ನಗರದ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಪತ್ರಿಕಾ ಭವನದ ನವೀಕೃತ ಕಛೇರಿ ಉದ್ಘಾಟನೆ, ಪ್ರವೇಶ ದ್ವಾರದ ನಾಮಫಲಕ ಅನಾವರಣ ಹಾಗೂ ಗದಗ ಜಿಲ್ಲೆಯ ತಾಲೂಕು ಟಕಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ಪ್ರತಿನಿಧಿತ್ವದ ಪ್ರಜಾಪ್ರಭುತ್ವ. ನಮ್ಮ ಪ್ರತಿನಿಧಿಗಳ ಮೇಲೆ ನಮ್ಮ ಯಶಸ್ಸು ಅಪಯಶಸ್ಸು ನಿಂತಿರುತ್ತದೆ. ಮತದಾರರಿಗೆ ತನ್ನ ಮತ ಗೆಲ್ಲಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕೇವಲ ಮತ ಗೆದ್ದರೆ ಸಾಲದು ಅವರ ಮೂಲಕ ದೇಶ ಗೆಲ್ಲಬೇಕು ಅದರಿಂದ ದೇಶದ ನಾಗರಿಕ ಗೆಲ್ಲಬೇಕು ಎಂದರು.