ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಜನಪದೀಯರದು: ಡಾ. ರಾಜೇಂದ್ರ ಗಡಾದ

ಗದಗ ಅಡವೀಂದ್ರಸ್ವಾಮೀ ಮಠದಲ್ಲಿ ಏರ್ಪಡಿಸಿದ್ದ ದೊಡ್ಡಾಟ ಕಾರ್ಯಕ್ರಮದಲ್ಲಿ ರಾಜೇಂದ್ರ ಗಡಾದ ಮಾತನಾಡಿದರು. ಮಹೇಶ್ವರಿ ಸ್ವಾಮೀಗಳು, ಬಿ. ಬಿ. ಬಣ್ಣದ, ಅಶೋಕ ಬಣ್ಣದ, ಜಿ. ಎಂ. ಯಾನಮಶೆಟ್ಟಿ, ಬಿ. ಎಂ. ಬಿಳೆಯಲಿ ಇತರರು ಇದ್ದರು.
ಗದಗ ಅಡವೀಂದ್ರಸ್ವಾಮೀ ಮಠದಲ್ಲಿ ಏರ್ಪಡಿಸಿದ್ದ ದೊಡ್ಡಾಟ ಕಾರ್ಯಕ್ರಮದಲ್ಲಿ ರಾಜೇಂದ್ರ ಗಡಾದ ಮಾತನಾಡಿದರು. ಮಹೇಶ್ವರಿ ಸ್ವಾಮೀಗಳು, ಬಿ. ಬಿ. ಬಣ್ಣದ, ಅಶೋಕ ಬಣ್ಣದ, ಜಿ. ಎಂ. ಯಾನಮಶೆಟ್ಟಿ, ಬಿ. ಎಂ. ಬಿಳೆಯಲಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ಕಾಲಗತಿಯನ್ನು ಮೀರಿದ ಸತ್ವವನ್ನು ಮೈಗೂಡಿಸಿಕೊಂಡ ದೊಡ್ಡಾಟ, ಸಣ್ಣಾಟ, ತೊಗಲು ಗೊಂಬೆಯಾಟದಂತಹ ಜನಪದ ಕಲೆಗಳನ್ನು ನಮ್ಮ ಜನಪದೀಯರು ಆತ್ಮೀಯತೆ, ನಂಬಿಕೆ, ಭಾವನಾತ್ಮಕತೆಯಿಂದ ತಲೆಮಾರಿನಿಂದ ತಲೆಮಾರಿಗೆ ಉಳಿಸಿ, ಬೆಳೆಸಿಕೊಂಡು ಬಂದಿರುವುದು ನಮ್ಮ ಜನಪದ ಸಾಂಸತಿಕ ಪರಂಪರೆಗೆ ಸಾಯಾಗಿದೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯ ಡಾ. ರಾಜೇಂದ್ರ ಗಡಾದ ಹೇಳಿದರು.
ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಬೆಟಗೇರಿಯ ಬಿ.ಬಿ. ಬಣ್ಣದ ಜನಪದ ಕಲಾ ಮೇಳ, ಕನ್ನಡ ಮತ್ತು ಸಂಸತಿ ನಿರ್ದೇಶನಾಲಯ ಸಹಯೋಗದಲ್ಲಿ ಜರುಗಿದ ಶ್ರೀದೇವಿ ಮಹಾತ್ಮೆ ದೊಡ್ಡಾಟ ಪ್ರದರ್ಶನ ಸಮಾರಂಭಕ್ಕೆ ಮದ್ದಳೆ ಭಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜಾಗತೀಕರಣ, ನಗರೀಕರಣ, ಕೈಗಾರೀಕರಣದಿಂದಾಗಿ ದೊಡ್ಡಾಟ ಸೇರಿದಂತೆ ಅನೇಕ ಜನಪದ ಕಲೆಗಳು ನಶಿಸುತ್ತಿವೆ. ಇವುಗಳ ಪ್ರಭಾವದಿಂದ ಕೆಲವೊಂದು ಮೂಲ ಕಲೆಗಳು ಬದಲಾವಣೆ ಗೊಳ್ಳುತ್ತಿವೆ. ಕಲೆಯ ಕಲಾತಂಡಗಳು ವಿರಳವಾಗುತ್ತಿವೆ. ಹೀಗೆ ಣಿಸುತ್ತಿರುವ ಕಲಾತಂಡಗಳನ್ನು, ಕಲಾವಿದರನ್ನು ಉತ್ತೇಜಿಸಿ, ಪ್ರೋತ್ಸಾಹಿಸಿ ಅವುಗಳನ್ನು ಬದುಕಿಸಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಜನಪದೀಯರದಾಗಿದೆ ಎಂದರು.
ಉತ್ತರ ಕರ್ನಾಟಕದ ಜನಪದರಂಗ ಕಲೆಗಳಲ್ಲಿಯೇ ವೈವಿಧ್ಯಮಯವಾದ ರಂಗಕಲೆಯು ದೊಡ್ಡಾಟವಾಗಿದೆ. ಭವ್ಯವಾದ ರಂಗಸಜ್ಜಿಕೆ, ವಿರೋಚಿತವಾದ ಕುಣಿತಗಳು, ಕಿವಿಗಡಚಿಕ್ಕುವ ಸಂಗೀತ, ವರ್ಣರಂಜಿತ ವೇಷಭೂಷಣ, ಕಾಳಗವೇ ಪ್ರಮುಖವಾದ ಕಥಾವಸ್ತು ಆಗಿರುತ್ತವೆ. ವೀರರೌದ್ರಗಳೇ ಪ್ರಧಾನವಾಗಿರುವ ಈ ದೊಡ್ಡಾಟ, ರಂಗಕಲೆ ನಮ್ಮ ಭಾಗದ ಜನಪ್ರಿಯ ಕಲೆಯಾಗಿದೆ. ಈ ಹಿಂದೆ ರಾತ್ರಿ ಪ್ರಾರಂಭವಾಗಿ ಬೆಳಕು ಹರಿಯುವವರೆಗೂ ನಡೆಯುತ್ತಿದ್ದ ದೊಡ್ಡಾಟಗಳೂ ಸಹ ಈಗ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿ, ಒಂದು, ಎರಡೂ ಗಂಟೆಗಳಲ್ಲಿ ಮುಗಿಯುವಂತ ಕಥಾವಸ್ತು ಹೊಂದಿರುತ್ತವೆ. ಇಂತಹ ಕಲೆಗಳನ್ನು ಯುವ ಪೀಳಿಗೆ, ಮಕ್ಕಳು ನೋಡಿ ಆನಂದಿಸಬೇಕು ಎಂದು ಡಾ.ರಾಜೇಂದ್ರ ಗಡಾದ ಹೇಳಿದರು.
ಅಡವೀಂದ್ರಸ್ವಾಮಿ ಮಠದ ದಸರಾ ಮಹೋತ್ಸವ ಸಮಿತಿ ಅಧ್ಯ ಸುವರ್ಣ ಮದರಿಮಠ ಮಾತನಾಡಿ, ರಂಗಕಲೆಗಳಲ್ಲಿ ತುಂಬಾ ವಿಶಿಷ್ಟವಾದ ದೊಡ್ಡಾಟ ಕಲೆ ಗದಗ ಬೆಟಗೇರಿ ಭಾಗದಲ್ಲಿ ಇನ್ನೂ ಉಳಿದಿರುವುದು ನಮ್ಮ ಜಿಲ್ಲೆಯ ವಿಶೇಷ. ಇದನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸೋಣ ಎಂದರು.
ಮಠದ ಧರ್ಮದಶಿರ್ ಮಹೇಶ್ವರ ಸ್ವಾಮಿಗಳು ಮಾತನಾಡಿ, ಮೈಸೂರು ಅರಸರ ಕಲಾ ಪ್ರೇಮ ಬಹಳ ಅನುಪಮ. ರಾಜ ಮಹಾರಾಜರಿಂದ ನಾಡಿನ ಮಠಮಾನ್ಯಗಳಿಂದ ಜನಪದ ಕಲೆಗಳು ಪೋಷಿಸಿಕೊಂಡು ಬಂದ ಇತಿಹಾಸ ನಮ್ಮದಾಗಿದೆ. ಜನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರ ನಡೆಯಬೇಕು ಎಂದರು.
ಅಧ್ಯತೆ ವಹಿಸಿದ್ದ ಬಿ. ಬಿ. ಬಣ್ಣದ, ಜನಪದ ಕಲಾ ಮೇಳದ ಅಧ್ಯ ಅಶೋಕ ಬಣ್ಣದ, ಜಿ. ಎಂ. ಯಾನಮಶೆಟ್ಟಿ, ಬಿ. ಎಂ. ಬಿಳೆಯಲಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net