ಯುರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ: ಚೇತನಾ ಪಾಟೀಲ

ಗದಗ ಕೃಷಿ ಸಂಶೋಧನಾ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ವಿತರಣೆ ಕುರಿತು ಸಭೆ ಕುರಿತು ಸಭೆ ಜರುಗಿತು. ಕೃಷಿ ಪಾಟೀಲ,  ಸೌಮ್ಯ, ರಾಜೇಶ್ವರಿ, ಬಸವರಾಜೇಶ್ವರಿ, ಸ್ಪೂಥಿರ್ ಜಿ.ಎಸ್​, ಮೇನಾ ನಾಡಗೀರ, ಕಲಾವತಿ, ಪ್ರಕಾಶ ಕಗದಾಳ, ತಾಲೂಕಿನ ಖಾಸಗಿ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂದ ಸದಸ್ಯರು, ರೈತ ಉತ್ಪಾದಕ ಕಂಪನಿಗಳು ಇದ್ದರು.
ಗದಗ ಕೃಷಿ ಸಂಶೋಧನಾ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ವಿತರಣೆ ಕುರಿತು ಸಭೆ ಕುರಿತು ಸಭೆ ಜರುಗಿತು. ಕೃಷಿ ಪಾಟೀಲ, ಸೌಮ್ಯ, ರಾಜೇಶ್ವರಿ, ಬಸವರಾಜೇಶ್ವರಿ, ಸ್ಪೂಥಿರ್ ಜಿ.ಎಸ್​, ಮೇನಾ ನಾಡಗೀರ, ಕಲಾವತಿ, ಪ್ರಕಾಶ ಕಗದಾಳ, ತಾಲೂಕಿನ ಖಾಸಗಿ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂದ ಸದಸ್ಯರು, ರೈತ ಉತ್ಪಾದಕ ಕಂಪನಿಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಮುಂಗಾರು ಪೂರ್ವ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ಯುರಿಯಾ ವಿತರಣಾ ತಂತ್ರಾಂಶದ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ರಸಗೊಬ್ಬರ ಖರೀದಿಸಲು ಎಪ್​ಐಡಿ ಸಂಖ್ಯೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ತಮ್ಮ ಎಲ್ಲಾ ಜಮೀನುಗಳನ್ನು ಸಹ ಎಪ್​ಐಡಿಗೆ ಕಡ್ಡಾಯವಾಗಿ ಜೋಡಿಸಿರಬೇಕು. ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರೈತನ ಹಿಡುವಳಿ ಹಾಗೂ ಬೆಳೆ ಆಧಾರದ ಮೇಲೆ ರಸಗೊಬ್ಬರವನ್ನು ಕೆ&ಕಿಸಾನ್​ ತಂತ್ರಜ್ಞಾನ ಮೂಲಕವೇ ವಿತರಣೆ ಮಾಡಲಾಗುವುದು ಎಂದರು.
ತಂತ್ರಜ್ಞಾನ ಮೂಲಕ ರಸಗೊಬ್ಬರ ವಿತರಣೆಯಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲು ಹಾಗೂ ರೈತರು ಅನವಶ್ಯಕವಾಗಿ ಹೆಚ್ಚುವರಿ ರಸಗೊಬ್ಬರ ಬಳಸದಂತೆ ನಿಯಂತ್ರಿಸಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಪ್ರತಿಯೊಬ್ಬ ರಸಗೊಬ್ಬರ ವ್ಯಾಪಾರಸ್ಥರು ಒಬ್ಬ ಕೃಷಿ ವಿಜ್ಞಾನಿಯಂತೆ ರೈತರಿಗೆ ತಿಳುವಳಿಕೆ ನೀಡಿ ದ್ರವ ರೂಪದ ರಸಗೊಬ್ಬರಗಳನ್ನು ಹಾಗೂ ಕಾಂಪ್ಲೆಕ್ಸ್​ ರೂಪದ ರಸಗೊಬ್ಬರಗಳನ್ನು ಬಳಸಲು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ನಿಗದಿಪಡಿಸಿದ ಬೆಲೆೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ, ರಸಗೊಬ್ಬರದ ದರ ಹಾಗೂ ದಾಸ್ತಾನನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಪ್ರದಶಿರ್ಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಚೇತನಾ ಪಾಟೀಲ, ನಿಯಮ ತಪ್ಪಿದ್ದಲ್ಲಿ ಪರವಾನಿಗೆ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಮಾತನಾಡಿ, ಈ ಹಿಂದಿನ 2025ರ ಮುಂಗಾರು ಹಂಗಾಮಿನ ಅತೀವೃಷ್ಟಿ ಸಮಯದಲ್ಲಿ ರಸಗೊಬ್ಬರಗಳ ಅಧಿಕ ಬೇಡಿಕೆ ಎದುರಾದಾಗ ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಇಲಾಖೆಯೊಂದಿಗೆ ಸಹಕರಿಸಿ ಪರಸ್ಥಿತಿ ನಿಭಾಯಿಸಲು ಸಹಕಾರ ನೀಡಿದ್ದಾರೆ. ಪ್ರಸಕ್ತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುಧ್ಧಗಳ ಪರಿಣಾಮವಾಗಿ ರಸಗೊಬ್ಬರ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯೆಯವಾಗುವ ಸಾಧ್ಯತೆ ಇದೆ. ಕೃಷಿ ಇಲಾಖೆಯು ಗೊಬ್ಬರ ತಯಾರಿಕಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ತಾಲೂಕಿನ ರೈತರಿಗೆ ಗೊಬ್ಬರ ಸಿಗುವಂತೆ ಪ್ರಯತ್ನಿಸುತ್ತಿದೆ. ತಾಲೂಕಿನ ರಸಗೊಬ್ಬರ ವ್ಯಾಪಾರಸ್ಥರು ಈ ಹಂಗಾಮಿನಲ್ಲಿಯೂ ತಮಗೆ ಲಭ್ಯವಿರುವ ರಸಗೊಬ್ಬರವನ್ನು, ವಿಶೇಷವಾಗಿ ಯುರಿಯಾ ಗೊಬ್ಬರವನ್ನು ಎಫ್​ಐಡಿ ಆಧಾರಿತ ಯುರಿಯಾ ವಿತರಣಾ ತಂತ್ರಾಂಶವನ್ನು ಬಳಸಿ, ಪಿಓಸ್​ ಮಶೀನ್​ ಮೂಲಕ ರೈತರ ದಾಖಲೆಗಳ ಅನ್ವಯ ನಿಧಿರ್ಷ್ಟ ಮಿತಿಯಲ್ಲಿ ವಿತರಿಸಬೇಕು ಎಂದರು.
ರಸಗೊಬ್ಬರ ವ್ಯಾಪಾರಸ್ಥರ ಸಂದ ಕಾರ್ಯದಶಿರ್ ಸಂಜಯ ರೊದ್ದಂ ಮಾತನಾಡಿ, ಕೃಷಿ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಎಲ್ಲ ವಿತರಕರು ರೈತರ ಹಿತ ಕಾಯುವಲ್ಲಿ ಇಲಾಖೆಗೆ ಸಹಕರಿಸುವುದಾಗಿ ತಿಳಿಸಿದರು.
ಇಲಾಖೆಯ ಕೃಷಿ ಅಧಿಕಾರಿ ಸೌಮ್ಯ, ರಾಜೇಶ್ವರಿ ಹಾಗೂ ಬಸವರಾಜೇಶ್ವರಿ ಯುರಿಯಾ ವಿತರಣೆ ತಂತ್ರಾಶದ ಬಗ್ಗೆ ರಸಗೊಬ್ಬರ ಮಾರಾಟಗಾರರಿಗೆ ವಿವರಿಸಿದರು. ಉಪ ಕೃಷಿ ನಿರ್ದೇಶಕಿ ಸ್ಪೂಥಿರ್ ಜಿ.ಎಸ್​, ಜಿಲ್ಲಾ ವಿಚಕ್ಷಣಾ ಅಧಿಕಾರಿ ಮೇನಾ ನಾಡಗೀರ, ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿ ಕಲಾವತಿ ಹಾಗೂ ಕೃಷಿಪರಿಕರ ಮಾರಾಟಗಾರರ ಸಂದ ಉಪಾಧ್ಯಕ್ಷ ಪ್ರಕಾಶ ಕಗದಾಳ, ತಾಲೂಕಿನ ಖಾಸಗಿ ಕೃಷಿ ಪರಿಕರ ಮಾರಾಟಗಾರರು, ಕೃಷಿ ಪತ್ತಿನ ಸಹಕಾರಿ ಸಂದ ಸದಸ್ಯರು, ರೈತ ಉತ್ಪಾದಕ ಕಂಪನಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net