ಕೃಷಿ ಇಲಾಖೆಯಿಂದ ಸಮೀಕ್ಷೆ ಸಾಕ್ಷರತಾ ಕಾರ್ಯಕ್ರಮ

  ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಭೂಸಮೀಾ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚೇತನಾ ಪಾಟೀಲ, ಪಾಲಾಕ್ಷಗೌಡ,  ಬಸವರಾಜ, ಅನ್ನಪೂರ್ಣ, ವಿಜಯಲಕ್ಷಿ$್ಮ ಜೋಗಿ, ಅಬ್ಬಿಗೇರಿ ಗ್ರಾಮದ ಪ್ರಗತಿಪರ ರೈತರು ಇತರರು ಇದ್ದರು.
ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಭೂಸಮೀಾ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚೇತನಾ ಪಾಟೀಲ, ಪಾಲಾಕ್ಷಗೌಡ, ಬಸವರಾಜ, ಅನ್ನಪೂರ್ಣ, ವಿಜಯಲಕ್ಷಿ$್ಮ ಜೋಗಿ, ಅಬ್ಬಿಗೇರಿ ಗ್ರಾಮದ ಪ್ರಗತಿಪರ ರೈತರು ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ನಾವು ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ, ಹಾಗೆಯೇ ನಮ್ಮ ಹೊಲದಲ್ಲಿನ ಮಣ್ಣನ್ನು ಕಾಪಾಡಿಕೊಳ್ಳಬೇಕು ಎಂದು ಜಂಟಿ- ಕೃಷಿ ನಿರ್ದೇಶಕಿ ಚೇತನ ಪಾಟೀಲ ಹೇಳಿದರು.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವ ಬ್ಯಾಂಕ್​ ನೆರವಿನ ರಿವಾರ್ಡ ಯೋಜನೆ ಅಡಿ ಹಮ್ಮಿಕೊಂಡಿದ್ದ ಭೂ ಸಂಪನ್ಮೂಲ ಸಮೀಕ್ಷೆ ಸಾಕ್ಷರತಾ ಅಭಿಯಾನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಮಣ್ಣು ಬಹಳ ಶ್ರೇಷ್ಠವಾಗಿದೆ. ಇವತ್ತಿನ ಫಲವತ್ತಾದ ಮಣ್ಣು ಕೋಟಿ ವರ್ಷಗಳಿಂದ ರೂಪುಗೊಂಡಿದ್ದು, ಅಂತಹ ಮಣ್ಣನ್ನು ಪರೀಕ್ಷಿಸಿ ಎಲ್​ಆರ್​ಐಕಾರ್ಡ ತಯಾರಿಸಲಾಗಿದೆ. ಕಾಡಿರ್ನಲ್ಲಿರುವ ಮಾಹಿತಿ ರೈತರಿಗೆ ಉಪಯುಕ್ತವಾಗಿದೆ. ರೈತರು ತಮ್ಮ ಹೊಲದ ಯಾವ ಪೋಷಕಾಂಶ ಎಷ್ಟು ಪ್ರಮಾಣದಲ್ಲಿದೆ, ಸೂಕ್ತವಾದ ಬೆಳೆ ಯಾವುದು ಎಂದು ಕಾಡಿರ್ನ ಮೂಲಕ ತಿಳಿಯಬಹುದು. ಕಡಿಮೆ ಇರುವ ಪೋಷಕಾಂಶವನ್ನು ಹೆಚ್ಚಿಸಿ ರೈತರು ಗೊಬ್ಬರಗಳನ್ನು ಉಪಯೋಗಿಸಬೇಕು. ಮುಖ್ಯವಾಗಿ ಸಾವಯುವ ಗೊಬ್ಬರಗಳನ್ನೇ ಉಪಯೋಗಿಸಿ ಮಣ್ಣನ್ನು ಕಾಪಾಡಬೇಕು ಎಂದರು.
ಉಪ ಕೃಷಿ ನಿರ್ದೇಶಕ ಪಾಲಾಕ್ಷಗೌಡ ಮಾತನಾಡಿ, ರಿವಾರ್ಡ ಯೋಜನೆ ಬಹಳಷ್ಟು ವೈಜ್ಞಾನಿಕ ಹಾಗೂ ಉಪಯುಕ್ತ ಮಾಹಿತಿಯನ್ನು ರೈತರಿಗೆ ನೀಡುತ್ತಿದೆ. ಈ ಮಾಹಿತಿಯನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಶೌಕತ್​ ಅಲಿ ತಹಸೀಲ್ದಾರ ಮಾತನಾಡಿ ಭೂ ಸಂಪನ್ಮೂಲ ಮಾಹಿತಿಯನ್ನು ಈಗಾಗಲೇ ರೈತರಿಗೆ ತರಬೇತಿ ಮೂಲಕ ನೀಡಲಾಗಿದ್ದು, ಕಾರ್ಡುಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ನೀಡಲು ಈಗ ಸಾಕ್ಷರತಾ ಅಭಿಯಾನ ಮಾಡಲಾಗುತ್ತಿದೆ. ರೈತರು ಈ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಕೃಷಿ ಅಧಿಕಾರಿ ಬಸವರಾಜ, ಅನ್ನಪೂರ್ಣ, ವಿಜಯಲಕ್ಷಿ$್ಮ ಜೋಗಿ, ಅಬ್ಬಿಗೇರಿ ಗ್ರಾಮದ ಪ್ರಗತಿಪರ ರೈತರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net