ಬಂಜಾರ ಸಮಾಜವನ್ನು ಸಂಭ್ರಮದ ಸಮಾಜವನ್ನಾಗಿ ಮಾಡಬೇಕು : ಡಾ. ಮೋತಿಲಾಲ ಚವ್ಹಾಣ
ಗದಗ ನಗರದಲ್ಲಿ ಏರ್ಪಡಿಸಿದ್ದ ಬಂಜಾರಾ ಸಮುದಾಯಗಳ ಕಾರ್ಯಾಗಾರವನ್ನು ಡಾ. ಮೋತಿಲಾಲ ಚವ್ಹಾಣ ಉದ್ಘಾಟಿಸಿದರು. ರವಿಕಾಂತ ಅಂಗಡಿ, ಲಾಲಪ್ಪ ರಾಠೋಡ, ರಮೇಶ ಲಮಾಣಿ, ಸಾವಿತ್ರಿಬಾಯಿ ಲಮಾಣಿ, ಕುಬೇರ ನಾಯಕ, ಟೀಕಪ್ಪ ನಾಯಕ, ಚಂದ್ರು ನಾಯಕ, ಈಶ್ವರ ನಾಯಕ, ಕುಬೇರಪ್ಪ ಪವಾರ, ಕೇಶವ ನಬಾಪೂರ, ಡಾ. ಡಿ.ಎಲ್. ಚವ್ಹಾಣ, ಡಾ. ಎಲ್. ಪಿ. ಾಯಕ ಹಲವರು ಇದ್ದರು.
ಕನ್ನಡ ಮತ್ತು ಸಂಸತಿ ಇಲಾಖೆ, ಬಂಜಾರ ಸಾಹಿತ್ಯ ಪರಿಷತ್ತು ವತಿಯಿಂದ ನಗರದಲ್ಲಿ ಸೋಮವಾರ ಬಂಜಾರಾ ಧಾಡಿ, ಧಾಲಿಯಾ, ಸನಾರ, ನಾವಿ ಮತ್ತು ಭರಾವಾ ಸಮುದಾಯಗಳ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ ಜರುಗಿತು.
ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಬಂಜಾರ ಸಂಸತಿ ಮತ್ತು ಭಾಷಾ ಅಕಾಡೆಮಿಯ ಡಾ. ಮೋತಿಲಾಲ ಚವ್ಹಾಣ, ನಾವೆಲ್ಲರೂ ಚಿಂತನೆ ಮಾಡಬೇಕು. ಚಿದ್ರ ಚಿದ್ರವಾದ ಪಂಗಡಗಳನ್ನು ಒಂದು ಗೂಡಿಸಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಬಂಜಾರ ಸಮಾಜವನ್ನು ಸಂಭ್ರಮದ ಸಮಾಜವನ್ನಾಗಿ ಮಾಡಬೇಕು. ಎಲ್ಲರೂ ಶಿಣವಂತರಾಗಬೇಕು. ಅಂದಾಗ ಸಮಾಜ ಮುಖ್ಯವಾಹಿನಿಗೆ ಬರುತ್ತದೆ ಎಂದರು.
ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ. ಡಿ. ಬಿ. ನಾಯಕ ಮಾತನಾಡಿ, ನಮ್ಮ ನಲೆ ನಾವೇ ಕಂಡುಕೊಳ್ಳಬೇಕು. ನಮ್ಮ ಪೂರ್ವಜರ ಬಗ್ಗೆ ನಮಗೆ ಅರಿವು ಇರಬೇಕು. ನಮ್ಮದು ವಿಶಿಷ್ಟವಾದ ಸಂಸತಿ ಅದನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಬಂಜಾರಾ ಧಾಡಿ, ದಾಲಿಯಾ, ಸನಾರ, ನಾವಿ ಮತ್ತು ಭರಾವಾ ಸಮುದಾಯ ಸಂಸತಿಗೆ ವಿಶ್ವದಲ್ಲೇ ಮನ್ನಣೆ ಇದೆ ಎಂದರು.
ಜಿಲ್ಲಾ ಬಂಜಾರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಭೀಮಸಿಂಗ್ ರಾಠೋಡಿಡ ಮಾತನಾಡಿ, ಬಂಜಾರಾ ಸಾಹಿತ್ಯ ಪರಿಷತ್ತಿನ ಕಾರ್ಯ ಅತ್ಯಂತ ಶ್ಲಾನೀಯ. ಬಂಜಾರಾ ಅಕಾಡೆಮಿ ಹಾಗೂ ನಿಗಮ ಈ ಸಮುದಾಯಗಳಿಗೆ ನೆರವು ನೀಡಬೇಕು. ಸನಾರ ಹಾಗೂ ಭರಾವಾ ಗಳಿಗಾಗಿ ಮ್ಯೂಜಿಯಂ ಸ್ಥಾಪಿಸಬೇಕು ಎಂದರು.
ಗೋರ ಸಿಕವಾಡಿ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ನಮ್ಮ ಸಂಸತಿಯನ್ನು ನಾವು ಎಂದೂ ಮರೆಯಬಾರದು. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಲ್ಲರದು ಎಂದರು.
ಬಂಜಾರ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಕಾಂತ ಜಾಧವ ಮಾತನಾಡಿ, ನಮ್ಮ ಹಿಂದಿನ ಸಂಸತಿಯನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮದು ಅದ್ಭುತವಾದ ಸಂಸತಿ. ಇಂದು ಅಳಿವಿನ ಅಂಚಿನಲ್ಲಿದೆ. ಅದಕ್ಕೆ ನಾವೆಲ್ಲರೂ ಜಾಗೃತರಾಗಬೇಕು ಎಂದರು.
ಶಿವಕುಮಾರ ಸನಾರ, ಡಾ. ಹರಿಲಾಲ ಪವಾರ, ಡಾ. ಶಿರಗಾನಳ್ಳಿ ಶಾಂತನಾಯಕ, ಕೃಷ್ಣಾ ಚವ್ಹಾಣ, ಲಾಲಪ್ಪ ರಾಠೋಡ, ರಮೇಶ ಲಮಾಣಿ, ಸಾವಿತ್ರಿಬಾಯಿ ಲಮಾಣಿ, ಕುಬೇರ ನಾಯಕ, ಟೀಕಪ್ಪ ನಾಯಕ, ಚಂದ್ರು ನಾಯಕ, ಈಶ್ವರ ನಾಯಕ, ಕುಬೇರಪ್ಪ ಪವಾರ, ಕೇಶವ ನಬಾಪೂರ, ಡಾ. ಡಿ.ಎಲ್. ಚವ್ಹಾಣ, ಡಾ. ಎಲ್. ಪಿ. ಾಯಕ ಹಲವರು ಇದ್ದರು.