ಬಿಡದಿ ಟೌನ್​ ಶಿಪ್​ ವಿಚಾರ! ಸರ್ಕಾರಿ ಜಮೀನಿನಲ್ಲಿ ಯೋಜನೆ ಮಾಡಲಿ: ಬಸವರಾಜ ಬೊಮ್ಮಾಯಿ

Badavaraj bommai
Badavaraj bommai
Published on
ವಿಜಯವಾಣಿ ಸುದ್ದಿಜಾಲ ಗದಗ
ಬಿಡದಿ ಟೌನ್​ ಶಿಪ್​ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ, ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್​ ಟೌನ್​ಶಿಪ್​ ಮಾಡಿ, ಎಲ್ಲ ವ್ಯವಸ್ಥೆಗಳನ್ನು ಮಾಡಿದರೆ ಆಗ ಒಳ್ಳೆಯ ನಿರ್ಧಾರ ಆಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಕಷ್ಟು ಜಮೀನುಗಳಿವೆ. ಕೋಲಾರ, ಚಿಕ್ಕಬಳ್ಳಾಪುರ ಏರಿಯಾದಲ್ಲಿ ಸುಮಾರು 2000 ಎಕರೆ ಸರ್ಕಾರಿ ಭೂಮಿ ಇದೆ. ಅಲ್ಲಿ ಮಾಡಬೇಕು ಎಂದು ಯೋಚಿಸಲಾಗುತ್ತಿದೆ. ಹಾಗಾಗಿ ಸರ್ಕಾರದ ಭೂಮಿ ಇರುವಂತಹ ಜಾಗದಲ್ಲಿ ಮಾಡಿ, ಅದಕ್ಕೆ ಸಕಲ ಸೌಲಭ್ಯ ವ್ಯವಸ್ಥೆಗಳನ್ನ ಮಾಡಬೇಕು. ಮುಖ್ಯಮಂತ್ರಿಗಳು ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಟೌನ್​ಶಿಪ್​ ಮಾಡಿದರೆ ಒಳ್ಳೆಯ ನಿರ್ಧಾರ ಎಂದರು.
ಸಿಎಂ ಡಿ.ಕೆ. ಶಿವಕುಮಾರ್​ ವಿಧಾನಸೌಧದಲ್ಲಿ ಚರ್ಚೆಗೆ ಬನ್ನಿ ಎಂದು ನೀಡಿರುವ ಆಹ್ವಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪ್ರತಿಷ್ಠೆ ಬದೀಗಿಟ್ಟು ಪರಿಹಾರ ಕಂಡುಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ಇದು ಸಂರ್ಪೂಣವಾಗಿ ಬರಗಾಲದ ಪರಿಸ್ಥಿತಿಯನ್ನ ತೋರಿಸುತ್ತಿದೆ. ಮೊದಲು ಬರಗಾಲ ಘೋಷಣೆ ಮಾಡಿದರೆ ಮುಂದಿನ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಒಂದು ಸರ್ವೆಯನ್ನು ಮಾಡಿ ಬರಗಾಲದ ಘೋಷಣೆಯನ್ನು ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net