ರಸಗೊಬ್ಬರಗಳ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ಬೆಳೆಗಳ ನಿರ್ವಹಣೆ ಕುರಿತು ಕಾರ್ಯಗಾರ

ಗದಗ ತಾಲೂಕಿನ ಹುಲಕೋಟಿ ಕೆವಿಕೆಯಲ್ಲಿ  ರಸಗೊಬ್ಬರಗಳ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ಬೆಳೆಗಳ ನಿರ್ವಹಣೆ ಕುರಿತು ಏರ್ಪಡಿಸಿದ್ದ ಕಾರ್ಯಗಾರವನ್ನು ಚೇತನಾ ಪಾಟೀಲ ಉದ್ಘಾಟಿಸಿದರು. ವೀರೇಂದ್ರಗೌಡ ಶಂಕರಗೌಡ ಪಾಟೀಲ, ಎನ್​. ಎಚ್​. ಭಂಡಿ, ಡಾ. ಗಿರೀಶ, ಪವಿತ್ರ ಓಗಣ್ಣನವರ, ವಿ. ಕೆ. ನಾಡಿಗೇರ, ಜಯಪ್ರಕಾಶ, ಎಂ. ಎಸ್​. ಕುಲಕಣಿರ್, ಶಿವಪ್ಪ ಸಿದ್ದಪ್ಪ ಅರಹುಣಸಿ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಸಹಯೋಗದಲ್ಲಿ ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ರಸಗೊಬ್ಬರಗಳ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ಬೆಳೆಗಳ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರ ಜರುಗಿತು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ರೈತರು ತಿಳಿದುಕೊಳ್ಳಬೇಕು ಮತ್ತು ಸದುಪಯೋಗ ಪಡೆದುಕೊಳ್ಳಬೇಕು. ಡಿಎಪಿ ರಸಗೊಬ್ಬರ ಸ್ವಲ್ಪ ಮಟ್ಟಿಗೆ ಕೊರತೆ ಇರುವುದರಿಂದ, ಕಾಂಪ್ಲೆಕ್ಸ್​ ಗೊಬ್ಬರಗಳ ಬಳಕೆ ಬಳಸಬೇಕು ಎಂದ ಅವರು, ಯೂರಿಯಾ ಬಳಕೆಯ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಭೂ ಲವತ್ತತೆ ಕಾಯ್ದುಕೊಳ್ಳಬೇಕು. ಬೆಳೆ ಸಮೀೆಯಲ್ಲಿ ಸರ್ವೆ ನಂಬರ್​ ಮ್ಯಾಪಿಂಗ್​ ಮತ್ತು ಹಿಸ್ಸಾ ಮ್ಯಾಪಿಂಗ್​ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುಧಾ ಮಂಕಣಿ ಮಾತನಾಡಿ, ರೈತರು ರಸಗೊಬ್ಬರಗಳ ಮೇಲೆ ಅವಲಂಬನೆ ಕಡಿಮೆ ಮಾಡಿ ಸಾವಯವ ಹಾಗೂ ನೈಸಗಿರ್ಕ ಕೃಷಿ ಮಾಡಬೇಕು ಎಂದು ತಿಳಿಸಿದರು.
ಕೃಷಿ ಸಮಾಜದ ಜಿಲ್ಲಾಧ್ಯ ವೀರೇಂದ್ರಗೌಡ ಶಂಕರಗೌಡ ಪಾಟೀಲ ಮಾತನಾಡಿ, ರಾಜ್ಯ ಕೃಷಿಕ ಸಮಾಜದ ಆಶಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ತಾಲೂಕು ಟಕಗಳಿಂದ ತಾಲೂಕು ಮಟ್ಟದಲ್ಲಿ ಆಯೋಜಿಸಬೇಕು ಹೇಳಿದರು.
ಕಾರ್ಯಗಾರದಲ್ಲಿ ತಾಂತ್ರಿಕ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎನ್​. ಎಚ್​. ಭಂಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ಗಿರೀಶ, ರೇಷ್ಮೆ ವಿಸ್ತರಣೆ ಅಧಿಕಾರಿ ಪವಿತ್ರ ಓಗಣ್ಣನವರ, ಪಶು ಸಂಗೋಪನೆ ಇಲಾಖೆಯ ವಿ. ಕೆ. ನಾಡಿಗೇರ, ರೋಣ ವಿಭಾಗದ ಉಪ ಕೃಷಿ ನಿರ್ದೇಶಕ ಜಯಪ್ರಕಾಶ, ಎಂ. ಎಸ್​. ಕುಲಕಣಿರ್, ಶಿವಪ್ಪ ಸಿದ್ದಪ್ಪ ಅರಹುಣಸಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net