ಅಮೃತ ಯೋಜನೆಯಡಿ ನಗರಕ್ಕೆ 56 ಕೋಟಿ ರೂ. ಮಂಜೂರು.

Gadag Amrit 2.0
Gadag Amrit 2.0
Published on
ನಗರದ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೆ ಬಳಕೆ
ಪೈಪ್​ಲೈನ್​ ದುರಸ್ಥಿ, ಯಂತ್ರೋಪಕರಣ ಖರೀದಿ, ಪೈಪ್​ಲೈನ್​ ಬದಲಾವಣೆಗೆ, 5 ಓವರ್​ಹೆಡ್​ ಟ್ಯಾಂಕ್​ ನಿರ್ಮಾಣ
ಶಿವಾನಂದ ಹಿರೇಮಠ ಗದಗ
ಅಸಮರ್ಪಕ ಆಗಿರುವ ನಗರದ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ ಜಿಲ್ಲೆಗೆ 56 ಕೋಟಿ ರೂ. ಮಂಜೂರಾಗಿದೆ. ಈಗಿರುವ ನೀರು ಪೂರೈಕೆ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಈ ಅನುದಾನ ಬಳಸಿಕೊಳ್ಳಲಾಗುತ್ತದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ ಯೋಜನೆ ಅನುಷ್ಠಾನಗೊಳ್ಳಲಿದೆ. ನೀರು ಎತ್ತುವಳಿ ಕೇಂದ್ರಗಳಲ್ಲಿ ಯಂತ್ರೋಪಕರಣ ಖರೀದಿ, ಪೈಪ್​ಲೈನ್​ ದುರಸ್ಥಿ, ಹಲವಡೆ ಈಗಿರುವ ಪೈಪ್​ಲೈನ್​ ಬದಲಾಯಿಸಿ ಉತ್ತಮ ಗುಣಮಟ್ಟದ ಪೈಪ್​ಲೈನ್​ ಅಳವಡಿಕೆ ಮತ್ತು ನಗರದಲ್ಲಿ ಈಗಿರುವ 12 ಓವರ್​ ಹೆಡ್​ ಟ್ಯಾಂಕ್​ಗಳ ಜತೆಗೆ ಹೆಚ್ಚುವರಿ 5 ಟ್ಯಾಂಕ್​ಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಮುಂಡರಗಿ ತಾಲೂಕಿನ ಹಮ್ಮಗಿ ಬಳಿ ಹರಿಯುವ ತುಂಗಭ್ರದ ನದಿಗೆ ಅಡ್ಡಲ್​ಆಗಿ ನಿಮಿರ್ಸಿರುವ ಬ್ಯಾರೇಜ್​ನಿಂದ ಗದಗ ನಗರಕ್ಕೆ ನಿರಂತರ ನೀರು ಸರಬರಾಜು ಆಗುತ್ತಿದೆ. ಈ ಹಿಂದಿನ ಯೋಜನೆಯಂತೆ ನಗರಕ್ಕೆ ಸರಾಸರಿ 32 ಎಂಎಲ್​ಡಿ(ಒಂದು ದಿನಕ್ಕೆ 32 ಮಿಲಿಯನ್​ ಲಿಟರ್​ ನೀರು) ನೀರು ಪೂರೈಕೆ ಆಗಬೇಕಿತ್ತು. ಆದರೆ, ನೀರು ಸಂಸ್ಕರಣಾ ಸಾಮರ್ಥ್ಯಗಳ ಲಭ್ಯತೆಯ ಹೊರತಾಗಿಯೂ, ನೀರು ವಿತರಣಾ ವ್ಯವಸ್ತೆಯಲ್ಲಿ ಮಧ್ಯಂತರ ಸೋರಿಕೆ, ಕಳಪೆ ಪೈಪ್​ಲೈನ್​ ಅಳವಡಿಕೆಯಿಂದ ಪೈಪ್​ ಒಡೆಯುವುದು, ಅಸಮರ್ಥ ಯಂತ್ರೋಪಕರಣ ಬಳಕೆಯಿಂದ ನೀರು ಎತ್ತುವಳಿ ಆಗದಿರುವುದು ಹಾಗೂ ನಗರದಲ್ಲಿ ನೀರು ವಿತರಣಾ ವ್ಯವಸ್ಥೆ ಸಮರ್ಪಕ ಇಲ್ಲಿದಿರುವ ಕಾರಣ ನಗರದಕ್ಕೆ ಪ್ರತಿದಿನ ಕೇವಲ 16 ರಿಂದ 18 ಎಂಎಲ್​ಡಿ ನೀರು ಪೂರೈಕೆ ಆಗುತ್ತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚುತ್ತಿದೆ. ಹೀಗಾಗಿ ನಗರ ನೀರು ಸರಬರಾಜು ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ 56 ಕೋಟಿ ರೂ. ಮಂಜೂರು ಮಾಡಿದ್ದು, ಯೋಜನೆ ಅನುಷ್ಠಾನ ನಂತರ ನಗರ ನೀರು ಪೂರೈಕೆ ವ್ಯವಸ್ತೆ ಉತ್ತಮಗೊಳ್ಳುವ ನಿರೀೆ ಇದೆ.
ಹೆಚ್ಚುವರಿ 43 ಲಕ್ಷ ಎಂಎಲ್​ಡಿ:
ಹೊಸ ಯೋಜನೆಯಿಂದ ಹೆಚ್ಚುವರಿ 43 ಲಕ್ಷ ಎಂಎಲ್​ಡಿ ನೀರು ಸಂಗ್ರಹ ನಿರೀೆ ಇದೆ. ನಗರದಲ್ಲಿ ಈಗಿರುವ ಓವರ್​ಹೆಡ್​ ಟ್ಯಾಂಕ್​ಗಳ ಜತೆಗೆ ಹೊಸ ಯೋಜನೆಯಲ್ಲಿ ಗಂಗಿಮಡಿ, ಎಸ್​. ಎಂ. ಕೃಷ್ಣ ನಗರ, ಆಶ್ರಯ ಕಾಲೋನಿಯ ತಲಾ 5 ಲಕ್ಷ ಲಿಟರ್​ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್​ಗಳು ಹಾಗೂ ಎಪಿಎಂಸಿ ಒಳಗಡೆ, ಡಿಸಿ ಆಫೀಸ್​ ಮುಂಭಾಗದ ಪರಿಸರ ಲೇಔಟ್​ನಲ್ಲಿ ತಲಾ 10 ಲಕ್ಷ ಲೀಟರ್​ ನೀರು ಸಾಮರ್ಥ್ಯದ ಟ್ಯಾಂಕ್​ಗಳನ್ನು ನಿಮಿರ್ಸಲಾಗುತ್ತದೆ. ಈಗಿರುವ ನಗರದ ಇಂಜಿನಿಯರ್​ ಕಾಲೇಜಿನ ನೀರು ಸಂಗ್ರಹದ ಎ ಪಾಯಿಂಟ್​ ನಿಂದ ಹೊಸ ಟ್ಯಾಂಕ್​ಗಳಿಗೆ ಮತ್ತು ಹಳೆಯ ಟ್ಯಾಂಕ್​ಗಳಿಗೆ ಪ್ರತ್ಯೇಕ ಎಚ್​ಡಿಪಿ ಲೈನ್​ (ಒಟ್ಟು 30 ಕಿಮೀ ಅಳವಡಿಸಲಾಗುತ್ತದೆ. ಜತಗೆ ಪಾಪನಾಶಿ ನೀರು ಸಂಸ್ಕರಣ ಟಕದಿಂದ ನಗರದ ಇಂಜಿನಿಯರಿಂಗ್​ ಕಾಲೇಜಿನ ಬಳಿ ಇರುವ ಎ ಪಾಯಿಂಟ್​ ವರೆಗೆ ಒಟ್ಟು 8.64 ಕಿಮೀಯಲ್ಲಿ ಹೊಸ ಉತ್ತಮ ಗುಣಮಟ್ಟದ ಡಿಐ ಪೈಪ್​ ಅಳವಡಿಸಲಾಗುತ್ತದೆ. ಪ್ರತ್ಯೇಕ ಪೈಪ್​ಲೈನ ಅಳಡಿಸುವುದರಿಂದ ಪಾಪನಾಶಿ ನೀರು ಸಂಗ್ರಹಣ ಟಕದಿಂದ ನೈಸಗಿರ್ಕ ಒತ್ತಡ ಮೂಲಕ ನಗರದ ಒಟ್ಟು 18 ಟ್ಯಾಂಕ್​ ಒಂದೇ ಬಾರಿ ತುಂಬುತ್ತವೆ.
ಯಂತ್ರದ ಸಾಮರ್ಥ್ಯ ಹೆಚ್ಚಿಸುವುದು:
ಮುಂಡರಗಿ ಹಮ್ಮಗಿ ಬ್ಯಾರೇಜ್​ ನಿಂದ ಗದಗ ವರೆಗೂ ಒಟ್ಟಾರೆ ಮೂರು ನೀರು ಸಂಗ್ರಹಣ ಟಕಗಳಿವೆ. ಹಮ್ಮಗಿ, ಡಂಬಳ ಮತ್ತು ಪಾಪನಾಶಿ ಬಳಿ ಇರುವ ನೀರು ಸಂಗ್ರಹಣ ಟಕಗಳಲ್ಲಿ ಈಗಿರುವ ನೀರು ಎತ್ತುವಳಿ ಯಂತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತುತ ಹಮ್ಮಗಿ ಟಕದಲ್ಲಿ 800 ಎಚ್​ಪಿ ಸಾಮರ್ಥ್ಯದ 3 ನೀರು ಎತ್ತುವಳಿ ಯಂತ್ರಗಳಿವೆ. ಹೊಸ ಯೋಜನೆಯಂತೆ 900 ಎಚ್​ಪಿ ಸಾಮರ್ಥ್ಯದ 4 ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅದೇ ರೀತಿ ಡಂಬಳ ಟಕದಲ್ಲಿ ಈಗಿರುವ 650 ಎಚ್​ಪಿ ಸಾಮರ್ಥ್ಯದ 3 ಯಂತ್ರದ ಬದಲಾಗಿ 700 ಎಚ್​ಪಿ ಸಾಮರ್ಥ್ಯ 4 ಯಂತ್ರಗಳನ್ನು ಅಳವಡಿಸಲಾಗುತ್ತದೆ. ಪಾಪನಾಶಿ ಟಕದಲ್ಲಿ 100 ಎಚ್​ಪಿ ಸಾಮರ್ಥ್ಯದ 4 ಪಂಪಿಂಗ್​ ಮಷೀನ್​ ಅಳವಡಿಸಲಾಗುತ್ತದೆ. ಹೊಸ ಯಂತ್ರಗಳನ್ನು ಅಳವಡಿಸುವುದರಿಂದ ಪಾಪನಾಶಿಯಿಂದ ನಗರದ ಇಂಜಿನಿಯರಿಂಗ್​ ಕಾಲೇಜು ಬಳಿಯ ಎ ಪಾಯಿಂಟ್​ಗೆ ನೀರು ನೀರು ನೈಸಗಿರ್ಕ ಒತ್ತಡ ಮೂಲಕ ಹರಿದು ನಗರದ ಎಲ್ಲ 18 ಟ್ಯಾಂಕ್​ಗಳಿಗೆ ಏಕಕಾಲದಲ್ಲಿ ಹರಿಯುತ್ತದೆ.
ನೀರು ಸಂಗ್ರಹ ಅಧಿಕ:
ಈ ಹಿಂದಿನ ಯೋಜನೆಯಲ್ಲಿ ನಗರದಲ್ಲಿ ಈಗಿರುವ 12 ಓವರ್​ ಹೆಡ್​ ಟ್ಯಾಂಕ್​ಗಳನ್ನು ಒಂದಾದ ಮೇಲೆ ಒಂದರಂತೆ ತುಂಬಿಸಲಾಗುತ್ತಿತ್ತು. ಹೊಸ ಯೋಜನೆ ಪರಿಣಾಮಕಾರಿ ಅನುಷದ್ಠಾನದಿಂದ ನಗರದ ಹಳೆಯ ಮತ್ತು ಹೊಸ ಓವರ್​ ಹೆಡ್​ ಟ್ಯಾಂಕ್​ಗಳು ಎಲ್ಲವೂ ದಿನಕ್ಕೆ ಮೂರು ಬಾರಿ ತುಂಬುತ್ತವೆ.
ಕೋಟ್​:
ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಹೊಸ ಯೋಜನೆ ಅನುಷ್ಠಾನದಿಂದ ಈಗಿರುವ ನೀರು ಪೂರೈಕೆ ಅವಧಿಯನ್ನು ಕಡಿಮೆಗೊಳಿಸಿ ಗದಗ ನಗರಕ್ಕೆ ಪ್ರತಿದಿನ ನೀರು ಪೂರೈಸಬಹುದು. ಡಿಐ ಪೈಪ್​ ಅಳವಡಿಕೆಯಿಂದ ಮಾರ್ಗಮಧ್ಯದಲ್ಲಿ ನೀರು ಸೋರಿಕೆ ತಡೆಯಬಹುದು.
L ಜೋಗದಂಡಕರ, ಎಇಇ, ನಗರಸಭೆ
ಕೋಟ್​:
ಹೊಸ ಯೋಜನೆ ಟೆಂಡರ್​ ಹಂತದಲ್ಲಿ ಇದೆ. ಆದಷ್ಟು ಬೇಗ ಯೋಜನೆ ಆರಂಭಗೊಳ್ಳಲಿದೆ. ನಗರ ನೀರು ಪೂರೈಕೆ ಸಮಸ್ಯೆಗೆ ಪರಿಹಾರ ಸಿಗಲಿದೆ.
ಜಗದೀಶ ಹೊಸಮನಿ,
ಎಇ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net