ಬಿಜೆಪಿ ಕಚೇರಿಯಲ್ಲಿ ಅಟಲ್​ ಜೀ ಜನ್ಮದಿನ ಆಚರಣೆ

ಗದಗ
ಗದಗ
Published on
ವಿಜಯವಾಣಿ ಸುದ್ದಿಜಾಲ ಗದಗ
ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿರವರ ಹುಟ್ಟು ಹಬ್ಬದ ಅಂಗವಾಗಿ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಜಿಲ್ಲಾ ಭಾರತೀಯ ಜನತಾ ಪಾಟಿರ್ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು.
ಜಿಲ್ಲಾ ಕೋಶಾಧ್ಯ ನಾಗರಾಜ ಕುಲಕಣಿರ್ ಮಾತನಾಡಿ ಅಟಲ್​ ಬಿಹಾರಿ ವಾಜಪೇಯಿ ರವರು ಈ ದೇಶ ಕಂಡ ಅಪರೂಪದ ಹೆಮ್ಮೆಯ ಜನನಾಯಕ. ಉತ್ತಮ ಭಾಷಣಕಾರರಾಗಿ ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತ ನಾಯಕರಾಗಿದ್ದರು. ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್​ ಜೀ ತಮ್ಮ ವಾದವನ್ನು ನಿಶ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು. ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾತನಾಡುತ್ತಿದ್ದರು. ಎಲ್ಲರೊಂದಿಗೆ ಸ್ನೇಹಮಯ ಜೀವನ ಸಾಗಿಸಿದರು. ಎಲ್ಲ ರಾಜಕೀಯ ಮುಖಂಡರ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗು ಜನನಾಯಕ ವಿದೇಶಾಂಗ ಸಚಿವರಾಗಿ ವಿರೋಧ ಪದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ದೀಮಂತ ನಾಯಕ ಅಟಲ್​ ಬಿಹಾರಿ ವಾಜಪೇಯಿ ರವರು ಹುಟ್ಟು ಹಬ್ಬವನ್ನು ಭಾರತೀಯ ಜನತಾ ಪಾಟಿರ್ಯ ಎಲ್ಲ ಕಾರ್ಯಕರ್ತರು ಆಚರಿಸುತ್ತಿರುವದು ಶ್ಲಾನೀಯ. ಕಾಂಗ್ರೇಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಕಾಲ ಸೇವೆ ಸಲ್ಲಿಸಿದ ವಾಜಪೇಯಿ ಅವರು ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡಿದ್ದರು. ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ವಾಜಪೇಯಿ ಅವರು ದೂರದೃಷ್ಟಿಯ ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿ ಹಗಲಿರುಳು ದುಡಿದಿದ್ದಾರೆ ಹಾಗು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರುತಿಸಿದ್ದು ಅಟಲ್​ ಜೀರವರು ಎಂದರು.
ಮಾಜಿ ಜಿಲ್ಲಾಧ್ಯಕ್ಷ ಎಂ. ಎಸ್​. ಕರೀಗೌಡ್ರ, ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ಎಂ. ಎಂ. ಹಿರೇಮಠ, ಲಿಂಗರಾಜ ಪಾಟೀಲ ಮಲ್ಲಾಪೂರ, ಬೂದಪ್ಪ ಹಳ್ಳಿ, ರವಿ ದಂಡಿನ, ಭಿಮಸಿಂಗ ರಾಠೋಡ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ನಿರ್ಮಲಾ ಕೊಳ್ಳಿ, ಸಂತೋಷ ಅಕ್ಕಿ, ಅನೀಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ, ಮಹಾದೇವಪ್ಪ ಚಿಂಚಲಿ, ಶಂಕರ ಕಾಕಿ, ಶಾರದಾ ಸಜ್ಜನರ, ಶಶಿಧರ ದಿಂಡೂರ, ನಾಗರಾಜ ತಳವಾರ, ಕೆ.ಪಿ.ಕೋಟಿಗೌಡ್ರ, ರಮೇಶ ಸಜ್ಜಗಾರ, ರಾಚಯ್ಯ ಹೊಸಮಠ, ವಿಜಯಲಕ್ಷಿ$್ಮ ಮಾನ್ವಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ರವಿ ಮಾನ್ವಿ, ಪಾರ್ವತಿ ಪಟ್ಟಣಶೆಟ್ಟಿ, ಶ್ವೇತಾ ದಂಡಿನ, ಪ್ರೀತಿ ಶಿವಪ್ಪನಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net