ಘಾಟಿಸಿದರು. ರಾಜು ಕುರಡಗಿ, ಎಸ್​. ವಿ. ಸಂಕನೂರು, ಚಂದ್ರು ಲಮಾಣಿ ಇತರರು ಇದ್ದರು.
ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಸಿ.ಸಿ. ಪಾಟೀಲ ಉದ್ಘಾಟಿಸಿದರು. ರಾಜು ಕುರಡಗಿ, ಎಸ್​. ವಿ. ಸಂಕನೂರು, ಚಂದ್ರು ಲಮಾಣಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಜನತಾ ಪಾಟಿರ್ ಜಿಲ್ಲಾ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ವಿವಿಧ ಸೇವಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜರುಗಿತು.
ಶಾಸಕ, ಮಾಜಿ ಸಚಿವರಾದ ಸಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ದಿನ ರಜೆ ಹಾಕದೇ ದೇಶಕ್ಕಾಗಿ ಹಗಲಿರುಳು ಶ್ರಮಸುತ್ತಿರುವ ಪ್ರಧಾನಿ ಯವರ ಕಾರ್ಯ ಶ್ಲಾನೀಯ ಹಾಗು ಪಶ್ಚಿಮ ಪದವಿಧರ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿರ್ಯ ಗೆಲುವಿಗಾಗಿ ಶ್ರಮಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ವಿವಿಧ ಸೇವೆ ಕಾರ್ಯಕ್ರಮಗಳನ್ನು ಆಚರಿಸುವದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಸಂಚಾಲಕ ಹಾಗು ಜಿಲ್ಲಾ ಪ್ರಧಾನ ಕಾರ್ಯದಶಿರ್ ಲಿಂಗರಾಜ ಪಾಟೀಲ ಮಾತನಾಡಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ 25 ವರ್ಷಗಳ ಸ್ಮರಣಾರ್ಥ ಆಶಿರ್ವಾದ ದೀಪ, 25 ಕೋಟಿ ಮಕ್ಕಳ ಕನಸಿನ ಭಾರತ, ನಮೋ ಸೇವಾ ಕಥನ ಬೀದಿ ನಾಟಕ ಪ್ರದರ್ಶನ, ಅಂಗಳದ ಉತ್ಸವ, ಬದಲಾವಣೆಯ ಕಥೆ, ವಿಕಸಿತ ಭಾರತ ಸಂಕಲ್ಪ ಯಾತ್ರೆ, ಸೇವಾ ಜ್ಯೋತಿ ಯಾತ್ರೆ, ಸೇವೆ ನನ್ನ ಯೋಗದಾನ ದಲ್ಲಿ ರಕ್ತದಾನ ಶಿಬಿರ, ಅನಾಥಶ್ರಮ, ವೃದ್ಧಾಶ್ರಮಕ್ಕೆ ಭೇಟಿ, ವೃಾರೋಪಣ, ಆರೋಗ್ಯ ತಪಾಸಣ ಶಿಬಿರ, ಸ್ವಚ್ಛತಾ ಅಭಿಯಾನ ಹಾಗು ಇನ್ನೂ ಹಲವಾರು ಕಾರ್ಯಕ್ರಮಗಳನು ಪದ ಕಾರ್ಯಕರ್ತರು ಮಾಡಬೇಕು ಎಂದರು.
ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ, ಕೇಂದ್ರ ಆಹಾರ ನಿಗದ ಸದಸ್ಯ ರವಿ ದಂಡಿನ, ನರಗುಂದ ಯುವ ಮುಖಂಡ ಉಮೇಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಪಕ್ಕಿರೇಶ ರಟ್ಟಿಹಳ್ಳಿ, ಅನೀಲ ಅಬ್ಬಿಗೇರಿ, ಸಂತೋಷ ಅಕ್ಕಿ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net