ಕನ್ನಡ ಸಾಹಿತ್ಯದ ದ್ರುವತಾರೆ ಅಕ್ಕಮಹಾದೇವಿ: ಎಸ್​.ಆರ್​. ಹನುಮಗೌಡರ

 ಗದಗ ನಗರದ ಬಸವ ಸಭಾ ಭವನದಲ್ಲಿ ಅಕ್ಕಮಹಾದೇವಿ ಜಯಂತಿ ಜರುಗಿತು. ಎಸ್​.ಆರ್​. ಹನುಮಗೌಡರ , ಜಯಶ್ರೀ  ವಸ್ತ್ರದ, ಸುಶಿಲಾ ಕೋಟಿ, ಸಂದ್ಯಾ ಕೋಟಿ, ಮೀನಾ ಕೊರವನ್ನವರ, ಕಸ್ತೂರಿ ಮುಂದಿನಮನಿ, ಜಯಶ್ರಿ  ದಾವಣಗೇರಿ, ಕವಿತಾ ಮರಿಗೌಡರ, ಶೋಭಾ ಬಾಂಡಗೆ, ವಿಜಯಾ ಚೆನ್ನಶೆಟ್ಟಿ, ಜ್ಯೋತಿ ಜಾನೋಪಂತರ, ಪ್ರತಿಭಾ ಇನಾಮತಿ, ವಿಜಯಾ ಕುಲಕಣಿರ್, ಅನ್ನರ್ಪೂಣ ಅಸೂಟಿ, ಕಸ್ತೂರಿ ಮರಿಗೌಡರ, ಗೌರಿ ಜೀರಂಕಳಿ ಇತರರು ಇದ್ದರು.
ಗದಗ ನಗರದ ಬಸವ ಸಭಾ ಭವನದಲ್ಲಿ ಅಕ್ಕಮಹಾದೇವಿ ಜಯಂತಿ ಜರುಗಿತು. ಎಸ್​.ಆರ್​. ಹನುಮಗೌಡರ , ಜಯಶ್ರೀ ವಸ್ತ್ರದ, ಸುಶಿಲಾ ಕೋಟಿ, ಸಂದ್ಯಾ ಕೋಟಿ, ಮೀನಾ ಕೊರವನ್ನವರ, ಕಸ್ತೂರಿ ಮುಂದಿನಮನಿ, ಜಯಶ್ರಿ ದಾವಣಗೇರಿ, ಕವಿತಾ ಮರಿಗೌಡರ, ಶೋಭಾ ಬಾಂಡಗೆ, ವಿಜಯಾ ಚೆನ್ನಶೆಟ್ಟಿ, ಜ್ಯೋತಿ ಜಾನೋಪಂತರ, ಪ್ರತಿಭಾ ಇನಾಮತಿ, ವಿಜಯಾ ಕುಲಕಣಿರ್, ಅನ್ನರ್ಪೂಣ ಅಸೂಟಿ, ಕಸ್ತೂರಿ ಮರಿಗೌಡರ, ಗೌರಿ ಜೀರಂಕಳಿ ಇತರರು ಇದ್ದರು.
Published on
ಗದಗ: ಅಕ್ಕಮಹಾದೇವಿ ಆಧ್ಯಾತ್ಮಿಕ ಸ್ವಾತಂತ್ರ್ಯದ ಸಂಕೇತ. ಅವರ ವಚನಗಳು ಕನ್ನಡ ಸಾಹಿತ್ಯದ ಅತ್ಯುನ್ನತ ಅನುಭಾವ ಕಾವ್ಯಗಳಾಗಿವೆ. ಅಕ್ಕಮಹಾದೇವಿಯ ಕಾವ್ಯಗಳು ವೈರಾಗ್ಯ ಭಕ್ತಿ ಮತ್ತು ಸ್ತ್ರೀವಾದದ ಮಿಶ್ರಣವಾಗಿವೆ ಎಂದು ಶಕ್ಷಕಿ ಎಸ್​.ಆರ್​. ಹನುಮಗೌಡರ ಹೇಳಿದರು.
ಸಿದ್ದಲಿಂಗ ನಗರ ಬಸವ ಸಭಾ ಭವನದಲ್ಲಿ ಸೋಮವಾರ ಕದಳಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮ್ಮನ ವಚನಗಳು ಇಂದಿಗೂ ಪ್ರಸ್ತುತ. ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿವೆ. ಅಕ್ಕಮಹಾದೇವಿ ತನ್ನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ, ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅಕ್ಕನ ಮಾತು ಪಾಂಡಿತ್ಯದ ಪ್ರದರ್ಶನ ಆಗಿರದೇ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯತ್ರಿ ಅನುಭಾವಿ, ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ದ್ರುವತಾರೆಯಾಗಿದ್ದಾಳೆ. 12ನೇ ಶತಮಾನದಲ್ಲಿಯೇ ಪುರುಷ ಪ್ರಧಾನ ಸಮಾಜವನ್ನು ಅಳಿಸಿ ಹಾಕಬೇಕು. ಮಹಿಳೆಗೆ ಸಮಾನ ಸ್ಥಾನ ಕೊಡಬೇಕು. ಲಿಂಗ ತಾರತಮ್ಯ ಹೋರಾಟ ಕೇವಲ ತನಗಾಗಿ ಅಲ್ಲ. ಇಡೀ ಹೆಣ್ಣು ಸಂಕುಲಕ್ಕಾಗಿಯೇ ಎಂದು ಹೇಳಿದವಳು ಅಕ್ಕಮಹಾದೇವಿ ಎಂದು ಹೇಳಿದರು.
ಡಾ. ದೀಪಾ ಮೂರಶಿಳ್ಳಿ ಮಾತನಾಡಿ, ಮಹಿಳೆಯರು ಕುಟುಂಬದ ತಳಹದಿಯಾ ಆಗಿರುವದರಿಂದ ಅವರು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಇಡೀ ಕುಟುಂಬದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯ ಎಂದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯ ವಿಜಯಲಕ್ಷಿ$್ಮ ಆನೆಹೊಸೂರ, ಸುಲೋಚನಾ ಐಹೊಳ್ಳಿ, ದೀಪಾ ಪಟ್ಟಣಶೆಟ್ಟಿ, ಸುನಂದಾ ಜ್ಯಾನೋಪಂತರ, ಪುಷ್ಪಾ ಬಂಡಾರಿ, ಕಲಾವತಿ ಹನುಮಂತಗೌಡರ, ಜಯಶ್ರೀ ವಸ್ತ್ರದ, ಸುಶಿಲಾ ಕೋಟಿ, ಸಂದ್ಯಾ ಕೋಟಿ, ಮೀನಾ ಕೊರವನ್ನವರ, ಕಸ್ತೂರಿ ಮುಂದಿನಮನಿ, ಜಯಶ್ರಿ ದಾವಣಗೇರಿ, ಕವಿತಾ ಮರಿಗೌಡರ, ಶೋಭಾ ಬಾಂಡಗೆ, ವಿಜಯಾ ಚೆನ್ನಶೆಟ್ಟಿ, ಜ್ಯೋತಿ ಜಾನೋಪಂತರ, ಪ್ರತಿಭಾ ಇನಾಮತಿ, ವಿಜಯಾ ಕುಲಕಣಿರ್, ಅನ್ನರ್ಪೂಣ ಅಸೂಟಿ, ಕಸ್ತೂರಿ ಮರಿಗೌಡರ, ಗೌರಿ ಜೀರಂಕಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net