ಗದಗ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೇಮಕಾತಿಗೆ ಕಾನೂನು ತೊಡಕು

ಗದಗ
ಗದಗ
Published on
"ರೋಸ್ಟರ್​ ಬಿಂದು' ಅಂತಿಮಗೊಂಡರು ನೇಮಕಾತಿಗೆ ಗರ
ಶಿವಾನಂದ ಹಿರೇಮಠ, ಗದಗ
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ (ಜಿಪಿಟಿ) ನೇಮಕಾತಿ ಗೊಂದಲದಂತೆ ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರ ನೇಮಕಾತಿಯೂ ಗೊಂದಲದ ಗೂಡಾಗಿ ಪರಿಣಮಿಸಿದೆ. ಶಿಕ್ಷಣ ಇಲಾಖೆಗೆ ಗರ ಬಡೆದಂತೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳಿಗೆ ಕಾನೂನು ತೊಡಕುಗಳು ಎದುರಾಗಿದೆ. ಅನುದಾನಿ ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್​ ಬಿಂದು ಅಂತಿಮಗೊಂಡುರೂ ಸಹ ಪ್ರಕರಣವೊಂದು ಕೋರ್ಟ ಮೆಟ್ಟಿಲೇರಿದ್ದರಿಂದ ನೇಮಕಾತಿ ನಡೆಯುತ್ತಿಲ್ಲ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಹಾಗೂ ಮತ್ತೀತರ ಕಾರಣದಿಂದ ತೆರೆವಾದ ಸ್ಥಾನಗಳಿಗೆ ಶಾಲಾ ಶಿಕ್ಷಕರ ನೇಮಕಾತಿ ನಡೆಯದೆ ಕಾನೂನು ತೊಡಕು ಎದುರಾಗಿ ನೇಮಕಾತಿ ಸ್ಥಗಿತಗೊಂಡಿವೆ. ಅರ್ಹ ಶಿಕ್ಷಕ ಅಭ್ಯಥಿರ್ಗಳು ಚಾತಕ ಪಗಳಿಂತೆ ಕಾಯುತ್ತಿದ್ದು, ವಿದ್ಯಾಥಿರ್ಗಳ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ.
ನ್ಯಾಯಾಲಯದಲ್ಲಿ ಪ್ರಕರಣ?
ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಆರಂಭಕ್ಕೆ ಸರ್ಕಾರ ಮುಂದಡಿ ಇಟ್ಟ ಸಂದರ್ಭದಲ್ಲಿ ಸರ್ಕಾರ ರೋಸ್ಟರ್​ ಬಿಂದು ಅಂತಿಮಗೊಳಿಸಿತ್ತು. ಈ ವೇಳೆ ಎಸ್ಸಿ ಒಳ ಮೀಸಲಾತಿ ಪ್ರಕ್ರಿಯೆಯಿಂದ ನೇಮಕಾತಿ ವಿಳಂಬ ಆಯಿತು. ತದನಂತರ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಒಳಮೀಸಲಾತಿ ವರದಿಯೂ ತಡವಾಗಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸಿ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಆಗ್ರಹಿಸಿ ಅಲೆಮಾರಿ ಸಮುದಾಯದ ಮುಖಂಡರು ಕೋರ್ಟ ಮೆಟ್ಟಿಲೇರಿದರು. ಇದರ ಜೆತೆಗೆ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಶೇ. 50ರಷ್ಟಿದ್ದ ಮೀಸಲಾತಿಯನ್ನು ಶೇ. 56ಕ್ಕೆ ಹೆಚ್ಚಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟನಲ್ಲಿ ಪ್ರಕರಣವೊಂದು ದಾಖಲಾಗಿದೆ. ಈ ಎರಡೂ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಗೆ ಅನುಮತಿ ಸಾಧ್ಯವಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
6 ಸಾವಿರ ಹುದ್ದೆ ಖಾಲಿ:
ರಾಜ್ಯದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅಂದಾಜು 6 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 2020ರ ಒಳಗಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕಾರಣದಿಂದ ತೆರವಾದ ಹುದ್ದೆಗಳಿಗೆ ನೇಮಕಾತಿಗೆ ಮಾಡಿಕೊಳ್ಳು ಆದೇಶಿಸಿತ್ತು. ಈಗಾಗಲೇ ಶಿಕ್ಷಣ ಸಂಸ್ಥೆಗಳು ಸಂಸ್ಥೆಗಳಿಗೆ ಸಂಬಂಧಿತ ದಾಖಲೆಗಳನ್ನು ಆನ್​ಲೈನ್​ ಮೂಲಕ ಸಲ್ಲಿಸಿವೆ. ಹುದ್ದೆಗಳ ಸಂದರ್ಶನ ಪ್ರಕ್ರಿಯೆ ಬಾಕಿ ಇದೆ. ಆದರೆ, ಕಾನೂನು ತೊಡಕು ಕಾರಣದಿಂದ ಶಿಕ್ಷಣ ಇಲಾಖೆ ಸಂದರ್ಶನಕ್ಕೆ ಅನುಮತಿ ನೀಡುತ್ತಿಲ್ಲ.
ಹೆಚ್ಚುವರಿ ಹುದ್ದೆ ವರ್ಗಾವಣೆ:
ಶಾಲಾ ಶಿಕ್ಷಣ ಇಲಾಖೆಯು 1 ರಿಂದ 5ನೇ ತರಗತಿ ವರೆಗೆ ಕಿರಿಯ ಪ್ರಾಥಮಿಕ ಹಾಗೂ 6 ರಿಂದ 8ನೇ ತರಗತಿ ವರೆಗೆ ಹಿರಿಯ ಪ್ರಾಥಮಿಕ ಶಾಲೆ ಎಂದು ವಿಂಗಡಿಸಿದ ನಂತರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಅನುದಾನಿತ ಶಾಲೆಗಳಲ್ಲಿನ ಪೆಮರಿಯಲ್ಲಿ ಪಾಠ ಮಾಡುತ್ತಿರುವ ಹೆಚ್ಚುವರಿ ಶಿಕ್ಷಕರನ್ನು ಇನ್ನೊಂದು ಅನುದಾನಿತ ಶಾಲೆಗೆ ವರ್ಗಾವಣೆ ಮಾಡಬೇಕೆನ್ನುವ ಚಿಂತನೆಯೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ. ಈ ಪ್ರಕ್ರಿಯೆ ನಂತರ ನೇಮಕಾತಿಗೆ ಆದೇಶ ನೀಡಬಹುದು ಎನ್ನಲಾಗಿದೆ.
ಕೋಟ್​:
ನೇಮಕಾತಿ ವಿಳಂಬದಿಂದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಮೌಲ್ಯ ಕುಸಿಯುತ್ತಿದೆ. ಕಳೆದ 10 ವರ್ಷಗಳಿಂದ ಪೆಮರಿ ಶಾಲೆಗಳಲ್ಲಿ ನೇಮಕಾತಿ ನಡೆದಿಲ್ಲ. ಹಾಗಾಗಿ ಪೆಮರಿ ಶಾಲೆಯಲ್ಲಿ ಅನೇಕರು ನಿವೃತ್ತಿ ಹೊಂದಿದ್ದಾರೆ. ಹೆಚ್ಚುವರಿ ಹುದ್ದೆಗಳ ವರ್ಗಾವಣೆ ಈಗ ಅಪ್ರಸ್ತುತ. ಹಾಗಾಗಿ ಶಿಕ್ಷಣ ಇಲಾಖೆ ಸದ್ಯದಲ್ಲೆ ಸರ್ಕಾರ ನೇಮಕಾತಿಗೆ ಆದೇಶ ಹೊರಡಿಸಬೇಕು.
ಎಸ್​.ವಿ. ಸಂಕನೂರು, ವಿಧಾನ ಪರಿಷತ್​ ಸದಸ್ಯ
ಕೋಟ್​:
ಅನುದಾನಿತ ಶಿಕ್ಷಣ ಸಂಸ್ಥೆಗಳು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿವೆ. ಸರ್ಕಾರದಿಂದ ಆದಷ್ಟು ಬೇಗ ಆದೇಶ ಬಂದಲ್ಲಿ ನೇಮಕಾತಿಗೆ ಪ್ರಕ್ರಿಯೆ ಮುಗಿಸಬಹುದು.
ಅವಿನಾಶ ಸಾಲಿಮನಿ, ಶಿಕ್ಷಣ ತಜ್ಞ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net