ಬೆಳಗಾವಿ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳು ಜಿಲ್ಲೆಯಲ್ಲಿ ರಿವಾರ್ಡ ಯೋಜನೆಯ ಕಾಮಗಾರಿಗಳ ಮೌಲ್ಯಮಾಪನ ನಡೆಸಿದರು. ಸ್ಫೂತಿರ್, ನಿರ್ದೇಶಕ ಮಲ್ಲಯ್ಯ ಕೊರವನವರ, ಬಸವರಾಜ, ಅಣ್ಣಾ ಸಾಹೇಬ ಚೌಗಲೇ, ಚನಗೌಡ ಪಾಟೀಲ, ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಯಲ್ಲಪ್ಪ ಕಲ್ಯಾಣಿ, ಶಿವಯ್ಯ ಮನಗೇನಿ ಇತರರು ಇದ್ದರು.
ಕೃಷಿ ಅಧಿಕಾರಿಗಳಿಂದ ನೀಲಗುಂದ ಉಪ ಜಲಾನಯನ ಪ್ರದೇಶಕ್ಕೆ ಭೇಟಿ
ವಿಜಯವಾಣಿ ಸುದ್ದಿಜಾಲ ಗದಗ
ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ ಯೋಜನೆಯಡಿ ಜಿಲ್ಲೆಯಲ್ಲಿ ನಡೆದ ವಿವಿಧ ಕಾಮಗರಿಗಳ ಮೌಲ್ಯಮಾಪನವನ್ನು ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ತಾಲೂಕಿನ ನೀಲಗುಂದ ಉಪ ಜಲಾನಯನ ವ್ಯಾಪ್ತಿಯ ಪ್ರದೇಶಕ್ಕೆ ಭೇಟಿ ಯೋಜನೆಯಡಿಯಲ್ಲಿ ನಡೆದ ಕಾಮಗರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ನಾಲಾ ರಿವಿಟ್ ಮೆಂಟ್, ನಾಲಾ ಸ್ಥೀರಿರಿಕರಣ, ಕೋಡಿ ನಿರ್ಮಾಣ, ಚೆಕ್ ಡ್ಯಾಮ್, ಗೋಕಟ್ಟೆ ಸೇರಿದಂತೆ ಮಣ್ಣು ಮತ್ತು ನೀರು ಸಂರಕ್ಷಣೆ ಘಟಕದ ಹಲವು ಕಾಮಗರಿಗಳನ್ನು ಪರೀಶಿಲನೆ ಮಾಡಿದರು. ಅರಣ್ಯ ಮತ್ತು ತೋಟಗಾರಿಕೆ ಟಕದಲ್ಲಿ ನೆಡಲಾದ ಹಲವಾರು ಸಸಿಗಳು ಹಾಗೂ ಸಾಂಸ್ಥಿಕ ನೆಡುತೋಪು ವೀಕ್ಷಣೆ ಮಾಡಿದರು.
ಕ್ಷೇತ್ರ ಭೇಟಿಯ ನಂತರ ಮುಳಗುಂದ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಮಠದ ಸಭಾಭವನದಲ್ಲಿ ಸಭೆ ನಡೆಸಿದರು. ಚಿಕ್ಕೂಡಿಯ ಉಪ ಕೃಷಿ ನಿರ್ದೇಶಕ ಸಹದೇವ ಯರಗೋಪ್ಪ ಮಾತನಾಡಿ ಇಲಾಖೆಯ ಯೋಜನೆಗಳು ಯಶಸ್ವಿ ಆಗುವುದು ರೈತರ ಸಹಭಾಗಿತ್ವ ಇದ್ದಾಗ ಮಾತ್ರ ಸಾಧ್ಯ. ನೀಲಗುಂದ ಉಪ ಜಲಾನಯನ ವ್ಯಾಪ್ತಿಯಲ್ಲಿ ರಿವಾರ್ಡ ಯೋಜನೆ ಅಡಿ ಕಾಮಗಾರಿಗಳು ಉತ್ತಮ ರೀತಿಯಲ್ಲಿ ಅನುಷ್ಠಾನ ಗೊಂಡಿವೆ. ಈ ಭಾಗದ ರೈತರು ಬಹಳ ಉತ್ಸಾಹದಿಂದ ಆಸಕ್ತಿಯಿಂದ ಯೋಜನೆಯನ್ನು ಸದುಪಯೋಗ ಮಾಡಿಕೊಂಡಿದ್ದಾರೆ ಎಂದರು.
ಗದಗ ಉಪ ಕೃಷಿ ನಿರ್ದೇಶಕಿ ಸ್ಫೂತಿರ್, ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ, ಬಸವರಾಜ, ಅಣ್ಣಾ ಸಾಹೇಬ ಚೌಗಲೇ, ಚನಗೌಡ ಪಾಟೀಲ, ದೇವಪ್ಪ ಅಣ್ಣಿಗೇರಿ, ಬಸವರಾಜ ಕರಿಗಾರ, ಯಲ್ಲಪ್ಪ ಕಲ್ಯಾಣಿ, ಶಿವಯ್ಯ ಮನಗೇನಿ, ಚಂದ್ರಶೇಖರ ಜಕ್ಕಮ್ಮನವರ ಇತರರು ಇದ್ದರು.