ಅಕಾಲಿಕ ಮಳೆ ಗಾಳಿಯಿಂದ ಬಿರುಕು ಬಿಟ್ಟು ಸಂಪೂರ್ಣ ಭಾಗಿದ್ದ ಗೋಡೆಯನ್ನು ಸ್ಥಳಿಯ ಮಾರುಕಟ್ಟೆಯಲ್ಲಿನ ತರಕಾರಿ ಮಾರಾಟಗಾರರ ಹಿತದೃಷ್ಟಿಯಿಂದ ಕಳೆದ ಮೆ ತಿಂಗಳಲ್ಲೇ ನಿರಂತರ ಒಂದು ವಾರಗಳಕಾಲ ಕಾರ್ಯಾಚರಣೆ ನಡೆಸಿ ತೆರೆವು ಮಾಡಲಾಗಿತ್ತು. ತೆರವು ಕಾರ್ಯಾಚರಣೆ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಒಳಗೊಂಡಂತೆ ಸಂಪೂರ್ಣ ಆಡಳಿತ ವರ್ಗವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತ್ತು. ಒಂದು ತಿಂಗಳೊಳಗಾಗಿ ಪುನರ್ ನಿರ್ಮಾಣ ಮಾಡುವುದಾಗಿ ಸಚಿವರ ಸಮೇತವಾಗಿ ಜಿಲ್ಲಾಡಳಿತ ಸ್ಥಳಿಯ ಮಾರುಕಟ್ಟೆ ಜನರಿಗೆ ಭರವಸೆ ನೀಡಿದ್ದರು. ಆದರೆ, ಟನೆ ನಡೆದು 6 ತಿಂಗಳು ಗತಿಸಿದರೂ ಕೂಡ ಪುನರ್ ನಿರ್ಮಾಣ ಕೆಲಸದ ಚರ್ಚೆಯೆ ಇಲ್ಲವಾಗಿದೆ. ಮುಂಬರುವ ಮುಂಗಾರು ಮಳೆಯ ಒಳಗಾಗಿ ಗೋಡೆ ನಿರ್ಮಾಣ ಆಗದಿದ್ದರೆ ನೂರಾರು ತರಕಾರಿ ಮಾರಾಟಗಾರರು ತರಕಾರಿ ಮಾರಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣ ಆಗಲಿದೆ. ತರಕಾರಿ ಮಾರಾಟಗಾರರ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣ ಆಗಲಿದ್ದು, ನಗರಸಭೆ, ಜಿಲ್ಲಾಡಳಿತ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಮುತುವಜಿರ್ ವಹಿಸಿ ಆದಷ್ಟು ಬೇಗ ಕಾಮಗಾರಿ ಆರಂಭಕ್ಕೆ ಶುಭ ಶಕುನಕ್ಕೆ ಹಾಡಬೇಕಿದೆ.