ಇಂಟರ್​ ಆಕ್ಟಿವ್​ ಪ್ಯಾನೆಲ್​ ಬೋರ್ಡ ಬಳಕೆಯಿಂದ ಕಲಿಕೆ ಉತ್ತಮ ಗೊಳಿಸಬಹುದು: ಪೋತ್ನಿಸ್​

ನಗರದ ಆದರ್ಶ ಶಿಕ್ಷಣ ಸಮಿತಿಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ  ಇಂಟರ್​ ಆಕ್ಟಿವ್​ ಪ್ಯಾನೆಲ್​ ಬೋರ್ಡಗಳನ್ನು ಸಂಸ್ಥೆಯ ಚೇರ್ಮನ್​ ಆನಂದ  ಪೋತ್ನಿಸ್​  ಉದ್ಘಾಟಿಸಿದರು. ಪಿ.ಆರ್​ ಅಡವಿ, ಕಾರ್ಯದಶಿರ್ ಎ. ಡಿ. ಗೋಡಕಿಂಡಿ, ಎಸ್​. ವಿ. ಬಾಗಮಾರ, ಎಚ್​. ಎ. ಗೋಡಕಿಂಡಿ, ಡಾ. ವಿ. ಟಿ. ನಾಯ್ಕರ, ಆರ್​. ಆರ್​. ಕುಲಕಣಿರ್ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಪ್ರಸ್ತುತ ದಿನಮಾನಗಳಲ್ಲಿ ಕಲಿಕೆ ಮತ್ತು ಪ್ರಸ್ತುತಿಕರಣವನ್ನ ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ವಿಶೇಷವಾಗಿ ಶಿಕ್ಷಕರು ಯಾವುದೇ ಒಂದು ವಿಷಯವನ್ನು ಬೋಧನೆ ಮಾಡುವಾಗ ತಂತ್ರಜ್ಞಾನಗಳನ್ನ ಬಳಸಿಕೊಂಡು ಇಂಟರ್​ ಆಕ್ಟಿವ್​ ಪ್ಯಾನೆಲ್​ ಬೋರ್ಡ ಬಹಳಷ್ಟು ಉಪಯುಕ್ತವಾಗಿದೆ ಎಂದು ಎಎಸ್​ಎಸ್​ ಸಂಸ್ಥೆಯ ಚೇರ್ಮನ್​ ಆನಂದ ಪೋತ್ನಿಸ್​ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಇಂಟರ್​ ಆಕ್ಟಿವ್​ ಪ್ಯಾನೆಲ್​ ಬೋರ್ಡಗಳನ್ನು ಉದ್ಘಾಟನೆ ಗೊಳಿಸಿ ಮಾತನಾಡಿದರು.
ಸಂಸ್ಥೆಯಲ್ಲಿ ಇಂಟರ್​ ಆಕ್ಟಿವ್​ ಪ್ಯಾನೆಲ್​ ಬೋರ್ಡ ಅಳವಡಿಸುವ ಮುಖ್ಯ ಉದ್ದೇಶ ದೃಶ್ಯಮಾಧ್ಯಮದ ಮೂಲಕ ಚಿತ್ರ, ವೀಡಿಯೊ, ಅನಿಮೇಷನ್​ ಹಾಗೂ ಪ್ರಸ್ತುತಿಗಳ ಮೂಲಕ ವಿಷಯವನ್ನು ಸುಲಭವಾಗಿ ಅರ್ಥಮಾಡಿ ಕೊಳ್ಳಬಹುದು. ಅಷ್ಟೇ ಅಲ್ಲದೆ ವಿದ್ಯಾಥಿರ್ಗಳು ನೇರವಾಗಿ ಬೋರ್ಡ ಮೇಲೆ ಬರೆಯಲು, ಸ್ಪಶಿರ್ಸಲು ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಮಯ ಉಳಿಸಬಹುದು. ಪಾಠಗಳನ್ನು ಡಿಜಿಟಲ್​ ರೂಪದಲ್ಲಿ ಸಂಗ್ರಹಿಸಿ ಪುನಃ ಬಳಸಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಿ.ಆರ್​ ಅಡವಿ, ಕಾರ್ಯದಶಿರ್ ಎ. ಡಿ. ಗೋಡಕಿಂಡಿ, ಎಸ್​. ವಿ. ಬಾಗಮಾರ, ಎಚ್​. ಎ. ಗೋಡಕಿಂಡಿ, ಡಾ. ವಿ. ಟಿ. ನಾಯ್ಕರ, ಆರ್​. ಆರ್​. ಕುಲಕಣಿರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net