ಲೋಕಕಲ್ಯಾಣಕ್ಕಾಗಿ ಅಸಾಧ್ಯವಾದುದನ್ನು ಸಾಧಿಸಿದ ಮಹಾನ ಚೇತನ ಮಹಷಿರ್ ಶ್ರೀಭಗೀರಥ: ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ
ವಿಜಯವಾಣಿ ಸುದ್ದಿಜಾಲ ಗದಗ
"ಜಲವೇ ಜೀವನ" ಎಂಬ ತತ್ವಕ್ಕೆ ಸಾಕ್ಷಿಯಾಗಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ ಗಂಗೆಯನ್ನು ಧರೆಗೆ ತಂದು ಲೋಕ ಕಲ್ಯಾಣಕ್ಕಾಗಿ ಅಸಾಧ್ಯವಾದುದನ್ನು ಸಾಧಿಸಿದ ಮಹಾನ ಪುರುಷ ಮಹಷಿರ್ ಭಗೀರಥ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಮಹಷಿರ್ ಶ್ರೀಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನೀರಿಲ್ಲದೆ ಜೀವನವಿಲ್ಲ ಎಂಬ ಸತ್ಯವನ್ನು ಭಗಿರಥರು ಹೇಳಿದರು. ಮಾನವ ಸಂಕುಲವು ನದಿಗಳ ತೀರದಲ್ಲಿಯೇ ನಾಗರಿಕತೆಗಳನ್ನು ಬೆಳೆಸಿಕೊಂಡಿರುವುದು ಜಲದ ಪ್ರಾಮುಖ್ಯತೆಯನ್ನು ಸಾರುತ್ತದೆ. ಅಂತಹ ಪವಿತ್ರ ಗಂಗೆಯನ್ನು ಭೂಮಿಗೆ ತಂದ ಭಗೀರಥರ ಕಾರ್ಯ ಸ್ಮರಣಿಯ. ಮೂರು ಲೋಕಗಳಲ್ಲಿ ಗಂಗೆ ಭಗೀರಥರು ಕೇವಲ ಭೂಮಿಗೆ ಮಾತ್ರವಲ್ಲದೆ ಪಾತಾಳ, ಭೂಮಿ ಮತ್ತು ಆಕಾಶ ಎಂಬ ಮೂರೂ ಲೋಕಗಳಲ್ಲಿ ಗಂಗೆಯು ನೆಲೆಸುವಂತೆ ಮಾಡಿದರು. ಈ ಮೂಲಕ ಸಕಲ ಜೀವರಾಶಿಗಳಿಗೂ ಅನುಕೂಲ ಮಾಡಿಕೊಟ್ಟರು ಎಂದು ತಿಳಿಸಿದರು.
ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂಬ ಪಾಠವನ್ನು ಭಗೀರಥರ ಜೀವನದಿಂದ ಕಲಿಯಬೇಕಿದೆ. ಅವರ ದಿಟ್ಟ ನಿರ್ಧಾರ ಮತ್ತು ಕಠಿಣ ಪ್ರಯತ್ನವು ಇಂದಿನ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಈ ಮಹಾನ್ ಚೇತನದ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ಗುಣಗಾನ ಮಾಡುವುದು ನಮ್ಮೆಲ್ಲರ ಪುಣ್ಯದ ಕೆಲಸವಾಗಿದೆ ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಹೇಳಿದರು.
ಮಂಜುನಾಥ ಹುಯಿಲಗೋಳ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ಜಿಪಂ ಉಪಕಾರ್ಯದಶಿರ್ ಸಿ. ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಹಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ರಾಜು ಸೊಪಡ್ಲ, ಬಿ. ಎಫ್. ಉಪ್ಪಾರ, ರಾಜು ಗಡ್ಡಿ, ಭೀಮನಗೌಡ ಪಾಟೀಲ, ಹನುಮಂತಪ್ಪ ಗರಗ, ಚನ್ನಬಸವ್ವ ಸಾವಕ್ಕನವರ ಇತರರು ಇದ್ದರು.